JEE Main 2021 Results: ಇಂದು ಜೆಇಇ -2021 ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ, ಹೇಗೆ ಪರಿಶೀಲಿಸಬೇಕು?

JEE Main Results 2021 NTA Direct Link:ಜಾಯಿಂಟ್ ಎಂಟ್ರನ್ಸ್ ಎಕ್ಷಾಮ್ 2021ರ ಫಲಿತಾಂಶ ಇಂದು ಅಂದರೆ ಮಾರ್ಚ್ 7, 2021ರಂದು ಯಾವುದೇ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. JEE Main 2021 ಫಲಿತಾಂಶ ಪ್ರಕಟಗೊಂಡ ಬಳಿಕ NTA ಅಧಿಕೃತ ವೆಬ್ ಸೈಟ್ ಮೇಲೆ ಅಂದರೆ, jeemain.nta.nic.in ಮೇಲೆ ನೀವು ನಿಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.

Written by - Nitin Tabib | Last Updated : Mar 7, 2021, 01:51 PM IST
  • ಇಂದು ಯಾವುದೇ ಸಂದರ್ಭದಲ್ಲಿ ಫಲಿತಾಂಶ ಪ್ರಕಟ ಸಾಧ್ಯ.
  • NTA ಜಾರಿಗೊಳಿಸಿರುವ ಡೇಟ್ ಶೀಟ್ ಪ್ರಕಾರ ಇಂದು ಫಲಿತಾಂಶ ಬಿಡುಗಡೆಯಾಗಲಿದೆ.
  • ಫತಿತಾಂಶ ಬಿಡುಗಡೆಗೆ NTA ಇದುವರೆಗೆ ಯಾವುದೇ ಹೊಸ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.
JEE Main 2021 Results: ಇಂದು ಜೆಇಇ -2021 ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ, ಹೇಗೆ ಪರಿಶೀಲಿಸಬೇಕು? title=
JEE MAIN EXAM 2021 RESULTS (File Photo)

JEE Main 2021 February Result: ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ಮೂಲಕ ಜಾರಿಗೊಳಿಸಲಾಗಿರುವ ಕ್ಯಾಲೆಂಡರ್ ಪ್ರಕಾರ, ಫೆಬ್ರುವರಿ ಸೆಶನ್ ನಲ್ಲಿ ಆಯೋಜಿಸಲಾಗಿರುವ JEE ಮುಖ್ಯ ಪರೀಕ್ಷೆ 2021ರ ಫಲಿತಾಂಶ ಮಾರ್ಚ್ 7 ರಂದು ಬಿಡುಗಡೆಯಾಗುತ್ತಿದೆ. ಆದರೆ, ಇದುವರೆಗೆ JEE Main 2021 ಫಲಿತಾಂಶ ಪ್ರಕಟಣೆಯ ಕುರಿತು NTA ಇದುವರೆಗೆ ಅಧಿಕೃತವಾಗಿ ಯಾವುದೇ ಹೊಸ ದಿನಾಂಕವನ್ನು ಪ್ರಕಟಿಸಿಲ್ಲ. NTA, JEE Main 2021 ಫಲಿತಾಂಶವನ್ನು ತನ್ನ ಅದಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಿದೆ. ಇದರಿಂದ JEE Main 2021 ಫೆಬ್ರುವರಿ ಸೆಶನ್ ಗೆ ಹಾಜರಾಗಿರುವ ಅಭ್ಯರ್ಥಿಗಳು ಇಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.

ಇದಕ್ಕೂ ಮೊದಲು NTA, JEE Main 2021 ರ ಕೀ ಅನ್ಸರ್ ಶೀಟ್ ಅನ್ನು ಮಾರ್ಚ್ 1,2021ಕ್ಕೆ ಬಿಡುಗಡೆ ಮಾಡಿ, ಅವುಗಳಿಗೆ ಆಕ್ಷೇಪ ಸಲ್ಲಿಸಲು ಮಾರ್ಚ್ 3, 2021 ದಿನಾಂಕವನ್ನು ನಿಗದಿಪಡಿಸಿತ್ತು. ಈ ಸೆಶನ್ ಗಾಗಿ ಸುಮಾರು 6.05 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರೆ, JEE Main 2021 ಗೆ ಸುಮಾರು 22 ಲಕ್ಷ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಉಳಿದ ಅಭ್ಯರ್ಥಿಗಳು ಮಾರ್ಚ್ ಏಪ್ರಿಲ್ ಹಾಗೂ ಮೇ ಸೆಶನ್ ನಲ್ಲಿ ಶಾಮೀಲಾಗಲಿದ್ದಾರೆ.

