ಬಿಯರ್ ವಿಸ್ಕಿಗಿಂತಲೂ ಹೆಚ್ಚು ಕಿಕ್ಕೇರಿಸುತ್ತದೆಯಂತೆ ಈ ಪ್ರಾಣಿಯ ಹಾಲು ! ಅಮಲೇರಲು ಎರಡೇ ಗುಟುಕು ಸಾಕು

Alcohal In Elephant Milk: ಈ ಹಾಲಿನ ಅಮಲೇರಬೇಕಾದರೆ ಲೋಟಗಟ್ಟಲೆ ಹಾಲು ಕುಡಿಯುವ ಅಗತ್ಯ ಇಲ್ಲ. ಕೇವಲ ಎರಡು ಗುಟುಕು ಹಾಲು ಕುಡಿದರೆ ಸಾಕು ಕಿಕ್ಕೇರಿ ಬಿಡುತ್ತದೆ.  

Written by - Ranjitha R K | Last Updated : May 29, 2023, 12:19 PM IST
  • ಹಾಲಿನ ಬಳಕೆಯು ಆಹಾರದ ಪ್ರಮುಖ ಭಾಗವಾಗಿದೆ.
  • ಪ್ರೋಟೀನ್ ಮತ್ತು ವಿಟಮಿನ್ ಗಳಲ್ಲಿ ಸಮೃದ್ಧವಾಗಿರುತ್ತದೆ
  • ಈ ಪ್ರಾಣಿಯ ಹಾಲಿನಲ್ಲೂ ಆಲ್ಕೋ ಹಾಲ್ ಇರುತ್ತದೆ
ಬಿಯರ್ ವಿಸ್ಕಿಗಿಂತಲೂ ಹೆಚ್ಚು ಕಿಕ್ಕೇರಿಸುತ್ತದೆಯಂತೆ ಈ ಪ್ರಾಣಿಯ ಹಾಲು ! ಅಮಲೇರಲು ಎರಡೇ ಗುಟುಕು ಸಾಕು   title=

Alcohal In Elephant Milk : ಹಾಲು ಜನರಿಗೆ ಉತ್ತಮ ಆರೋಗ್ಯ ಮತ್ತು ಪೌಷ್ಟಿಕಾಂಶವನ್ನು ಒದಗಿಸುವ ಆಹಾರವಾಗಿದೆ. ಹೆಚ್ಚಿನ ಜನರು ಹಸು, ಎಮ್ಮೆ ಅಥವಾ ಮೇಕೆ ಹಾಲನ್ನು ಬಳಸುತ್ತಾರೆ. ಇದು ಪ್ರೋಟೀನ್ ಮತ್ತು ವಿಟಮಿನ್ ಗಳಲ್ಲಿ ಸಮೃದ್ಧವಾಗಿದೆ. ಆದರೆ, ಈ ಒಂದು ಪ್ರಾಣಿಯ ಹಾಲಿನಲ್ಲಿ ಆಲ್ಕೋಹಾಲ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಹಾಲಿನಲ್ಲಿ ಎಷ್ಟರ ಮಟ್ಟಿಗೆ ಆಲ್ಕೋಹಾಲ್ ಇರುತ್ತದೆ ಎಂದರೆ ಈ ಹಾಲು ಬಿಯರ್ ಅಥವಾ ವಿಸ್ಕಿಗಿಂತಲೂ ಹೆಚ್ಚು ಅಮಲೇರಿಸುತ್ತದೆ. ಹಾಗಿದ್ದರೆ ಈ ಪ್ರಾಣಿಯ ಹಾಲಿನಲ್ಲಿ ಅಲ್ಕೋಹಾಲ್ ಮತ್ತ ಎಷ್ಟಿರುತ್ತದೆ ಎನ್ನುವುದನ್ನು ಒಮ್ಮೆ ಯೋಚಿಸಿ ನೋಡಿ. ಯಾಕೆಂದರೆ ಈ ಹಾಲಿನ ಅಮಲೇರಬೇಕಾದರೆ ಲೋಟಗಟ್ಟಲೆ ಹಾಲು ಕುಡಿಯುವ ಅಗತ್ಯ ಇಲ್ಲ. ಕೇವಲ ಎರಡು ಗುಟುಕು ಹಾಲು ಕುಡಿದರೆ ಸಾಕು ಕಿಕ್ಕೇರಿ ಬಿಡುತ್ತದೆಯಂತೆ.  

ಹಾಲಿನಲ್ಲಿ ಸಮೃದ್ದವಾಗಿರುತ್ತದೆ  ಪ್ರೋಟೀನ್ ಮತ್ತು ವಿಟಮಿನ್ : 
ಹಾಲಿನ ಬಳಕೆಯು ಆಹಾರದ ಪ್ರಮುಖ ಭಾಗವಾಗಿದೆ. ಇದು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಸಾಮಾನ್ಯವಾಗಿ ನಾವು ದಿನಬಳಕೆಗೆ ಹಸು ಅಥವಾ ಎಮ್ಮೆ ಹಾಲನ್ನು ಬಳಸುತ್ತೇವೆ.  ಇನ್ನು   ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿ ಚೇತರಿಸಿಕೊಳ್ಳಬೇಕಾದರೆ ಮೇಕೆ ಹಾಲು ಕುಡಿಯಲು ಸಲಹೆ ನೀಡಲಾಗುತ್ತದೆ. ಮೇಕೆ ಹಾಲಿನಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿವೆ. 

