GOA ASSEMBLY ELECTIONS 2022: ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಗೋವಾ ಜನತೆಗೆ ತೀರ್ಥಯಾತ್ರೆ ಉಚಿತ- ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಅಯೋಧ್ಯೆಯ ರಾಮ ಮಂದಿರ, ಅಜ್ಮೀರ್ ಷರೀಫ್ ಮತ್ತು ರಾಜ್ಯದಲ್ಲಿನ ವೇಲಂಕಣಿಯಲ್ಲಿ ಕ್ರಮವಾಗಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಉಚಿತ ರಾಜ್ಯ ಪ್ರಾಯೋಜಿತ ತೀರ್ಥಯಾತ್ರೆಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

Last Updated : Nov 1, 2021, 10:01 PM IST
  • ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಅಯೋಧ್ಯೆಯ ರಾಮ ಮಂದಿರ, ಅಜ್ಮೀರ್ ಷರೀಫ್ ಮತ್ತು ರಾಜ್ಯದಲ್ಲಿನ ವೇಲಂಕಣಿಯಲ್ಲಿ ಕ್ರಮವಾಗಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಉಚಿತ ರಾಜ್ಯ ಪ್ರಾಯೋಜಿತ ತೀರ್ಥಯಾತ್ರೆಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.
GOA ASSEMBLY ELECTIONS 2022: ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಗೋವಾ ಜನತೆಗೆ ತೀರ್ಥಯಾತ್ರೆ ಉಚಿತ- ಕೇಜ್ರಿವಾಲ್  title=
file photo

ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಅಯೋಧ್ಯೆಯ ರಾಮ ಮಂದಿರ, ಅಜ್ಮೀರ್ ಷರೀಫ್ ಮತ್ತು ರಾಜ್ಯದಲ್ಲಿನ ವೇಲಂಕಣಿಯಲ್ಲಿ ಕ್ರಮವಾಗಿ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಉಚಿತ ರಾಜ್ಯ ಪ್ರಾಯೋಜಿತ ತೀರ್ಥಯಾತ್ರೆಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ಮೂಲತಃ ದೆಹಲಿಯಲ್ಲಿ ಎಎಪಿ ಸರ್ಕಾರವು ಜಾರಿಗೆ ತಂದ ಈ ಯೋಜನೆಯನ್ನು 2022 ರ ರಾಜ್ಯವಿಧಾನಸಭಾ ಚುನಾವಣೆಯ ನಂತರ ಪಕ್ಷವು ಅಧಿಕಾರಕ್ಕೆ ಬಂದರೆ ಗೋವಾದಲ್ಲಿ ಪುನರಾವರ್ತಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ನರೇಂದ್ರ ಮೋದಿ 180 ಡಿಗ್ರಿ ಪಿಎಂ- ಅಖಿಲೇಶ್ ಯಾದವ್ ವ್ಯಂಗ್ಯ

'ನಮ್ಮ ಸರ್ಕಾರ ರಚನೆಯಾದರೆ, ನಾವು ಅಯೋಧ್ಯೆಗೆ ಉಚಿತ ತೀರ್ಥಯಾತ್ರೆಗೆ ಅನುