Kulgam Terrorist Attack - ಜಮ್ಮು ಮತ್ತು ಕಾಶ್ಮೀರದಲ್ಲಿ,(Jammu And Kashmir) ಅಮಾಯಕ ನಾಗರಿಕರನ್ನು ಭಯೋತ್ಪಾದಕರು ಗುರಿಯಾಗಿಸುವ ಪ್ರಕ್ರಿಯೆ ಮುಂದುವರೆದಿದೆ. ಭಾನುವಾರ, ಭಯೋತ್ಪಾದಕರು (Terror Attack) ಕುಲ್ಗಾಮ್‌ನ ವಾನ್‌ಪೋಹ್ ಪ್ರದೇಶದಲ್ಲಿನ ಮನೆಗೆ ನುಗ್ಗಿ ಕಾರ್ಮಿಕರ (Non-Kashmiri Laborers)ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಕಾಶ್ಮೀರಿಗಳಲ್ಲದ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಘಟನೆಯ ನಂತರ, ಪೊಲೀಸರು ಮತ್ತು ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದಾರೆ.
J&K: Two non-local labourers killed and one injured after being fired upon by terrorists at Wanpoh area of Kulgam. Police & Security Forces cordoned off the area. Details awaited. pic.twitter.com/52H4vgOFCe
— ANI (@ANI) October 17, 2021
ಭಯೋತ್ಪಾದಕರು ಹಲ್ಲೆ (Terrorist Attack) ನಡೆಸಿರುವ ಮೂವರು ಕಾರ್ಮಿಕರು ಬಿಹಾರದ ನಿವಾಸಿಗಳು ಎಂದು ಸಿಐಡಿ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ. ಮೂವರಲ್ಲಿ ಇಬ್ಬರು ರಾಜಾ ರೇಶಿ ದೇವ್ ಮತ್ತು ಜೋಗಿಂದರ್ ರೇಶಿ ದೇವ್ ಸಾವನ್ನಪ್ಪಿದ್ದರೆ, ಒಬ್ಬ ಚುಂಚುನ್ ರೇಶಿ ದೇವ್ ಗಾಯಗೊಂಡಿದ್ದಾರೆ. ಸ್ಥಳೀಯರಲ್ಲದ ಕಾರ್ಮಿಕರನ್ನು ಭಯೋತ್ಪಾದಕರು ಗುರಿಯಾಗಿರಿಸಿರುವುದು ಇದು ಸತತ ಎರಡನೇ ದಿನ ಎಂಬುದು ಇಲ್ಲಿ ಉಲ್ಲೇಖನೀಯ . ಈ ಎರಡು ದಿನಗಳಲ್ಲಿ ಒಟ್ಟು ನಾಲ್ಕು ಕಾಶ್ಮೀರರಲ್ಲದ ಕಾರ್ಮಿಕರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
J&K: Two non-Kashmiri labourers, all of them being residents of Bihar, killed and one injured after being fired upon by terrorists at Wanpoh area of Kulgam. Police & Security Forces cordoned off the area.
Visuals from the spot.
(Visuals deferred by unspecified time) pic.twitter.com/t7QSrKTqJz
— ANI (@ANI) October 17, 2021
ಇದಕ್ಕೂ ಮೊದಲು ಶನಿವಾರ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸ್ಥಳೀಯರಲ್ಲದವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ, ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ಸಂಜೆ ಬಿಹಾರದ ಬಂಕಾ ಜಿಲ್ಲೆಯ ಅರವಿಂದ್ ಕುಮಾರ್ ಸಾಹ್ (30) ಅವರ ಮೇಲೆ ಶ್ರೀನಗರದ ಈದ್ಗಾ ಬಳಿಯ ಪಾರ್ಕ್ ಹೊರಗೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದರು.
ಪಾನಿಪುರಿ ಅಂಗಡಿಯ ಬಳಿಯೇ ಗುಂಡಿಕ್ಕಿ ಹತ್ಯೆ
ಸಾಹ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸಾಹ್ ಶ್ರೀನಗರದಲ್ಲಿ ಪಾನಿಪುರಿ ಮಾರುತ್ತಿದ್ದರು ಮತ್ತು ಬಿಹಾರದಲ್ಲಿ ಇರುವ ಕುಟುಂಬವನ್ನು ಬಡತನದಿಂದ ಮೇಲಕ್ಕೆತ್ತುವುದು ಅವರ ಕನಸಾಗಿತ್ತು. ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಪ್ರಕಾರ ಪಿಸ್ತೂಲ್ ಹೊದಿದ್ದ ಭಯೋತ್ಪಾದಕ ಸಾಹನ ಬಂಡಿಯನ್ನು ನಿಲ್ಲಿಸಿ ಹತ್ತಿರದಿಂದ ಆತನ ಮೇಲೆ ಗುಂಡು ಹಾರಿಸಿದ್ದು, ಸಾಹ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ-ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಕಾಳಗದಲ್ಲಿ ಜೈಶ್ ಕಮಾಂಡರ್ ಶಮಾಮ್ ಸೋಫಿ ಹತ್ಯೆ
ಘಟನೆಗಳಲ್ಲಿ ಕಾಶ್ಮೀರಿಗಳು ಶಾಮೀಲಾಗಿಲ್ಲ - ಒಮರ್ ಅಬ್ದುಲ್ಲಾ
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಭಾನುವಾರ ಕೇಂದ್ರಾಡಳಿತ ಪ್ರದೇಶದಲ್ಲಿ ಜನರನ್ನು ಹತ್ಯೆಗೈದ ಘಟನೆಗಳಲ್ಲಿ ಕಾಶ್ಮೀರಿಗಳು ಭಾಗಿಯಾಗಿಲ್ಲ ಮತ್ತು ಈ ದಾಳಿಗಳನ್ನು ಕಾಶ್ಮೀರಿಗಳ ಮಾನಹಾನಿ ಮಾಡುವ ಸಂಚು ಎಂದು ಹೇಳಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಶಾಂತಿಯುತ ವಾತಾವರಣಕ್ಕೆ ಭಂಗ ತರುವ ಪ್ರಯತ್ನ ಎಂದು ಅವರು ಈ ಘಟನೆಗಳನ್ನು ಖಂಡಿಸಿದ್ದಾರೆ. ಈ ಕೊಲೆಗಳು ದುರದೃಷ್ಟಕರ ಮತ್ತು ಪಿತೂರಿಯ ಭಾಗವಾಗಿ ಮಾಡಲಾಗಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಕಾಶ್ಮೀರಿಗಳು ಈ ಹತ್ಯೆಗಳಲ್ಲಿ ಭಾಗಿಯಾಗಿಲ್ಲ. ಇದು ಕಾಶ್ಮೀರಿಗಳ ಮಾನಹಾನಿ ಮಾಡುವ ಸಂಚು ಎಂದು ಅವರು ಪುನರುಚ್ಚರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