Chennai Super Kings vs Gujarat Titans, IPL 2023 Final: ನಾಲ್ಕು ಬಾರಿಯ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 16 ನೇ ಸೀಸನ್ ನ ಅಂತಿಮ ಪಂದ್ಯವು ಮೇ 28 ರಂದು ನಡೆಯಲು ಮಳೆರಾಯ ಬಿಡಲಿಲ್ಲ. ಅಂತಿಮವಾಗಿ ಅಹಮದಾಬಾದ್ ನ ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳಿಗೆ ಹವಾಮಾನವು ನಿರಾಶೆ ಮೂಡಿಸಿದೆ. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೊಡ್ಡ ಹೆಜ್ಜೆ ಇಟ್ಟಿದ್ದು, ನಿಮಗೆ ಸಂತೋಷ ನೀಡುವ ಸುದ್ದಿಯನ್ನು ಹೇಳಲಿದೆ.
ಭಾರೀ ಮಳೆಯಿಂದಾಗಿ, ಮೇ 28 ರ ಭಾನುವಾರದಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ IPL-2023 ರ ಅಂತಿಮ ಪಂದ್ಯವನ್ನು ನಡೆಸಲು ಸಾಧ್ಯವಾಗಲಿಲ್ಲ. ಇದೀಗ ಈ ಪ್ರಶಸ್ತಿಯ ಪಂದ್ಯವು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 'ಮೀಸಲು ದಿನ' ಅಂದರೆ ಸೋಮವಾರದಂದು (ಇಂದು ಸಂಜೆ) ನಡೆಯಲಿದೆ. ಸ್ಥಳೀಯ ಕಾಲಮಾನ ರಾತ್ರಿ 10.55ಕ್ಕೆ ಈ ಘೋಷಣೆ ಮಾಡಲಾಗಿತ್ತು.
ಇದನ್ನೂ ಓದಿ: WTC Finalಗೂ ಮುನ್ನ ಟೀಂ ಇಂಡಿಯಾದ ಈ ಬ್ಯಾಟ್ಸ್’ಮನ್ ಅಬ್ಬರ: ಆಸೀಸ್ ಪಡೆಗೆ ದುಃಸ್ವಪ್ನವಾಗುವುದು ಖಂಡಿತ!
ಹವಾಮಾನ ಇಲಾಖೆ ಭಾನುವಾರ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಇದರ ಹೊರತಾಗಿಯೂ 75 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಂದಿದ್ದರು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ನಿರಾಸೆ ಅನುಭವಿಸಿದ್ದರು. ಟಾಸ್ ಸಮಯಕ್ಕೆ ಅರ್ಧ ಗಂಟೆ ಮೊದಲು ಅಂದರೆ 6:30 ರ ಸುಮಾರಿಗೆ ಮಳೆ ಪ್ರಾರಂಭವಾಗಿತ್ತು. ನಂತರದ ಕೆಲವು ಗಂಟೆಗಳ ಕಾಲ ಮಧ್ಯಂತರವಾಗಿ ಮುಂದುವರೆದಿತ್ತು. ರಾತ್ರಿ 9 ಗಂಟೆಗೆ ವೇಳೆ ಮಳೆ ನಿಂತಿತು. ಹೀಗಾಗಿ ಪಿಚ್ ಕವರ್ ಮಾಡಿದ್ದ ಮ್ಯಾಟ್ ತೆಗೆದರು. ಆದರೆ ಇದಾದ ಬಳಿಕ ಭಾರೀ ಮಳೆಯಿಂದಾಗಿ ಮೈದಾನಕ್ಕೆ ಮತ್ತೆ ಕವರ್ ಹಾಕುವ ಪರಿಸ್ಥಿತಿ ಬಂತು.
ಇನ್ನು ಮಳೆ ನಿಂತ ನಂತರವೂ ಮೈದಾನ ಒಣಗಲು ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಐಪಿಎಲ್ ನಿಯಮಗಳ ಪ್ರಕಾರ, ಪಂದ್ಯವು ಕಟ್ ಆಫ್ ಸಮಯದಲ್ಲಿ ಅಂದರೆ 12:06 ಕ್ಕೆ ಪ್ರಾರಂಭವಾಗದಿದ್ದರೆ, ಫೈನಲ್ ಗೆ ಮೀಸಲು ದಿನವಿರುತ್ತದೆ. ಕಟ್ ಆಫ್ ಸಮಯದೊಳಗೆ ಆರಂಭಿಸಿದ್ದರೆ ಪ್ರತಿ ತಂಡಕ್ಕೆ 5-5 ಓವರ್ ಗಳ ಪಂದ್ಯ ಇರುತ್ತಿತ್ತು.
ಇದನ್ನೂ ಓದಿ:Team India: ಟೀಂ ಇಂಡಿಯಾಗೆ ಸಿಕ್ಕಾಯ್ತು ಧೋನಿಯಂತಹ ‘ಸ್ಮಾರ್ಟ್ ಕ್ಯಾಪ್ಟನ್’: ಈ ಆಲ್ ರೌಂಡರ್ ಹೆಸರೇಳಿದ ಗವಾಸ್ಕರ್!
ಬಿಸಿಸಿಐ ಮಾಹಿತಿ:
ಮೀಸಲು ದಿನದಂದು ಪಂದ್ಯ ನಡೆಯುವ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ. “ಕ್ರೀಡಾಂಗಣವನ್ನು ಕಳೆದ ದಿನ ಕ್ರೀಡಾಂಗಣಕ್ಕೆ ಆಗಮಿಸಿದ ಜನರು ತಮ್ಮ ಟಿಕೆಟ್ ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಅದೇ ಟಿಕೆಟ್ ನೊಂದಿಗೆ ಮೀಸಲು ದಿನದಂದು ಪ್ರವೇಶ ಪಡೆಯಲಾಗುತ್ತದೆ” ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಇದರರ್ಥ ಮೀಸಲು ದಿನಕ್ಕೆ ಯಾವುದೇ ಪ್ರತ್ಯೇಕ ಟಿಕೆಟ್ ತೆಗೆದುಕೊಳ್ಳುವ ಅಗತ್ಯವಿರುವುಲ್ಲ. ಅಂತಿಮ ಪಂದ್ಯದ ಟಿಕೆಟ್ ಹೊಂದಿರುವವರು ಅದೇ ಟಿಕೆಟ್ ನೊಂದಿಗೆ ಮೀಸಲು ದಿನದಂದು ಕ್ರೀಡಾಂಗಣಕ್ಕೆ ಪ್ರವೇಶ ಪಡೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.