ISRO: ನಭೋ ಮಂಡಲದಲ್ಲಿ ಇಸ್ರೋ: GSLV-F12 ಮೂಲಕ ನ್ಯಾವಿಗೇಶನ್ ಉಪಗ್ರಹ ಯಶಸ್ವಿ ಉಡಾವಣೆ
ISRO NavIC: ನಾವಿಕ್ ಜಿಪಿಎಸ್ ವ್ಯವಸ್ಥೆಯನ್ನು ಹೋಲುವ, ಒಂದು ದೇಶೀಯವಾಗಿ ಅಭಿವೃದ್ಧಿ ಪಡಿಸಲಾದ ಪ್ರಾದೇಶಿಕ ಉಪಗ್ರಹ ನ್ಯಾವಿಗೇಶನ್ ವ್ಯವಸ್ಥೆಯಾಗಿದ್ದು, ಭಾರತದೊಳಗೆ ಅತ್ಯಂತ ನಿಖರವಾದ ಮತ್ತು ಕ್ಷಣ ಕ್ಷಣದ ನ್ಯಾವಿಗೇಶನ್ ವ್ಯವಸ್ಥೆಯನ್ನು ಒದಗಿಸುತ್ತದೆ. ನಾವಿಕ್ ಸಂಕೇತಗಳನ್ನು ಪಡೆಯುವ ಮೂಲಕ ಬಳಕೆದಾರರು ಅತ್ಯಂತ ನಿಖರವಾದ ಪೊಸಿಷನಿಂಗ್ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
ISRO NavIC: ಮೇ 29, ಸೋಮವಾರದಂದು ಇಸ್ರೋ ಒಂದು ಆಸಕ್ತಿಕರ ಉಡಾವಣೆ ಪೂರ್ಣಗೊಳಿಸಿದೆ. ಇಸ್ರೋ ಜಿಎಸ್ಎಲ್‌ವಿ - ಎಫ್ 12 ರಾಕೆಟ್ ಮೂಲಕ ತನ್ನ ನ್ಯಾವಿಗೇಶನ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ನಿರ್ಧರಿತ ಸಮಯವಾದ ಬೆಳಗ್ಗೆ 10:42ಕ್ಕೆ ಎರಡನೇ ತಲೆಮಾರಿನ ನ್ಯಾವಿಗೇಶನ್ ಉಪಗ್ರಹವಾದ ಎನ್‌ವಿಎಸ್-01 ಅನ್ನು ಆಂಧ್ರಪ್ರದೇಶದ, ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ವೇದಿಕೆಯಿಂದ ಉಡಾವಣೆಗೊಳಿಸಲಾಯಿತು. ಎಲ್ಲರೂ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ಈ ಉಡಾವಣೆ, ಬಾಹ್ಯಾಕಾಶ ಪರಿಶೋಧನೆ ಹಾಗೂ ನ್ಯಾವಿಗೇಶನ್ ತಂತ್ರಜ್ಞಾನದ ಕುರಿತು ಇಸ್ರೋದ ದೃಢ ಬದ್ಧತೆಯನ್ನು ಪ್ರದರ್ಶಿಸಿದೆ.
