ಕೋಲ್ಕತ್ತಾ: ಒಂದು ಕಡೆ ಭಯೋತ್ಪಾದಕ ಘಟನೆಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ  (Jammu Kashmir) ವಾತಾವರಣವನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತೊಂದು ದೊಡ್ಡ ಸಂಚು ಮಾಡುತ್ತಿದೆ. ಈ ಪಿತೂರಿಯ ಅಡಿಯಲ್ಲಿ, ಅಸ್ಸಾಂನ ಸೇನಾ ಪ್ರದೇಶಗಳು ಭಯೋತ್ಪಾದಕರ ಗುರಿಯಲ್ಲಿದೆ. ಇದರೊಂದಿಗೆ,  ಆರ್‌ಎಸ್‌ಎಸ್ (RSS)  ನಾಯಕರ ಮೇಲೂ ಭಯೋತ್ಪಾದಕರು ಕಣ್ಣಿಟ್ಟಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.


COMMERCIAL BREAK
SCROLL TO CONTINUE READING

ಸ್ಫೋಟಕ್ಕೆ ಸಂಚು ರೂಪಿಸಿರುವ ISI :
ಮಾಹಿತಿಯ ಪ್ರಕಾರ, ಅಕ್ಟೋಬರ್ 16 ರಂದು, ಅಸ್ಸಾಂ ಪೋಲಿಸ್ ಒಂದು ಇಂಟೆಲ್ ವರದಿಯನ್ನು ಸ್ವೀಕರಿಸಿದೆ. ಈ ವರದಿಯ ಪ್ರಕಾರ, ಐಎಸ್ಐ (ISI)  ಆರ್‌ಎಸ್‌ಎಸ್ (RSS) ನಾಯಕರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಲು ಸಂಚು ರೂಪಿಸುತ್ತಿದೆ. ಇದಲ್ಲದೇ, ಸೇನೆಯ ಪ್ರದೇಶಗಳು ಕೂಡ ಐಎಸ್ಐ ಗುರಿಯಲ್ಲಿದೆ. ಈ ಇಂಟೆಲ್ ವರದಿಯಲ್ಲಿ ಐಇಡಿ  (IED) ಸ್ಫೋಟಿಸಲು ಐಎಸ್ಐ  ಸಂಚು ರೂಪಿಸುತ್ತಿದೆ ಎಂದು ಹೇಳಲಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಐಎಸ್‌ಐ ಸ್ಫೋಟಿಸಲು ಪ್ರಯತ್ನಿಸುತ್ತಿದೆ. ಇದಲ್ಲದೇ ಧಾರ್ಮಿಕ ಸ್ಥಳಗಳು ಕೂಡ ಭಯೋತ್ಪಾದಕರ ಗುರಿಯಲ್ಲಿದೆ ಎಂದೂ ಕೂಡ ಮಾಹಿತಿ ಲಭ್ಯವಾಗಿದೆ. ಅದಾಗ್ಯೂ, ಈ ಬಗ್ಗೆ ಪೊಲೀಸರು ಅಧಿಕೃತವಾಗಿ ಏನನ್ನೂ ಹೇಳಿಲ್ಲ, ಆದರೆ ಭದ್ರತಾ ವ್ಯವಸ್ಥೆಗಳ ದೃಷ್ಟಿಯಿಂದ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಲಾಗಿದೆ. 


ಇದನ್ನೂ ಓದಿ- Kulgam Terrorist Attack: ಸತತ ಎರಡನೇ ದಿನ ಹೇಡಿತನ ಮೆರೆದ ಉಗ್ರರು, ಕಾಶ್ಮೀರಿಗಳಲ್ಲದೆ ಕಾರ್ಮಿಕರ ಮನೆ ನುಗ್ಗಿ ಮೂವರ ಮೇಲೆ ಗುಂಡಿನ ಸುರಿಮಳೆ


ಸೈನ್ಯದ ಕ್ರಮದಿಂದ ದಿಗ್ಭ್ರಮೆಗೊಂಡ ಪಾಕಿಸ್ತಾನ:
ವಾಸ್ತವವಾಗಿ, ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಸೇನೆಯ ಕ್ರಮದಿಂದ ಪಾಕಿಸ್ತಾನ  (Pakistan) ದಿಗ್ಭ್ರಮೆಗೊಂಡಿದೆ. ಅದಕ್ಕಾಗಿಯೇ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದಕರು ನಾಗರಿಕರನ್ನು, ಕಾಶ್ಮೀರರಲ್ಲದವರನ್ನು ಮತ್ತು ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡಿದ್ದಾರೆ. 2021 ರಲ್ಲಿ ಭಯೋತ್ಪಾದಕರು ಕಣಿವೆಯಲ್ಲಿ 30 ನಾಗರಿಕರನ್ನು ಕೊಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ನಾಗರಿಕ ಹತ್ಯೆಗಳ ನಂತರ ಇಲ್ಲಿಯವರೆಗೆ 9 ಎನ್ಕೌಂಟರ್ಗಳಲ್ಲಿ 13 ಭಯೋತ್ಪಾದಕರನ್ನು ಕೊಲ್ಲಲಾಗಿದೆ.


ಇದನ್ನೂ ಓದಿ- ಮೊದಲ ಬಾರಿಗೆ ಶೂನ್ಯ ಕೋವಿಡ್ -19 ಸಾವನ್ನು ದಾಖಲಿಸಿದ ಮುಂಬೈ


ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಹೇಡಿ ಕೃತ್ಯ:
ಪಾಕಿಸ್ತಾನದ  (Pakistan) ಆಜ್ಞೆಯ ಮೇರೆಗೆ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸಿ ಕೊಲೆ ಮಾಡುವ ಹೊಸ ತಂತ್ರವನ್ನು ಅನುಸರಿಸುತ್ತಿದ್ದಾರೆ. ಶ್ರೀನಗರದಲ್ಲಿ ಶನಿವಾರ ನಡೆದ ಗೋಲ್ಗಪ್ಪ ಮಾರಾಟಗಾರನ ಹತ್ಯೆ ಇಂತಹ 8 ನೇ ಘಟನೆಯಾಗಿದೆ. ಭಾನುವಾರವೂ ಭಯೋತ್ಪಾದಕರು ಹೇಡಿಗಳ ಕೃತ್ಯ ನಡೆಸಿದ್ದಾರೆ. ಕುಲ್ಗಾಂನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಇಬ್ಬರು ಕಾಶ್ಮೀರರಲ್ಲದ ಕಾರ್ಮಿಕರು ಸಾವನ್ನಪ್ಪಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