ನಾಯಕ ರೋಹಿತ್ ಶರ್ಮಾರ ಅತ್ಯಂತ ನೆಚ್ಚಿನ ಓಪನಿಂಗ್ ಬ್ಯಾಟ್ಸ್’ಮನ್ ಯಾರು ಗೊತ್ತಾ?

Rohit Sharma favourite Opening Partner: ಪ್ರಸ್ತುತ, ರೋಹಿತ್ ಶರ್ಮಾ ಜೊತೆಗೆ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಇದಕ್ಕೂ ಮುನ್ನ ಕೆಎಲ್ ರಾಹುಲ್ ಕೂಡ ರೋಹಿತ್ ಜೊತೆಗೆ ಓಪನಿಂಗ್ ಜವಾಬ್ದಾರಿ ಹೊತ್ತಿದ್ದರು.

Written by - Bhavishya Shetty | Last Updated : Sep 24, 2023, 12:47 PM IST
    • ರೋಹಿತ್ ಶರ್ಮಾ ಮುಂಬರುವ ವಿಶ್ವಕಪ್‌ ತಯಾರಿಯಲ್ಲಿ ನಿರತರಾಗಿದ್ದಾರೆ.
    • ರೋಹಿತ್ ತಮ್ಮ ನೆಚ್ಚಿನ ಆರಂಭಿಕ ಆಟಗಾರನ ಹೆಸರನ್ನು ಬಹಿರಂಗಪಡಿಸಿದ್ದಾರೆ
    • ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಿಂದಲೂ ಧವನ್ ಅವರನ್ನು ಕಡೆಗಣಿಸಲಾಗಿತ್ತು.
ನಾಯಕ ರೋಹಿತ್ ಶರ್ಮಾರ ಅತ್ಯಂತ ನೆಚ್ಚಿನ ಓಪನಿಂಗ್ ಬ್ಯಾಟ್ಸ್’ಮನ್ ಯಾರು ಗೊತ್ತಾ? title=
Rohit Sharma-Shikhar Dhawan

Rohit Sharma favourite Opening Partner: ಟೀಂ ಇಂಡಿಯಾದ ನಿಯಮಿತ ನಾಯಕ ರೋಹಿತ್ ಶರ್ಮಾ ಮುಂಬರುವ ವಿಶ್ವಕಪ್‌ ತಯಾರಿಯಲ್ಲಿ ನಿರತರಾಗಿದ್ದಾರೆ. ಸೆಪ್ಟೆಂಬರ್ 27 ರಂದು, ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ODI (IND vs AUS ODI) ನಲ್ಲಿ ರೋಹಿತ್ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ತಮ್ಮ ವೃತ್ತಿಜೀವನದಲ್ಲಿ ಆರಂಭಿಕರಾಗಿ ಹಲವು ದಾಖಲೆಗಳನ್ನು ಸಾಧಿಸಿದ್ದಾರೆ. ಇದೀಗ ತಮ್ಮ ನೆಚ್ಚಿನ ಆರಂಭಿಕ ಆಟಗಾರನ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಶುಭ್ಮನ್-ಸಾರಾ ಪ್ರೀತಿ ನಿಜ! 3 ವರ್ಷದ ಗೊಂದಲಕ್ಕೆ ಅಂತ್ಯ ಹಾಡಿದ ಸಚಿನ್ ಪುತ್ರಿಯ ಆ ಟ್ವೀಟ್

