ಆಸೀಸ್ ವಿರುದ್ಧದ 2ನೇ ಏಕದಿನಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ! ಈ ಆಟಗಾರನ ಬದಲು ಸಿರಾಜ್’ಗೆ ಅವಕಾಶ

Team India Playing 11: ಇಂದೋರ್‌’ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್-11 ರಲ್ಲಿ ಬಲಿಷ್ಠ ಆಟಗಾರ ಮತ್ತೆ ಆಗಮಿಸುವುದು ಖಚಿತ ಎಂದು ಹೇಳಲಾಗುತ್ತಿದೆ.

Written by - Bhavishya Shetty | Last Updated : Sep 24, 2023, 12:12 PM IST
    • ಕೆಎಲ್ ರಾಹುಲ್ ನಾಯಕತ್ವದಲ್ಲಿ ಆಡುತ್ತಿರುವ ಭಾರತ ಕ್ರಿಕೆಟ್ ತಂಡ
    • ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಪ್ಲೇಯಿಂಗ್-11
    • ಇಂದೋರ್‌’ನಲ್ಲೂ ಟೀಂ ಇಂಡಿಯಾ ಗೆಲುವು ದಾಖಲಿಸಿದರೆ ಸರಣಿ ತನ್ನ ಹೆಸರಿಗೆ ಬರಲಿದೆ
ಆಸೀಸ್ ವಿರುದ್ಧದ 2ನೇ ಏಕದಿನಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ! ಈ ಆಟಗಾರನ ಬದಲು ಸಿರಾಜ್’ಗೆ ಅವಕಾಶ  title=
Team India Playing 11 for 2nd ODI

IND vs AUS 2nd ODI: ಭಾರತ ತಂಡ ಈಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಎರಡನೇ ODIನ್ನು ಇಂದು ಅಂದರೆ ಸೆಪ್ಟೆಂಬರ್ 24ರ ಭಾನುವಾರ ಇಂದೋರ್‌’ನಲ್ಲಿ ಆಡಲಿದೆ. ಕೆಎಲ್ ರಾಹುಲ್ ನಾಯಕತ್ವದಲ್ಲಿ ಆಡುತ್ತಿರುವ ತಂಡ ಮೊಹಾಲಿ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಇನ್ನು ಇಂದೋರ್‌’ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್-11 ರಲ್ಲಿ ಬಲಿಷ್ಠ ಆಟಗಾರ ಮತ್ತೆ ಆಗಮಿಸುವುದು ಖಚಿತ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ಶುಭಾರಂಭ: ಟೀಂ ಇಂಡಿಯಾ ಬತ್ತಳಿಕೆಗೆ 4 ಪದಕಗಳು

ಕೆಎಲ್ ರಾಹುಲ್ ನಾಯಕತ್ವದಲ್ಲಿ ಆಡುತ್ತಿರುವ ಭಾರತ ಕ್ರಿಕೆಟ್ ತಂಡ ಶುಕ್ರವಾರ ಮೊಹಾಲಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌’ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 5 ವಿಕೆಟ್ ಕಬಳಿಸಿದ ವೇಗಿ ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠರಾಗಿ ಆಯ್ಕೆಯಾದರು. ಇವರಲ್ಲದೆ 4 ಭಾರತೀಯ ಬ್ಯಾಟ್ಸ್‌ಮನ್‌’ಗಳು ಅರ್ಧಶತಕ ಸಿಡಿಸಿದ್ದರು. ಇಂದೋರ್‌’ನಲ್ಲೂ ಟೀಂ ಇಂಡಿಯಾ ಗೆಲುವು ದಾಖಲಿಸಿದರೆ ಸರಣಿ ತನ್ನ ಹೆಸರಿಗೆ ಬರಲಿದೆ.

ಮೊಹಾಲಿ ಏಕದಿನ ಪಂದ್ಯದಲ್ಲಿ ವೇಗಿ ಶಾರ್ದೂಲ್ ಠಾಕೂರ್ 10 ಓವರ್‌’ಗಳಲ್ಲಿ 78 ರನ್ ನೀಡಿ ಯಾವುದೇ ವಿಕೆಟ್ ಪಡೆಯದೆ, ಕಳಪೆ ಪ್ರದರ್ಶನ ತೋರಿದ್ದರು. ಈಗ ಅವರ ಸ್ಥಾನದಲ್ಲಿ ಮೊಹಮ್ಮದ್ ಸಿರಾಜ್‌’ಗೆ ಅವಕಾಶ ನೀಡಲು ಕೆಎಲ್ ರಾಹುಲ್ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮೊದಲ ಏಕದಿನ ಪಂದ್ಯದಲ್ಲಿ ಸಿರಾಜ್‌’ಗೆ ವಿಶ್ರಾಂತಿ ನೀಡಲಾಗಿತ್ತು. ಶಾರ್ದೂಲ್’ಗೆ ಅವಕಾಶ ಸಿಕ್ಕರೂ ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಶುಭ್ಮನ್-ಸಾರಾ ಪ್ರೀತಿ ನಿಜ! 3 ವರ್ಷದ ಗೊಂದಲಕ್ಕೆ ಅಂತ್ಯ ಹಾಡಿದ ಸಚಿನ್ ಪುತ್ರಿಯ ಆ ಟ್ವೀಟ್

ಭಾರತಕ್ಕೆ ಗೆಲುವು ಅಗತ್ಯ:

ಕಳೆದ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌’ಗಳಿಂದ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನಿಯಮಿತ ನಾಯಕ ರೋಹಿತ್ ಶರ್ಮಾ ಈ ಸರಣಿಯ ಮೊದಲ 2 ಪಂದ್ಯಗಳಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಕೆಎಲ್ ರಾಹುಲ್ ನಾಯಕತ್ವ ವಹಿಸಿಕೊಂಡಿದ್ದಾರೆ. ಇನ್ನು ಮೊದಲ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಡೇವಿಡ್ ವಾರ್ನರ್ (52) ಅರ್ಧಶತಕದ ನೆರವಿನಿಂದ ಪ್ರವಾಸಿ ತಂಡ 276 ರನ್ ಗಳಿಸಿತು. ಶಮಿ 10 ಓವರ್ ಗಳಲ್ಲಿ 51 ರನ್ ನೀಡಿ 5 ವಿಕೆಟ್ ಪಡೆದರು. ಅದೇ ಸಮಯದಲ್ಲಿ ಬುಮ್ರಾ 43 ರನ್‌’ಗಳಿಗೆ ಒಂದು ವಿಕೆಟ್ ಪಡೆದರು. ಅಶ್ವಿನ್ 47 ಮತ್ತು ಜಡೇಜಾ 51 ರನ್ ನೀಡಿ ತಲಾ ಒಂದು ವಿಕೆಟ್ ಪಡೆದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News