ಇದನ್ನೂ ಓದಿ : ಸಂಭೋಗದ ನಂತರ ನೀವು ಸಹ ಭಾವುಕರಾಗುತ್ತೀರಾ? ಇದು ಏಕೆ ಸಂಭವಿಸುತ್ತದೆ ಎಂದು ತಿಳಿಯಿರಿ

ಹಾಲಿನಲ್ಲಿದೆ ಆಲ್ಕೋಹಾಲ್ : 
ಆದರೆ ಈ ಪ್ರಾಣಿಯ ಹಾಲಿನಲ್ಲಿ ವಿಸ್ಕಿ, ಬಿಯರ್ ಅಥವಾ ವೈನ್‌ಗಿಂತ ಹೆಚ್ಚು ಆಲ್ಕೋಹಾಲ್ ಇರುತ್ತದೆ. ಈ ಮಾತನ್ನು ಕೇಳುವಾಗ ಆಶ್ಚರ್ಯವಾಗಬಹುದು. ಆಶ್ಚರ್ಯವೆನಿಸಿದರೂ ಇದು ಸತ್ಯ. ಹೌದು ಆನೆಯ ಹಾಲಿನಲ್ಲಿ ಶೇಕಡಾ 60ರಷ್ಟು ಆಲ್ಕೋಹಾಲ್ ಇರುತ್ತದೆ. ಈ ಅಂಶ ವೈಜ್ಞಾನಿಕವಾಗಿಯೂ ಸಾಬೀತಾಗಿದೆಯಂತೆ. 

ಆಲ್ಕೋಹಾಲ್  ಅಂಶ ಹೇಗೆ ಕಂಡುಬರುತ್ತದೆ :
ವೈಜ್ಞಾನಿಕ ಸಂಶೋಧನೆಯ ಪ್ರಕಾರ ಆನೆಗೆ ಕಬ್ಬು ತಿನ್ನುವುದು ಎಂದರೆ ಬಹಳ ಪ್ರಿಯವಾದುದು. ಇದರಲ್ಲಿ ಆಲ್ಕೋಹಾಲ್ ಉತ್ಪತ್ತಿಯಾಗುತ್ತದೆ. ಆದ್ದರಿಂದಲೇ ಆನೆಯ ಹಾಲಿನಲ್ಲಿ ಈ ಅಧಿಕ ಪ್ರಮಾಣದ ಆಲ್ಕೋಹಾಲ್ ಕಂಡುಬರುತ್ತದೆ. ಆದರೆ ಆನೆಯ ಹಾಲು ಮನುಷ್ಯರಿಗೆ ಉಪಯುಕ್ತವಲ್ಲ. ಈ ಹಾಲಿನಲ್ಲಿ ಕಂಡುಬರುವ ರಾಸಾಯನಿಕಗಳು ಅಪಾಯಕಾರಿ. ಈ ಹಾಲು ಬೀಟಾ ಕ್ಯಾಸೀನ್‌ಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹಾಲಿನಲ್ಲಿ ಹೆಚ್ಚಿನ ಮಟ್ಟದ ಲ್ಯಾಕ್ಟೋಸ್ ಇರುತ್ತದೆ. 

ಇದನ್ನೂ ಓದಿ : Benefits of Ridge Gourd: ʼಕಾಯಿ ಕಾಯಿ ಹೀರೆಕಾಯಿʼ ಬಗ್ಗೆ ನಿಮಗೆಷ್ಟು ಗೊತ್ತು?

ಆನೆಗಳಿಗೆ ಬೇಕು 150 ಕೆ.ಜಿ.ಯಷ್ಟು ಆಹಾರ: 
ಸಂಶೋಧನೆಯ ಪ್ರಕಾರ, ಆಫ್ರಿಕನ್ ಹೆಣ್ಣು ಆನೆಗಳಲ್ಲಿ ಲ್ಯಾಕ್ಟೋಸ್ ಮತ್ತು ಆಲಿಗೋಸ್ಯಾಕರೈಡ್‌ಗಳ ಮಟ್ಟ ಹೆಚ್ಚಾಗಿರುತ್ತದೆ. ಆನೆಗಳು ದಿನಕ್ಕೆ 12 ರಿಂದ 18 ಗಂಟೆಗಳ ಕಾಲ ಹುಲ್ಲು, ಎಲೆಗಳು ಮತ್ತು ಹಣ್ಣುಗಳನ್ನು ತಿನ್ನುತ್ತವೆ. ಏಕೆಂದರೆ ಅವುಗಳಿಗೆ ಪ್ರತಿದಿನ ಸುಮಾರು 150 ಕೆ.ಜಿ.ಯಷ್ಟು ಆಹಾರ ಬೇಕಾಗಿರುತ್ತದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

Trending News