ಇದನ್ನೂ ಓದಿ: ಬಿಯರ್ ವಿಸ್ಕಿಗಿಂತಲೂ ಹೆಚ್ಚು ಕಿಕ್ಕೇರಿಸುತ್ತದೆಯಂತೆ ಈ ಪ್ರಾಣಿಯ ಹಾಲು ! ಅಮಲೇರಲು ಎರಡೇ ಗುಟುಕು ಸಾಕು
ಈ ಉಡಾವಣೆಯೊಂದಿಗೆ ಒಂದು ಪ್ರಮುಖ ಗುರಿ ಸಾಧಿತವಾಗಿದೆ. ಅದೆಂದರೆ ನಾವಿಕ್ (NavIC - ನ್ಯಾವಿಗೇಶನ್ ವಿದ್ ಇಂಡಿಯನ್ ಕಾನ್ಸ್ಟೆಲ್ಲೇಶನ್) ಸೇವೆಗಳು ಮುಂದುವರಿಯುವುದು. ನಾವಿಕ್ ಜಿಪಿಎಸ್ ವ್ಯವಸ್ಥೆಯನ್ನು ಹೋಲುವ, ಒಂದು ದೇಶೀಯವಾಗಿ ಅಭಿವೃದ್ಧಿ ಪಡಿಸಲಾದ ಪ್ರಾದೇಶಿಕ ಉಪಗ್ರಹ ನ್ಯಾವಿಗೇಶನ್ ವ್ಯವಸ್ಥೆಯಾಗಿದ್ದು, ಭಾರತದೊಳಗೆ ಅತ್ಯಂತ ನಿಖರವಾದ ಮತ್ತು ಕ್ಷಣ ಕ್ಷಣದ ನ್ಯಾವಿಗೇಶನ್ ವ್ಯವಸ್ಥೆಯನ್ನು ಒದಗಿಸುತ್ತದೆ. ನಾವಿಕ್ ಸಂಕೇತಗಳನ್ನು ಪಡೆಯುವ ಮೂಲಕ ಬಳಕೆದಾರರು ಅತ್ಯಂತ ನಿಖರವಾದ ಪೊಸಿಷನಿಂಗ್ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಇದು 20 ಮೀಟರ್‌ಗೂ ಹೆಚ್ಚು ನಿಖರತೆ ಹೊಂದಿದ್ದು, 50 ನ್ಯಾನೋ ಸೆಕೆಂಡುಗಳಿಗೂ ಹೆಚ್ಚಿನ ಸಮಯದ ಕರಾರುವಾಕ್ಕುತನ ಹೊಂದಿದೆ. ಈ ಉಡಾವಣೆ ಭಾರತಕ್ಕೆ ಅತ್ಯುತ್ತಮ, ಅತ್ಯಾಧುನಿಕ ನ್ಯಾವಿಗೇಶನ್ ತಂತ್ರಜ್ಞಾನ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
51.7 ಮೀಟರ್ ಎತ್ತರದ, ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್‌ವಿ) ತನ್ನ 15ನೇ ಕಾರ್ಯಾಚರಣೆ ಕೈಗೊಂಡಿದ್ದು, 2,232 ಕೆಜಿ ತೂಕ ಹೊಂದಿರುವ ನ್ಯಾವಿಗೇಶನ್ ಉಪಗ್ರಹ ಎನ್‌ವಿಎಸ್-01 ಅನ್ನು ಹೊತ್ತೊಯ್ದಿದೆ. ಬಹುತೇಕ 20 ನಿಮಿಷಗಳ ಹಾರಾಟ ನಡೆಸಿದ ಬಳಿಕ, ಜಿಎಸ್ಎಲ್‌ವಿ ಕ್ರಮೇಣ ಉಪಗ್ರಹವನ್ನು ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್ (ಜಿಟಿಓ) ಗೆ ವರ್ಗಾಯಿಸಿದೆ. ಇದು ಬಹುತೇಕ 251 ಕಿಲೋಮೀಟರ್ ಎತ್ತರದಲ್ಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಎನ್ ವಿ ಎಸ್-01 ಅತ್ಯಾಧುನಿಕ ನ್ಯಾವಿಗೇಶನ್ ಪೇಲೋಡ್ ಹೊಂದಿದ್ದು, ಎಲ್1, ಎಲ್5 ಹಾಗೂ ಎಸ್ ಬ್ಯಾಂಡ್‌ಗಳನ್ನು ಹೊಂದಿದೆ. ಗಮನಾರ್ಹ ವಿಚಾರವೆಂದರೆ, ಈ ಎರಡನೇ ತಲೆಮಾರಿನ ಉಪಗ್ರಹದಲ್ಲಿ ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ರುಬಿಡಿಯಂ ಅಟಾಮಿಕ್ ಕ್ಲಾಕ್ ಅಳವಡಿಸಲಾಗಿದ್ದು, ಇಂದು ನಡೆದ ಉಡಾವಣೆಯಲ್ಲಿ ಒಂದು ಮಹತ್ತರ ಸಾಧನೆಯಾಗಿದೆ. ದೇಶೀಯ ನಿರ್ಮಾಣದ ಅಟಾಮಿಕ್ ಕ್ಲಾಕ್ ಬಳಕೆ ಭಾರತದ ಬಾಹ್ಯಾಕಾಶ ಅನ್ವೇಷಣೆಗಳಲ್ಲಿ ಮಹತ್ತರ ತಾಂತ್ರಿಕ ಸಾಧನೆಯಾಗಿದೆ ಎಂದು ಇಸ್ರೋ ಹೇಳಿದೆ.
