Rain Alert in India and Karnataka: ದೆಹಲಿಯ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯ ನಂತರ ಹವಾಮಾನವು ಆಹ್ಲಾದಕರವಾಗಿದೆ. ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿಯ ಹವಾಮಾನವು ಇದ್ದಕ್ಕಿದ್ದಂತೆ ಬದಲಾಗಿದ್ದು, ದಟ್ಟವಾದ ಮೋಡಗಳು ಕಾಣಿಸಿಕೊಂಡು, ಬಳಿಕ ನಗರದ ಹಲವೆಡೆ ಜೋರು ಗಾಳಿ ಸಹಿತ ಮಳೆಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆಸೀಸ್ ವಿರುದ್ಧದ 2ನೇ ಏಕದಿನಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ! ಈ ಆಟಗಾರನ ಬದಲು ಸಿರಾಜ್’ಗೆ ಅವಕಾಶ


ಪೂರ್ವ ದೆಹಲಿಯ ದಿಲಾಶದ್ ಗಾರ್ಡನ್ ಪ್ರದೇಶದಲ್ಲಿ ಮಳೆಯಿಂದಾಗಿ ಶಾಲೆಯ ಗೋಡೆ ಕುಸಿದು ಸುಮಾರು 11 ವಾಹನಗಳು ಜಖಂಗೊಂಡಿವೆ. ವಾಯುವ್ಯ ದೆಹಲಿಯ ಪಶ್ಚಿಮ ಶಾಲಿಮಾರ್ ಬಾಗ್, ಶಾಲಿಮಾರ್ ಬಾಗ್‌’ನ ಬಿಎಫ್ ಬ್ಲಾಕ್ ಮತ್ತು ಉತ್ತರ ದೆಹಲಿಯ ಮಾಡೆಲ್ ಟೌನ್ ಪ್ರದೇಶದ ಗುಜ್ರಾನ್‌’ವಾಲಾ ಟೌನ್‌’ನಲ್ಲಿ ಮರಗಳು ಧರೆಶಾಹಿಯಾಗಿವೆ ಎಂದು ತಿಳಿದುಬಂದಿದೆ.


ದೆಹಲಿ-ಗುರುಗ್ರಾಮ ಗಡಿ ಸೇರಿದಂತೆ ರಾಷ್ಟ್ರ ರಾಜಧಾನಿಯ ಹಲವೆಡೆ ಮಳೆಯಿಂದಾಗಿ ಸಂಚಾರಕ್ಕೆ ತೊಂದರೆಯಾಗಿದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಪ್ರಕಾರ, ವಾಯವ್ಯ ದೆಹಲಿಯ ಕಾಜಾವಾಲಾ ರಸ್ತೆಯಲ್ಲಿರುವ ಟಾಟಾ ಪವರ್ ಲಿಮಿಟೆಡ್ ಕಚೇರಿಯ ಬಳಿ ನೀರು ನುಗ್ಗಿದೆ.


ಶನಿವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನ 35.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಸರಾಸರಿಗಿಂತ ಒಂದು ಡಿಗ್ರಿ ಹೆಚ್ಚಾಗಿತ್ತು. ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸಾಮಾನ್ಯಕ್ಕಿಂತ ಮೂರು ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಮಾಹಿತಿ ನೀಡಿದೆ.


ಭಾನುವಾರದಂದು ಅಂದರೆ ಇಂದು ಹಗುರವಾದ ತುಂತುರು ಮಳೆಯೊಂದಿಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ ಎಂದು IMD ಹೇಳಿದೆ. ಭಾನುವಾರದಂದು ರಾಷ್ಟ್ರ ರಾಜಧಾನಿಯ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 36 ಮತ್ತು 25 ಡಿಗ್ರಿಗಳಾಗುವ ಸಾಧ್ಯತೆಯಿದೆ.


ಕರ್ನಾಟಕದಲ್ಲಿ ಮಳೆ:


ಶನಿವಾರ ರಾತ್ರಿ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ರಾಯಚೂರು ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು ಅವಾಂತರ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ. ಆದರೆ ಅನೇಕ ದಿನಗಳ ಬಳಿಕ ಮಳೆರಾಯನ ಪ್ರವೇಶ ಕಂಡು, ಈ ಭಾಗದ ಜನರ ಮೊಗದಲ್ಲಿ ಸಂತಸ ಮೂಡಿದೆ.


ಇದನ್ನೂ ಓದಿ: ನಾಯಕ ರೋಹಿತ್ ಶರ್ಮಾರ ಅತ್ಯಂತ ನೆಚ್ಚಿನ ಓಪನಿಂಗ್ ಬ್ಯಾಟ್ಸ್’ಮನ್ ಯಾರು ಗೊತ್ತಾ?


ಇನ್ನು ಇಂದು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ನೆರೆ ರಾಜ್ಯ  ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದರ ಪರಿಣಾಮ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಬೀಳುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