ನವದೆಹಲಿ:  ಒಡಿಶಾದ ಸಂಬಲ್ಪುರದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯ ಹೆಲಿಕಾಪ್ಟರ್ ಪರೀಕ್ಷಿಸಿದ್ದಕ್ಕೆ ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ರನ್ನು ಚುನಾವಣಾ ಆಯೋಗ ಅಮಾನತು ಮಾಡಿದೆ.


COMMERCIAL BREAK
SCROLL TO CONTINUE READING

ಎಸ್ಪಿಜಿ ರಕ್ಷಕರ ಸೂಚನೆಯನ್ನು ಮೊಹಮ್ಮದ್ ಮೊಹ್ಸಿನ್ ಅನುಸರಿಸಲಿಲ್ಲ ಎನ್ನುವ ಕಾರಣ ನೀಡಿ, ಈಗ ಚುನಾವಣಾ ಆಯೋಗ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಆದರೆ ಮತದಾನದ ವೇಳೆಯಲ್ಲಿ ಯಾರಿಗೂ ತಪಾಸಣೆಯಿಂದ ವಿನಾಯಿತಿ ನೀಡುವ ನಿಯಮವಿಲ್ಲ.ಈ ಹಿನ್ನಲೆಯಲ್ಲಿ ಪ್ರತಿಪಕ್ಷ ಈಗ ಕ್ರಮವನ್ನು ಖಂಡಿಸಿ ಸರಣಿ ಟ್ವೀಟ್ ಮಾಡಿದೆ.   



1996 ರ ಬ್ಯಾಚ್ ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಮೊಹಮ್ಮದ್ ಮೊಹ್ಸಿನ್ ಅವರು ಕರ್ತವ್ಯದ ನಿರ್ಲಕ್ಷ್ಯದ  ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಈಗ ಅಮಾನತು ಮಾಡಲಾಗಿದೆ.ಸಂಬಲಪುರ್ ನಲ್ಲಿ ಅವರು ಪ್ರಧಾನಿಯವರ ಹೆಲಿಕಾಪ್ಟರ್ ನ್ನು ತಪಾಸಣೆ ಮಾಡಿದ ಹಿನ್ನಲೆಯಲ್ಲಿ 15 ನಿಮಿಷಗಳ ಕಾಲ ತಡವಾಗಿದೆ.


ಇನ್ನೊಂದೆಡೆಗೆ ಅವರು ತಮ್ಮನ್ನು ಅಮಾನತ್ತುಗೊಳಿಸಿರುವ ಬಗ್ಗೆ ಸ್ಪಷ್ಟನೆ ಕೇಳಿದಾಗ, ಚುನಾವಣಾ ಆಯೋಗದ ವಕ್ತಾರರು "ಆದೇಶದಲ್ಲಿ ಉಲ್ಲೇಖಿಸಿದಂತೆ ...10.4.14  ರಂದು ಎಸ್ಪಿಜಿ ರಕ್ಷಕರನ್ನು ಪರಿಶೀಲನೆಯಿಂದ ಮುಕ್ತಗೊಳಿಸಲಾಗಿದೆ ಎಂದು ಉತ್ತರಿಸಿದ್ದಾರೆ.