JEE Main 2022: ನೋಂದಣಿ ಪ್ರಕ್ರಿಯೆಗೆ ಚಾಲನೆ, ಪರೀಕ್ಷಾ ದಿನಾಂಕ ಪ್ರಕಟ
ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (NTA) ಈಗ JEE ಮುಖ್ಯ ಪರೀಕ್ಷೆ 2022 ರ ದಿನಾಂಕವನ್ನು ಪ್ರಕಟಿಸಿದ್ದು, ಇದನ್ನು ಅದು ಎರಡು ಅವಧಿಯಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದೆ.
ನವದೆಹಲಿ: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (NTA) ಈಗ JEE ಮುಖ್ಯ ಪರೀಕ್ಷೆ 2022 ರ ದಿನಾಂಕವನ್ನು ಪ್ರಕಟಿಸಿದ್ದು, ಇದನ್ನು ಅದು ಎರಡು ಅವಧಿಯಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದೆ.
ಮೊದಲ ಅಧಿವೇಶನ ಏಪ್ರಿಲ್‌ನಲ್ಲಿ ಮತ್ತು ನಂತರ ಮೇನಲ್ಲಿ ನಡೆಸುತ್ತದೆ ಎಂದು ತಿಳಿದುಬಂದಿದೆ.ಈಗಾಗಲೇ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು.ಮುಖ್ಯ ಪರೀಕ್ಷೆಯ ನೋಂದಣಿ ಪ್ರಕ್ರಿಯೆಯನ್ನು jeemain.nta.nic.in ನಲ್ಲಿ ಪೂರ್ಣಗೊಳಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: James: ಹಾಲಿವುಡ್ ರೇಂಜ್ ಗೆ ಅಪ್ಪು ಸಾಂಗ್..! ಹೊಸ ದಾಖಲೆ ಬರೆದ 'ಜೇಮ್ಸ್'..!
JEE ಮುಖ್ಯ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. NIT ಗಳು, IIIT ಗಳು, ಇತರ ಕೇಂದ್ರೀಯ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ (BE/B. Tech) ಪದವಿಪೂರ್ವ ಎಂಜಿನಿಯರಿಂಗ್ ಕೋರ್ಸ್ಗ ಗಳ (BE/B. Tech) ಪ್ರವೇಶಕ್ಕಾಗಿ ಪೇಪರ್ 1 ಅನ್ನು ನಡೆಸಲಾಗುತ್ತದೆ.ಇದು JEE (ಅಡ್ವಾನ್ಸ್ಡ್) ಗಾಗಿ ಅರ್ಹತಾ ಪರೀಕ್ಷೆಯಾಗಿದೆ, ಇದನ್ನು IIT ಗಳಿಗೆ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. ಪೇಪರ್ 2 ಅನ್ನು B.Arch ಮತ್ತು B. Planning ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಒಡಿಶಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ BJD, ಕಾಂಗ್ರೆಸ್-ಬಿಜೆಪಿಗೆ ತೀವ್ರ ಮುಖಭಂಗ
ಜೆಇಇ ಮುಖ್ಯ ಪರೀಕ್ಷೆ 2022 ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ ಅಸ್ಸಾಮಿ, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು, ಗುಜರಾತಿ ಭಾಷೆಗಳಲ್ಲಿ ನಡೆಸಲಾಗುವುದು ಎಂದು ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.