ಈ ಮೊದಲು, ವಿಜ್ಞಾನಿಗಳು ನಿಖರ ಸಮಯ ಮತ್ತು ಸ್ಥಾನದ ಮಾಹಿತಿ ಪಡೆಯಲು ಆಮದು ಮಾಡಿಕೊಂಡ ರುಬಿಡಿಯಂ ಅಟಾಮಿಕ್ ಕ್ಲಾಕ್‌ಗಳ ಮೇಲೆ ಅವಲಂಬಿತರಾಗಿದ್ದರು. ಆದರೆ ಸ್ವಾವಲಂಬನೆಯ ಸಾಧನೆಯೆಡೆಗಿನ ಮಹತ್ವದ ಹೆಜ್ಜೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಯೋಜನೆಯಲ್ಲಿ ದೇಶೀಯ ನಿರ್ಮಾಣದ ರುಬಿಡಿಯಂ ಅಟಾಮಿಕ್ ಕ್ಲಾಕ್ ಅಳವಡಿಸಿರುವುದನ್ನು ಹೆಮ್ಮೆಯಿಂದ ಘೋಷಿಸಿದೆ. ಅಹ್ಮದಾಬಾದ್‌ನ ಸ್ಪೇಸ್ ಅಪ್ಲಿಕೇಶನ್ ಸೆಂಟರ್‌ನ ನುರಿತ ತಂತ್ರಜ್ಞರ ತಂಡ ಅಭಿವೃದ್ಧಿ ಪಡಿಸಿರುವ ಈ ದೇಶೀಯ ತಾಂತ್ರಿಕ ಅದ್ಭುತ ಈಗ ಉಪಗ್ರಹದ ಭಾಗವಾಗಿ, ಜಗತ್ತಿಗೆ ಭಾರತದ ಅತ್ಯಾಧುನಿಕ ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯವನ್ನು ಸಾಬೀತುಪಡಿಸಲಿದೆ. ಈ ಮಹತ್ವದ ಸಾಧನೆಯೊಡನೆ, ಇಸ್ರೋ ಸ್ವದೇಶಿ ಆವಿಷ್ಕಾರಗಳಿಗೆ ಬೆಂಬಲ ನೀಡಿ, ವಿದೇಶೀ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿದೆ.
ಈ ತಂತ್ರಜ್ಞಾನದ ಮಹತ್ವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಯಾಕೆಂದರೆ ಕೆಲವೇ ಕೆಲವು ರಾಷ್ಟ್ರಗಳ ಬಳಿ ಮಾತ್ರವೇ ಈ ಸಾಮರ್ಥ್ಯವಿದೆ. ವಿಶೇಷವಾಗಿ ನಾಗರಿಕ ವಾಯುಯಾನ ಮತ್ತು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಭಾರತಕ್ಕೆ ಪೊಸಿಷನಿಂಗ್, ನ್ಯಾವಿಗೇಶನ್ ಹಾಗೂ ಟೈಮಿಂಗ್ ಅಗತ್ಯತೆಗಳನ್ನು ಮನಗಂಡು, ಇಸ್ರೋ ನಾವಿಕ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ.
