ಈ ನಿರ್ಧಾರ ಮೊದಲೇ ಮಾಡಿದ್ದರೆ ರೈತರ ಪ್ರಾಣ ಉಳಿಸಬಹುದಿತ್ತು - ಕೇಜ್ರಿವಾಲ್
ಪ್ರಧಾನಿ ಮೋದಿ ಈ ಬಗ್ಗೆ ಘೋಷಿಸುತ್ತಿದ್ದಂತೆಯೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ : ಮೂರು ಕೃಷಿ ಕಾನೂನುಗಳನ್ನು (Farm law withdraw) ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಘೋಷಿಸಿದ್ದಾರೆ. ಪ್ರಧಾನಿ ಮೋದಿ ಈ ಬಗ್ಗೆ ಘೋಷಿಸುತ್ತಿದ್ದಂತೆಯೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Aravind Kejriwal)ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಮೊದಲೇ ತೆಗೆದುಕೊಂಡಿದ್ದರೆ ಹುತಾತ್ಮರಾದ ರೈತರ ಜೀವಗಳನ್ನು ಉಳಿಸಬಹುದಿತ್ತು ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಸಿಎಂ ಅರವಿಂದ್ ಕೇಜ್ರಿವಾಲ್ ರೈತ ಚಳವಳಿಗಾರರನ್ನು ಅಭಿನಂದಿಸಿದ್ದಾರೆ.
ಶುಕ್ರವಾರ ಗುರುನಾನಕ್ ಜಯಂತಿಯಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ದೆಹಲಿಯ ಗುರುದ್ವಾರಕ್ಕೆ ಭೇಟಿ ನಿಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶ್ರೀ ಗುರುನಾನಕ್ ದೇವ್ ಜಿ ಮಹಾರಾಜ್ ಮಾನವೀಯತೆಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದ್ದಾರೆ. ಅವರ ಸಂದೇಶದ ಮೇರೆಗೆ ನಾವು ನಮ್ಮ ಸರ್ಕಾರವನ್ನು ನಡೆಸಲು ಪ್ರಯತ್ನಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನೂ ಓದಿ : iPhone 13 Pro Max ಅನ್ನು ಮೀರಿಸಿದೆ OPPO Smartphone, ಅರ್ಧ ಗಂಟೆಯಲ್ಲಿ ಆಗಲಿದೆ ಫುಲ್ ಚಾರ್ಜ್
ಇಂದು ಗುರುಪರ್ವದ ಸಂದರ್ಭದಲ್ಲಿ ದೇಶದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಒಂದು ವರ್ಷದಿಂದ ನಡೆಯುತ್ತಿದ್ದ ರೈತ ಚಳವಳಿಯಲ್ಲಿ (Farmer Protest) 700 ರೈತರು ಹುತಾತ್ಮರಾಗಿದ್ದಾರೆ. ಇಂದು ರೈತರು ತಮ್ಮ ಹೋರಾಟದಲ್ಲಿ ಯಶಸ್ಸು ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ರೈತರನ್ನು ಅಭಿನಂದಿಸಲು ಬಯಸುತ್ತೇನೆ. ರೈತರ ಹೋರಾಟ ಫಲ ನೀಡಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರ (Central government) ಈ ನಿರ್ಧಾರವನ್ನು ಮೊದಲೇ ತೆಗೆದುಕೊಂಡಿದ್ದರೆ, ಅನೇಕ ರೈತರ ಜೀವಗಳನ್ನು ಉಳಿಸಬಹುದಿತ್ತು ಎಂದು ಕೂಡಾ ಹೇಳಿದ್ದಾರೆ. 700 ರೈತರ ಪ್ರಾಣ ಉಳಿಯುತ್ತಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಈ ಯಶಸ್ಸು ರೈತರಿಗೆ ಸಿಕ್ಕಿರುವ ಜಯ ಅತಿ ದೊಡ್ಡ ಯಶಸ್ಸು ಎಂದು ಅವರು ಬಣ್ಣಿಸಿದ್ದಾರೆ. ಕೇಂದ್ರ ಸರ್ಕಾರವು ಮೂರು ಕಾನೂನುಗಳನ್ನು ಹಿಂಪಡೆಯುತ್ತಿದ್ದು(Farm law), ಮತ್ತೊಮ್ಮೆ ರೈತರನ್ನು ಅಭಿನಂದಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : Digital Loan: ಡಿಜಿಟಲ್ ಲೋನ್ ಆಪ್ ಗಳಿಗೆ ಕಡಿವಾಣ ಹಾಕಲು ಸಿದ್ಧತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.