ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಸೋರಿಕೆಯಾಗಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. 


COMMERCIAL BREAK
SCROLL TO CONTINUE READING

ಮಾರ್ಚ್.27ರಂದು ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸುವ ಮುನ್ನವೇ ಕೆಲವೊಂದು ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದಿನಾಂಕ ಸೋರಿಕೆಯಾಗಿತ್ತು. ಅಲ್ಲದೆ, ಬಿಜೆಪಿ ಐಟಿ ಸೆಲ್'ನ ಅಮಿತ್ ಮಾಳವೀಯ, ಕರ್ನಾಟಕ ಕಾಂಗ್ರೆಸ್ ಐಟಿ ಹೆಡ್ ಶ್ರೀವತ್ಸ ಸೇರಿ ಅನೇಕರು ಮತದಾನದ ದಿನಾಂಕಗಳನ್ನು ಸರಿಯಾಗಿಯೇ ಹೇಳಿದ್ದರೂ ಸಹ ಮತ ಎಣಿಕೆ ದಿನವನ್ನು ತಪ್ಪಾಗಿ ಪ್ರಕಟಿಸಿದ್ದರು.


ಚುನಾವಣಾ ಆಯೋಗಕ್ಕೂ ಮೊದಲೇ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ


ಈ ಹಿನ್ನೆಲೆಯಲ್ಲಿ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗ ಒಂದು ಸಮಿತಿಯನ್ನೂ ರಚಿಸಿತ್ತು. ಇದೀಗ ಆ ಸಮಿತಿ ವರದಿ ಸಲ್ಲಿಸಿದ್ದು, "ಚುನಾವಣಾ ಆಯೋಗದಿಂದ ಮಾಹಿತಿ ಸೋರಿಕೆ ಆಗಿಲ್ಲ" ಎಂದು ವರದಿಯಲ್ಲಿ ಉಲ್ಲೇಖಿಸಿದೆ. 


ಕರ್ನಾಟಕ ಚುನಾವಣೆ ದಿನಾಂಕ ಮಾಹಿತಿ ಸೋರಿಕೆ ತನಿಖೆಗೆ ಸಮಿತಿ ರಚನೆ


ಮಾರ್ಚ್ 28 ರಂದು ಚುನಾವಣಾ ಆಯೋಗ ಮಾಹಿತಿ ಸೋರಿಕೆ ಬಗ್ಗೆ ತನಿಖೆಗಾಗಿ ಆರು ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡಿತ್ತು. "ಚುನಾವಣೆ ದಿನಾಂಕ ಆಯೋಗ ಪ್ರಕಟಿಸುವುದಕ್ಕೂ ಮುನ್ನವೇ ಸೋರಿಕೆ​ ಆಗಿದ್ದು ಊಹಾತ್ಮಕವಾಗಿದೆ. ಆದರೆ ಅದನ್ನು ತಪ್ಪಿಸಬಹುದಿತ್ತು. ಸಮಯ, ಸಂದರ್ಭ ಅರಿತು ರಾಜಕೀಯ ಪಕ್ಷಗಳೂ ಸಹ ಅಂತಹ ಊಹಾತ್ಮಕ ಟ್ವೀಟ್​ ಅನ್ನು ಮಾಡಬಾರದಿತ್ತು’ ಎಂಡು ಸಮಿತಿ ಅಭಿಪ್ರಾಯಪಟ್ಟಿದೆ.


‘ಅಲ್ಲದೆ, ಈ ಊಹಾತ್ಮಕ ಟ್ವೀಟ್ ನಿಖರವಾಗಿಯೇನೂ ಇರಲಿಲ್ಲ. ಅದನ್ನು ಊಹೆ ಮಾಡಿ ಹೇಳಲಾಗಿದೆಯಷ್ಟೇ. ಹಾಗಾಗಿ, ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ" ಎಂದು ಸಮಿತಿ ಅಭಿಪ್ರಾಯಪಟ್ಟಿದೆ.