JEE Main 2021 Result ಈ ರೀತಿ ಡೌನ್ ಲೋಡ್ ಮಾಡಿ
- ಎಲ್ಲಕ್ಕಿಂತ ಮೊದಲು ಅಹ್ದಿಕೃತ ವೆಬ್ ಸೈಟ್ ಆಗಿರುವ  jeemain.nta.nic.in ಗೆ ಭೇಟಿ ನೀಡಿ.
- ಹೋಂ ಪೇಜ್ ನಲ್ಲಿ ನೀಡಲಾಗಿರುವ ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ಕಿಸಿ.
- ಬಳಿಕ ತೆರೆದುಕೊಳ್ಳುವ ಹೊಸ ಪುಟದಲ್ಲಿ ಲಾಗಿನ್ ಕ್ರೆಡೆನ್ಸಿಯಲ್ಸ್ ಭರ್ತಿ ಮಾಡಿ ಸಬ್ಮಿಟ್ ಆಯ್ಕೆಯನ್ನು ಕ್ಲಿಕ್ಕಿಸಿ.
- ನಿಮ್ಮ ರಿಸಲ್ಟ್ ಅಧಿಕೃತ ವೆಬ್ ಸೈಟ್ ಮೇಲೆ ಪ್ರಕಟಗೊಳ್ಳಲಿದೆ.

ಇದನ್ನೂ ಓದಿ-NEET, JEE Main 2021 Syllabus Change! NTA ಗೆ ಶಿಕ್ಷಣ ಸಚಿವಾಲಯ ನೀಡಿದೆ ಈ ಗೈಡ್ ಲೈನ್ಸ್

JEE Main 2021  ಫಲಿತಾಂಶದ ಮಹತ್ವಪೂರ್ಣ ಅಂಶಗಳು
JEE Main 2021 ಪರೀಕ್ಷೆಯ ಸಾಧನೆಯ ಆಧಾರದ ಮೇಲೆ ಕೇವಲ 6 ಅಭ್ಯರ್ಥಿಗಳಿಗೆ 100% ಶ್ರೇಯಾಂಕ ನೀಡಲಾಗುವುದು. ಅಧಿಕೃತ ವೆಬ್‌ಸೈಟ್‌ನಲ್ಲಿ  NTA ಬಿಡುಗಡೆ ಮಾಡಿದ ಸಾಮಾನ್ಯೀಕರಣ ಪ್ರಕ್ರಿಯೆಯ ಆಧಾರದ ಮೇಲೆ ಶೇಕಡಾವನ್ನು ಲೆಕ್ಕಹಾಕಲಾಗುತ್ತದೆ.  NTA  ದಶಮಾಂಶದ 8 ಅಂಕೆಗಳವರೆಗೆ ಶೇಕಡಾವಾರು ಘೋಷಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಮಾತ್ರ ಇದನ್ನು ಬದಲಾಯಿಸಲಾಗುತ್ತದೆ.  ಸಂಬಂಧಿತ ವಿದ್ಯಾರ್ಥಿಗಳ ಇತರ ಯಾವುದೇ ಸೆಶನ್ ನ ಪರ್ಸೆಂಟಾಯಿಲ್ ನಲ್ಲಿನ ಉತ್ತಮ ಪ್ರದರ್ಶನ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ- JEE Main 2021: ಪರೀಕ್ಷೆಯ ಅಧಿಸೂಚನೆಯನ್ನು ಅಧಿಕೃತ ವೆಬ್ ಸೈಟ್ ನಿಂದ ತೆಗೆದುಹಾಕಿದ NTA, ಕಾರಣ ಇಲ್ಲಿದೆ

NTA, JEE Main 2021 ರ ಶ್ರೇಯಾಂಕ ಪಟ್ಟಿಯನ್ನು ಇಂದು ಬಿಡುಗಡೆ ಮಾಡುತ್ತಿಲ್ಲ. ಉಳಿದ ಮಾರ್ಚ್, ಪರಿಲ್ ಹಾಗೂ ಮೇ ಸೆಷನ್ಸ್ ಗಳಲ್ಲಿನ ವಿದ್ಯಾರ್ಥಿಗಳ ಪ್ರದರ್ಶನದ ಆಧಾರದ ಮೇಲೆ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ- JEE Main Exam 2021 Dates: ಫೆಬ್ರವರಿ 23 ರಿಂದ JEE Main 2021 ಪರೀಕ್ಷೆ ಆರಂಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News