ನವದೆಹಲಿ: ಜಸ್ಟ್ 10 ನೇ ತರಗತಿ ಪಾಸಾಗಿದ್ದರೂ, ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬಹುದು. ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ (BHEL) ಸೇರಲು ಇಲ್ಲಿದೆ ಸುವರ್ಣಾವಕಾಶ. ಈ ಸಂಬಂಧ ಬಿಹೆಚ್‍ಇಎಲ್  ರಿಕ್ರೂಟ್ಮೆಂ ಟ್ ನೋಟಿಫಿಕೇಶನ್ (BHEL Recruitment Notification) ಜಾರಿ ಮಾಡಿದೆ. 


COMMERCIAL BREAK
SCROLL TO CONTINUE READING

ಟ್ರೇಡ್ ಅಪ್ರೆಂಟಿಸ್ (Trade Apprentice) ವಿಭಾಗದಲ್ಲಿ ಬರುವ ಬೇರೆ ಬೇರೆ ಹುದ್ದೆಗಳಿಗೆ ಬಿಹೆಚ್ಇಎಲ್ (BHEL) ನೋಟಿಫಿಕೇಶನ್ ಜಾರಿ ಮಾಡಿದೆ. ಇದಕ್ಕಾಗಿ ನೀವು ಯಾವುದೇ ಪರೀಕ್ಷೆ ಬರೆಯಬೇಕಾಗಿಲ್ಲ.  ನೇರ ನೇಮಕಾತಿಯಲ್ಲಿ (Direct Recruitment) ಪಾಲ್ಗೊಳ್ಳಬಹುದು. 


ಇದನ್ನೂ ಓದಿ : Petrol-Diesel ಬಗ್ಗೆ ಮಹತ್ವದ ಸೂಚನೆ ನೀಡಿದ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?


ನೇಮಕಾತಿ ಪ್ರಕ್ರಿಯೆ ಆರಂಭ :
ಈ ನೇಮಕಾತಿಯ ಆನ್ ಲೈನ್ (Online)  ಪ್ರಕ್ರಿಯೆ ಆರಂಭವಾಗಿದೆ. 300 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.  ನೆನಪಿಡಿ.  ಆನ್ ಲೈನ್ ಅಪ್ಲಿಕೇಶನ್ ಹಾಕಲು ಕೊನೆಯ ದಿನಾಂಕ ಫೆ. 22, 2021 (Last Date)


ಮೊದಲು ಹೀಗೆ ಮಾಡಿ :
ಆಸಕ್ತರು ಎನ್ಎಪಿಎಸ್ ಪೋರ್ಟಲ್ನಲ್ಲಿ (NAPS Portal) ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬೇಕು. ಇಲ್ಲಿ ರಿಜಿಸ್ಟ್ರೇಶನ್ ಮಾಡಿಸಿಕೊಂಡ ಮೇಲೆ, ಒಂದು ರಿಜಿಸ್ಟ್ರೇಶನ್ ನಂಬರ್ ಸಿಗುತ್ತದೆ. ಅದರ ನೆರವಿನಿಂದ ಬಿಹೆಚ್ಇಎಲ್ ಭೋಪಾಲ್ websiteಗೆ ಹೋಗಿ ನೇಮಕಾತಿ ಪ್ರಕ್ರಿಯೆಗೆ ನೋಂದಾಯಿಸಿಕೊಳ್ಳಬಹುದು.



ಇದನ್ನೂ ಓದಿ : Honda CB 350 RS ಬೈಕ್ ಬುಕಿಂಗ್ ಪ್ರಾರಂಭ, ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ


ಅಗತ್ಯ ಅರ್ಹತೆಗಳು (Eligibility) :
ವಿಷಯಕ್ಕೆ ಸಂಬಂಧಿಸಿದ ಐಟಿಐ (ITI) ಡಿಪ್ಲೋಮಾ ಕೋರ್ಸ್ ಹೊಂದಿರಬೇಕು. ವಯಸ್ಸು 18 ರಿಂದ 27. ಮೀಸಲು ಕೆಟಗೆರಿಯವರಿಗೆ ಗರಿಷ್ಠ ವಯೋಮಾನದಲ್ಲಿ ರಿಯಾಯಿತಿ ಇದೆ. 


300 ಹುದ್ದೆಗಳು :
ಎಲೆಕ್ಟ್ರಿಶಿಯನ್ - 80, ಫಿಟ್ಟರ್ 80, ವೆಲ್ಡರ್ 20, ಟರ್ನರ್ 20, ಮೆಶಿನಿಸ್ಟ್ 30, ಡ್ರಾಫ್ಟಸ್ಮೆನ್ 5, ಎಲೆಕ್ಟ್ರಾನಿಕ್ಸ್ (Mechanic) 5,  ಬಡಗಿ -5, ಪ್ಲಂಬರ್ 5, ಮೆಕಾನಿಕ್ ಮೋಟಾರ್ 5, ಬ್ರಿಕ್ ಲೆಯರ್ 5, ಪೈಂಟರ್ 5 ಸೇರಿ ಒಟ್ಟು 300 ಹುದ್ದೆಗಳು ಖಾಲಿ ಇವೆ. 
ಹಾಗಾಗಿ ತಡ ಯಾಕೆ, ಕೊನೆಯ ದಿನದ ತನಕ ಕಾಯಬೇಡಿ. ಈಗಲೇ ಕೆಲಸದ ಶಿಕಾರಿ ಶುರು ಮಾಡಿ. ಆಲ್ ದಿ ಬೆಸ್ಟ್..


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.