ಈ ಮೊದಲು ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಐಆರ್‌ಎನ್ಎಸ್ಎಸ್) ಎಂದು ಕರೆಯಲ್ಪಡುತ್ತಿದ್ದ ನಾವಿಕ್ ಅತ್ಯಾಧುನಿಕ ನ್ಯಾವಿಗೇಶನ್ ತಂತ್ರಜ್ಞಾನವಾಗಿದೆ. ಇದರ ಎಲ್1 ನ್ಯಾವಿಗೇಶನ್ ಬ್ಯಾಂಡ್ ಅತ್ಯಂತ ಕರಾರುವಾಕ್ಕಾದ ಪೊಸಿಷನ್, ನ್ಯಾವಿಗೇಶನ್ ಹಾಗೂ ಟೈಮಿಂಗ್ ಸೇವೆಗಳನ್ನು ನಾಗರಿಕ ಬಳಕೆಗೆ ನೀಡುವುದಕ್ಕೆ ಮತ್ತು ಇತರ ಜಾಗತಿಕ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್) ಸಂಕೇತಗಳ ಜೊತೆ ಕಾರ್ಯಾಚರಿಸುವುದಕ್ಕೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ನಾವಿಕ್ ಬಹುಪಯೋಗಿ ಸೇವೆ ಒದಗಿಸಲಿದ್ದು, ಟೆರೆಸ್ಟ್ರಿಯಲ್, ಏರಿಯಲ್, ನೌಕಾ ನ್ಯಾವಿಗೇಶನ್, ನಿಖರ ಕೃಷಿ, ಮೊಬೈಲ್ ಆಧಾರಿತ ಲೊಕೇಶನ್ ಸೇವೆಗಳು, ಹಾಗೂ ಸಮುದ್ರ ಮೀನುಗಾರಿಕೆ, ಮತ್ತಿತರ ಕಾರ್ಯಗಳಿಗೆ ಬಳಕೆಯಾಗಲಿದೆ. ಈ ಮಹತ್ವದ ವ್ಯವಸ್ಥೆ ಏಳು ಉಪಗ್ರಹಗಳ ಪುಂಜವನ್ನು ಒಳಗೊಂಡಿದ್ದು, ಇದಕ್ಕಾಗಿಯೇ ವ್ಯವಸ್ಥೆಗೊಳಿಸಿರುವ ನೆಲದ ನೆಲೆಗಳ ನೆಟ್ವರ್ಕ್ ಜೊತೆ ಕಾರ್ಯಾಚರಿಸಿ, 24×7 ತಡೆರಹಿತ ಸೇವೆಗಳನ್ನು ಒದಗಿಸಲಿದೆ.
ನಾವಿಕ್ ಬಳಕೆದಾರರ ಅವಶ್ಯಕತೆಗಳಿಗೆ ತಕ್ಕಂತೆ ಎರಡು ವಿಭಿನ್ನ ಸೇವೆಗಳನ್ನು ಒದಗಿಸುತ್ತದೆ. ಸ್ಟ್ಯಾಂಡರ್ಡ್ ಪೊಸಿಷನ್ ಸರ್ವಿಸ್ (ಎಸ್‌ಪಿಎಸ್) ಅನ್ನು ನಾಗರಿಕ ಬಳಕೆಗಾಗಿಯೇ ವಿನ್ಯಾಸಗೊಳಿಸಲಾಗಿದ್ದು, ನಿರ್ಬಂಧಿಸಲಾದ ಸೇವೆಗಳನ್ನು ಕಾರ್ಯತಂತ್ರದ ಬಳಕೆಗೆ ಬಳಸಲಾಗುತ್ತದೆ. ಗಮನಾರ್ಹವಾಗಿ, ನಾವಿಕ್ ಎಸ್‌ಪಿಎಸ್ ಸಂಕೇತಗಳು ಪ್ರಮುಖ ಜಾಗತಿಕ ನ್ಯಾವಿಗೇಶನ್ ಉಪಗ್ರಹ ವ್ಯವಸ್ಥೆಗಳಾದ ಅಮೆರಿಕಾದ ಜಿಪಿಎಸ್, ರಷ್ಯಾದ ಗ್ಲೋನಾಸ್, ಐರೋಪ್ಯ ಒಕ್ಕೂಟದ ಗೆಲಿಲಿಯೋ, ಚೀನಾದ ಬೀದೌ ವ್ಯವಸ್ಥೆಗಳ ಸಂಕೇತಗಳೊಡನೆ ಕಾರ್ಯಾಚರಿಸಲು ಸೂಕ್ತವಾಗಿದೆ. ಈ ಪರಸ್ಪರ ಕಾರ್ಯಸಾಧ್ಯತೆ ನ್ಯಾವಿಗೇಶನ್ ಮಾಹಿತಿಗಳ ನಿಖರತೆ ಮತ್ತು ನಂಬಿಕಾರ್ಹತೆಯನ್ನು ಹೆಚ್ಚಿಸುತ್ತದೆ.
