ಪಾರಿಜಾತ ಎಲೆ ಕಷಾಯ

  • May 01, 2024, 08:02 AM IST
1 /7

ಪಾರಿಜಾತ ಹೂವು ಮೂಳೆಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಯುರಿಕ್‌ ಆಸಿಡ್‌ ಮಟ್ಟ ಹೆಚ್ಚಾದಾಗ ಪಾರಿಜಾತ ಹೂವನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಇದರಿಂದ ಕಿಡ್ನಿ ಸ್ಟೋನ್‌ ಸಹ ಕರಗುವುದು.

2 /7

ಯುರಿಕ್‌ ಆಸಿಡ್‌ ಹೆಚ್ಚಾದಾಗ ಮೂಳೆಗಳ ನಡುವೆ ಪ್ಯೂರಿನ್ ಸಂಗ್ರಹವಾಗುತ್ತದೆ. ಪಾರಿಜಾತ ಹೂವು ಈ  ಪ್ಯೂರಿನ್ ಅನ್ನು ತೆಗೆದುಹಾಕುವುದರ ಜೊತೆಗೆ ಕೀಲು ನೋವನ್ನು ಸಹ ಕಡಿಮೆ ಮಾಡುತ್ತದೆ.

3 /7

ಪಾರಿಜಾತ ಹೂವು ಕೀಲುಗಳ ನಡುವಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮರದ ಹೂವು ಮತ್ತು ಎಲೆಗಳೆರಡೂ ಕೀಲುಗಳ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ‌

4 /7

ಪಾರಿಜಾತ ಹೂವಿನ ಕಷಾಯವನ್ನು ತಯಾರಿಸಿ ಕುಡಿದರೆ ಯುರಿಕ್‌ ಆಸಿಡ್‌ ಕರಗಿ ಮೂತ್ರದ ಮೂಲಕ ಹೊರ ಹೋಗುತ್ತದೆ. ಅಲ್ಲದೇ ಕಿಡ್ನಿ ಸ್ಟೋನ್‌ ಪುಡಿಯಾಗಿ ಕರಗಲು ಸಹಾಯವಾಗುತ್ತದೆ. 

5 /7

ಪಾರಿಜಾತ ಹೂವಿನ ಕಷಾಯ ತಯಾರಿಸುವ ವಿಧಾನ : 3 - 4 ಪಾರಿಜಾತ ಹೂವುಗಳನ್ನು ಅದರ 2 ಎಲೆಗಳೊಂದಿಗೆ ಬೆರೆಸಿ ನೀರಿನಲ್ಲಿ ಕುದಿಸಿ. ಈಗ ಈ ನೀರನ್ನು ಫಿಲ್ಟರ್ ಮಾಡಿ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. 

6 /7

ಕೀಲು ನೋವು ಕಾಡುತ್ತಿದ್ದರೆ ಈ ಹೂವಿನ ಪೇಸ್ಟ್‌ ಅನ್ನು ನೋವಿರುವ ಜಾಗಕ್ಕೆ ಹಚ್ಚಬೇಕು. ಊತ ಮತ್ತು ನೋವು ಶೀಘ್ರವೇ ಗುಣವಾಗುವುದು. 

7 /7

ಸೂಚನೆ: ಈ ಲೇಖನವು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.