ಪ್ರಸ್ತುತ, ರೋಹಿತ್ ಶರ್ಮಾ ಜೊತೆಗೆ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಇದಕ್ಕೂ ಮುನ್ನ ಕೆಎಲ್ ರಾಹುಲ್ ಕೂಡ ರೋಹಿತ್ ಜೊತೆಗೆ ಓಪನಿಂಗ್ ಜವಾಬ್ದಾರಿ ಹೊತ್ತಿದ್ದರು. ಅಷ್ಟೇ ಅಲ್ಲದೆ, ವಿರಾಟ್ ಕೊಹ್ಲಿ ಜೊತೆಯೂ ಓಪನಿಂಗ್ ಬ್ಯಾಟ್ಸ್’ಮನ್ ಆಗಿ ಕಣಕ್ಕಿಳಿದಿದ್ದರು. ಆದರೆ, ಅವರ ನೆಚ್ಚಿನ ಬ್ಯಾಟಿಂಗ್ ಪಾರ್ಟನರ್ ಬಗ್ಗೆ ಕೇಳಿದಾಗ, ಅವರು ಈ ಯಾರೊಬ್ಬರ ಹೆಸರನ್ನೂ ಹೇಳದಿರುವುದು ಆಶ್ವರ್ಯ ತಂದಿದೆ.

ರೋಹಿತ್ ಶರ್ಮಾ ನೆಚ್ಚಿನ ಓಪನಿಂಗ್ ಬ್ಯಾಟ್ಸ್’ಮನ್:

ರೋಹಿತ್ ಶರ್ಮಾ ಅವರು ಭಾರತದ ಅನುಭವಿ ಮತ್ತು ಶಕ್ತಿಶಾಲಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರನ್ನು ತಮ್ಮ ನೆಚ್ಚಿನ ಬ್ಯಾಟಿಂಗ್ ಪಾರ್ಟನರ್ ಎಂದು ಹೆಸರಿಸಿದ್ದಾರೆ. ಇಬ್ಬರೂ ಹಲವು ವರ್ಷಗಳ ಕಾಲ ಒಟ್ಟಿಗೆ ಇನ್ನಿಂಗ್ಸ್ ಆಡಿದ್ದಾರೆ. ಅಷ್ಟೇ ಅಲ್ಲ ಟೀಂ ಇಂಡಿಯಾ ಹಲವು ಪಂದ್ಯಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಶಿಖರ್ ಇದೀಗ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಿಲ್ಲ. ಏಷ್ಯಾಕಪ್ ಅಥವಾ ವಿಶ್ವಕಪ್‌ ತಂಡದಲ್ಲೂ ಅವರನ್ನು ಆಯ್ಕೆ ಮಾಡಲು ಅಸಾಧ್ಯವಾಗಿದೆ. ಅಷ್ಟೇ ಅಲ್ಲ, ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಿಂದಲೂ ಧವನ್ ಅವರನ್ನು ಕಡೆಗಣಿಸಲಾಗಿತ್ತು.

ಇದನ್ನೂ ಓದಿ:ಆಸೀಸ್ ವಿರುದ್ಧದ 2ನೇ ಏಕದಿನಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ! ಈ ಆಟಗಾರನ ಬದಲು ಸಿರಾಜ್’ಗೆ ಅವಕಾಶ

ಭಾರತದ ಪ್ರಮುಖ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, 'ಶಿಖರ್ ಧವನ್ ಮತ್ತು ನಾನು ಮೈದಾನದ ಒಳಗೆ ಮತ್ತು ಹೊರಗೆ ಬಹಳ ಉತ್ತಮವಾದ ಸ್ನೇಹವನ್ನು ಹೊಂದಿದ್ದೇವೆ. ನಾವು ಹಲವು ವರ್ಷಗಳಿಂದ ಒಟ್ಟಿಗೆ ಆಡಿದ್ದೇವೆ. ಅವರು (ಧವನ್) ತುಂಬಾ ಧನಾತ್ಮಕವಾಗಿ ಉಳಿದಿದ್ದಾರೆ. ವಿಭಿನ್ನ ಶಕ್ತಿಯನ್ನು ಹೊಂದಿರುವ ವ್ಯಕ್ತಿತ್ವ ಅವರದ್ದು. ನಾವು ಭಾರತಕ್ಕೆ ಆರಂಭಿಕ ಪಾಲುದಾರರಾಗಿ ಬ್ಯಾಟ್ ಬೀಸಿದಾಗಿನಿಂದ ಉತ್ತಮ ದಾಖಲೆಗಳನ್ನು ಬರೆದಿದ್ದೇವೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News