ಇಂದು ನಡೆಯುವ ಉಡಾವಣೆ ದೇಶೀಯ ನಿರ್ಮಾಣದ ಕ್ರಯೋಜನಿಕ್ ಹಂತದೊಡನೆ ಜಿಎಸ್ಎಲ್‌ವಿಯ ಆರನೇ ಉಡಾವಣೆಯಾಗಲಿದೆ. ಇಂದು ಉಡಾವಣೆಗೊಳ್ಳಲಿರುವ ಎನ್‌ವಿಎಸ್-01 ಉಪಗ್ರಹ 12 ವರ್ಷಗಳ ಕಾಲ ಕಾರ್ಯಾಚರಿಸಲಿದೆ. ನಾವಿಕ್ ನ್ಯಾವಿಗೇಶನ್, ಪೊಸಿಷನಿಂಗ್ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಿ, ವಿವಿಧ ವಲಯಗಳನ್ನು ಬಲಪಡಿಸಲಿದೆ. ಆ ಮೂಲಕ ಬಾಹ್ಯಾಕಾಶ ವಲಯದಲ್ಲಿ ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಉತ್ತಮಗೊಳಿಸಲಿದೆ.
1960ರ ದಶಕದಲ್ಲಿ ಭಾರತ ತನ್ನ ಬಾಹ್ಯಾಕಾಶ ಯೋಜನೆಗಳನ್ನು ಆರಂಭಿಸಿದಾಗ ಭಾರತ ಒಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ನಿರ್ದಿಷ್ಟ ಸಂಪನ್ಮೂಲಗಳನ್ನು ಮಾತ್ರವೇ ಹೊಂದಿದ್ದು, ತಂತ್ರಜ್ಞಾನವನ್ನು ಪ್ರಾಥಮಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಾಗಿ ಬಳಸುತ್ತಿತ್ತು. ಆದರೆ ಕಳೆದ ಒಂದು ದಶಕದ ಅವಧಿಯಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಮಹತ್ತರ ಬದಲಾವಣೆಗಳನ್ನು ಹೊಂದಿವೆ. ಇದಕ್ಕೆ ಎರಡು ಮಹತ್ವದ ಅಂಶಗಳಿವೆ. ಅವೆಂದರೆ ದಿಟ್ಟವಾದ ಬಾಹ್ಯಾಕಾಶ ಸಂಶೋಧನಾ ಅಜೆಂಡಾ ಮತ್ತು ರಾಷ್ಟ್ರೀಯ ಸುರಕ್ಷತಾ ಗುರಿಗಳಾಗಿವೆ. ಗಮನಾರ್ಹವಾಗಿ, ಹೆಚ್ಚುತ್ತಿರುವ ಸುರಕ್ಷತಾ ಕಳವಳಗಳು, ಅದರಲ್ಲೂ ಚೀನಾದಿಂದ ಬರುತ್ತಿರುವ ಅಪಾಯಗಳು ಮತ್ತು ಅದರ ಹೆಚ್ಚುತ್ತಿರುವ ಬಾಹ್ಯಾಕಾಶ ವಲಯದ ಸಾಮರ್ಥ್ಯಗಳು ಭಾರತದ ಬಾಹ್ಯಾಕಾಶ ಸಾಮರ್ಥ್ಯವನ್ನು ನಿರ್ಧರಿಸುವ ಅಂಶಗಳಾಗಿವೆ.
