ನವದೆಹಲಿ: ದೆಹಲಿಯ ಜಾಮಿಯಾ ನಗರದಲ್ಲಿ ಭಾನುವಾರ ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act)ಗೆ ಸಂಬಂಧಿಸಿದಂತೆ ಭುಗಿಲೆದ್ದ ಹಿಂಸಾಚಾರದಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜಾಮಿಯಾ ನಗರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಸೌತ್ ಈಸ್ಟ್  ಡಿಸಿಪಿ, ಸೌತ್ ಹೆಚ್ಚುವರಿ ಡಿಸಿಪಿ, 2 ಎಸಿಪಿ, 5 ಎಸ್‌ಎಚ್‌ಒ, ಇನ್ಸ್‌ಪೆಕ್ಟರ್ ಮತ್ತು ಹಲವಾರು ಪೊಲೀಸರು ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಹೆಡ್ ಕಾನ್‌ಸ್ಟೆಬಲ್ ಮಕ್ಸೂಲ್ ಹಸನ್ ಅಹ್ಮದ್ ತಲೆಗೆ ಗಂಭೀರ ಗಾಯವಾಗಿದ್ದು,  ಅವರನ್ನು ಐಸಿಯುಗೆ ದಾಖಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.


COMMERCIAL BREAK
SCROLL TO CONTINUE READING

ಅದೇ ಸಮಯದಲ್ಲಿ, ಕಲ್ಕಾಜಿ ಪೊಲೀಸ್ ಠಾಣೆಯಲ್ಲಿ ಬಂಧನಕ್ಕೊಳಗಾದ 35 ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಮತ್ತೊಂದೆಡೆ, ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ(Jamia Millia University) ಆವರಣಕ್ಕೆ ಭಾನುವಾರ ಪ್ರವೇಶಿಸಿದ ವರದಿಯನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಜಾಮಿಯಾ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಹಲವಾರು ಜನರು ಗಾಯಗೊಂಡರು ಮತ್ತು ಅನೇಕ ವಾಹನಗಳು ಹಾನಿಗೊಳಗಾದವು. ಡೆಪ್ಯೂಟಿ ಕಮಿಷನರ್ (ಆಗ್ನೇಯ) ಚಿನ್ಮಯ್ ಬಿಸ್ವಾಲ್ ಮಾತನಾಡಿ, ಪ್ರತಿಭಟನಾಕಾರರನ್ನು ಹಿಂದಿರುವಂತೆ ಮಾತ್ರ ಒತ್ತಾಯಿಸಲಾಯಿತು. ಆದರೆ ಪೊಲೀಸರು ಯಾವುದೇ ದಾಳಿ ನಡೆಸಿರಲಿಲ್ಲ . ಆದರೆ, ಆವರಣದ ಒಳಗಿನಿಂದ ಕಲ್ಲು ತೂರಾಟ ನಡೆಸಿದ ಸಂದರ್ಭದಲ್ಲಿ ಪೊಲೀಸರು ಅಂತಹವರನ್ನು ಗುರುತಿಸಲು ಪ್ರಯತ್ನಿಸಿದರು ಎಂದು ಅವರು ತಿಳಿಸಿದರು.


ಹಿಂಸಾಚಾರದಲ್ಲಿ 6 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ಅನೇಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಸ್ವಾಲ್ ಹೇಳಿದ್ದಾರೆ. "ಕೆಲವು ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಸಿದ್ಧರಾಗಿದ್ದರು, ಆದ್ದರಿಂದ ಅವರನ್ನು ರಿಂಗ್ ರಸ್ತೆಯಲ್ಲಿ ನಿಲ್ಲಿಸಿದಾಗ ಅವರು ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿತು" ಎಂದು ಅವರು ಹೇಳಿದರು.


ಆದಾಗ್ಯೂ, ಭಾನುವಾರದ ಹಿಂಸಾಚಾರದಲ್ಲಿ ಪೆಟ್ರೋಲ್ ಬಾಂಬ್‌ಗಳನ್ನು ಬಳಸಲಾಗಿದೆ ಎಂದು ಖಚಿತಪಡಿಸಲು ಅವರು ನಿರಾಕರಿಸಿದರು. ಭಾನುವಾರದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನೂ ಕೂಡ ಅವರು ಖಚಿತಪಡಿಸಿಲ್ಲ.


ಪೌರತ್ವ ತಿದ್ದುಪಡಿ ಕಾಯ್ದೆ (CAA) ಕುರಿತು ಭಾನುವಾರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ರಾಷ್ಟ್ರ ರಾಜಧಾನಿಯ ನಾಗರಿಕರು ಮತ್ತು ನಿವಾಸಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಪಲಾಯನ ಮಾಡಬೇಕಾಯಿತು. ಸುಮಾರು 1,000 ಜನರ ಗುಂಪು ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿತ್ತು.