ಹುಬ್ಬಳ್ಳಿ: ಭಾರತವನ್ನು 58 ವರ್ಷಗಳ ಸುದೀರ್ಘ ಕಾಲ ಗಾಂಧಿ ಕುಟುಂಬವೇ ಆಳಿದ್ದು, ನಕಲಿ ಗಾಂಧಿ ಕಂಪನಿಯದ್ದೇ ಕಾರುಬಾರಿತ್ತು. ಹಾಗಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ. ಗಾಂಧಿ ಕುಟುಂಬದಲ್ಲಿ ಅಂದಿಗೂ-ಇಂದಿಗೂ ಬಹಳ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದಾರೆ.
ಈಗಿನ ಗಾಂಧಿ ಕಂಪನಿಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ:
ಈಗಿನ ಗಾಂಧಿ ಕಂಪನಿಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ.ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ಧೈರ್ಯವೂ ಕಾಂಗ್ರೆಸ್ಸಿಗಿಲ್ಲ. ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದರೆ ಬರುವ ವೋಟು ಕೂಡಾ ಬರುವುದಿಲ್ಲ ಎಂಬ ಭಯ ಕಾಂಗ್ರೆಸಿಗಿದೆ ಎಂದು ಜೋಶಿ ಲೇವಡಿ ಮಾಡಿದರು.
ಇದನ್ನೂ ಓದಿ : ಪೆನ್ ಡ್ರೈವ್ ಪ್ರಕರಣದಿಂದ ನುಣುಚಿಕೊಳ್ಳಲು ಶಿವಕುಮಾರ್ ವಿರುದ್ಧ ಅನಗತ್ಯ ಆರೋಪ ಮಾಡ್ತಿದ್ದಾರೆ: ಡಿ.ಕೆ. ಸುರೇಶ್
ಒಂದು ಸುರಕ್ಷಿತ,ಸುಭದ್ರ ದೇಶಕ್ಕೆ ರಕ್ಷಣಾ ನೀತಿ,ಬಲಿಷ್ಠ ಆರ್ಥಿಕ ನೀತಿ ಇರಬೇಕು. ಆದರೆ, ಕಾಂಗ್ರೆಸ್ ಗೆ ದೇಶದ ರಕ್ಷಣೆ ಬೇಕಿಲ್ಲ.ಬರೀ ಅಧಿಕಾರ, ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣಕ್ಕೇ ಮಹತ್ವ ಕೊಡುತ್ತದೆ ಎಂದು ಆರೋಪಿಸಿದರು.
ಮೋದಿ ನೇತೃತ್ವದ ಭಾರತ ಬಲಿಷ್ಠ:
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಭಾರತ ಬಲಿಷ್ಠವಾಗುತ್ತಿದೆ. ಜಾಗತಿಕವಾಗಿ ತನ್ನ ತಾಕತ್ತನ್ನು ಪ್ರದರ್ಶಿಸಿದೆ ಎಂದು ಪ್ರತಿಪಾದಿಸಿದರು.
ಹಿಂತಿರುಗಿ ನೋಡದ ಭಾರತ: ಆರ್ಥಿಕವಾಗಿ ಭಾರತ ಹಿಂತಿರುಗಿ ನೋಡದಂತೆ ಸಶಕ್ತವಾಗಿದೆ.ಅಭಿವೃದ್ಧಿಯಲ್ಲೂ ಮುಂದಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು "ಮೋದಿ ಇಂಡಿಯಾ" ಎಂದು ಗುರುತಿಸುವಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದೆ ಎಂದು ಹೇಳಿದರು.
ಇದನ್ನೂ ಓದಿ : Hassan PenDrive Case: ಮೇ 3ರಂದು ಜರ್ಮನಿಯಿಂದ ಬೆಂಗಳೂರಿಗೆ ಪ್ರಜ್ವಲ್ ರೇವಣ್ಣ ವಾಪಸ್!
ಕಾಂಗ್ರೆಸ್ 60 ವರ್ಷದ ಆಡಳಿತದಲ್ಲಿ 60000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿತ್ತು. ಆದರೆ ವಾಜಪೇಯಿ ಅವರು ಐದೇ ವರ್ಷದಲ್ಲಿ 30000 ಕಿ.ಮೀ.ಹೆದ್ದಾರಿ ನಿರ್ಮಿಸಿದರು. ಇನ್ನು ಪ್ರಧಾನಿ ಮೋದಿ ಹತ್ತೇ ವರ್ಷದಲ್ಲಿ 4 ಲೈನ್, 6 ಲೈನ್, 8 ಲೈನ್, 10 ಲೈನ್ ಎಲ್ಲಾ ಸೇರಿ ಒಟ್ಟು 60000 ಕೈ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ್ದಾರೆ ಎಂದು ಸಚಿವ ಜೋಶಿ ವಿವರಿಸಿದರು.
ಭಯೋತ್ಪಾದನೆಗೆ ಬೀಗ:
ಹಿಂದೆ ದೇಶಾದ್ಯಂತ ಬಾಂಬ್ ಗಳು ಹಾರುತ್ತಿದ್ದವು.ಸೈನಿಕರನ್ನು,ಅಮಾಯಕ ಜನರನ್ನು ಕಳೆದುಕೊಂಡು ಮೇಣದ ಬತ್ತಿ ಹಚ್ಚಿ ಸುಮ್ಮನಾಗುವ ಕಾಲವಿತ್ತು. ಇದೀಗ ಈ ದಿನಗಳಿಲ್ಲ.ಭಯೋತ್ಪಾದಕರು ತಯಾರಾಗುವ ತಾಣದಲ್ಲೇ ಹೊಡೆದುರುಳಿಸುವಷ್ಟು ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.