ರಾಷ್ಟ್ರೀಯ ಭದ್ರತೆಯ ಕುರಿತಾದ ಹೆಚ್ಚಿನ ಗಮನ ನೀಡುವುದು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಸುರಕ್ಷತೆ ಹಾಗೂ ನೂತನ ಬಾಹ್ಯಾಕಾಶ ಸಹಯೋಗಗಳ ಕುರಿತು ಆಲೋಚಿಸುವಂತೆ ಮಾಡಿದೆ. ಆದರೆ ಭಾರತದ ಮಹತ್ವಾಕಾಂಕ್ಷೆಗಳು ಸುರಕ್ಷತಾ ಕಳವಳಗಳಿಂದ ಹೆಚ್ಚಿನದಾಗಿದ್ದು, ಚಂದ್ರ ಮತ್ತು ಮಂಗಳ ಗ್ರಹದ ಅನ್ವೇಷಣೆಗೂ ಭಾರತ ಸಜ್ಜಾಗಿದೆ. ಅದರೊಡನೆ, ಇಸ್ರೋ ತನ್ನ ಮಹತ್ವಾಕಾಂಕ್ಷೆಯ ಗಗನಯಾನ್, ಅಂದರೆ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಇಸ್ರೋದ ಮೊದಲ ಯೋಜನೆಯ ಕುರಿತು ಗಂಭೀರವಾಗಿ ಕಾರ್ಯಾಚರಿಸುತ್ತಿದ್ದು, ಈ ಯೋಜನೆ 2023ರಲ್ಲಿ ನೆರವೇರಲಿದೆ.
ಇದನ್ನೂ ಓದಿ: ರಿಸರ್ವ್ ಡೇ ದಿನ ಸ್ಟೇಡಿಯಂಗೆ ಸಿಗುತ್ತೆ ಫ್ರೀ ಎಂಟ್ರಿ! ಬಿಸಿಸಿಐ ನೀಡಿದೆ ಕಂಪ್ಲೀಟ್ ಮಾಹಿತಿ
ಹಲವರು ಇಂತಹ ಮಹತ್ವದ ಯೋಜನೆಗಳ ಅಗತ್ಯತೆಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದು, ಇದಕ್ಕೆ ಭಾರತದ ಅಭಿವೃದ್ಧಿಯ ಮುಂದಿರುವ ಸವಾಲುಗಳನ್ನು ಮುಂದಿಟ್ಟಿದ್ದಾರೆ. ಆದರೆ ಭಾರತಕ್ಕೆ ಈ ಯೋಜನೆಗಳನ್ನು ಮುಂದುವರಿಸಲೂ ಹಲವು ಕಾರಣಗಳಿವೆ. ಅವುಗಳಲ್ಲಿ ತಾಂತ್ರಿಕ ಅಭಿವೃದ್ಧಿಗೆ ಬೆಂಬಲ ನೀಡುವುದು, ರಾಷ್ಟ್ರೀಯ ಹೆಮ್ಮೆಗೆ ಒತ್ತು ನೀಡುವುದು, ಹಾಗೂ ಬಾಹ್ಯಾಕಾಶ ವಲಯದಲ್ಲಿ ಭಾರತವನ್ನು ಒಂದು ಪ್ರಮುಖ ಪಾತ್ರ ವಹಿಸುವ ರಾಷ್ಟ್ರವನ್ನಾಗಿಸುವುದು ಸೇರಿವೆ. ಇಂತಹ ಪ್ರಯತ್ನಗಳು ಭಾರತದ ಅಭಿವೃದ್ಧಿ ಮತ್ತು ಬದಲಾವಣೆಯ ಪ್ರಯತ್ನಗಳಿಗೆ ಬಾಹ್ಯಾಕಾಶ ತಂತ್ರಜ್ಞಾನವನ್ನು ವೇಗವರ್ಧಕವಾಗಿ ಬಳಸುವ ಗುರಿಯನ್ನು ಹೊಂದಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.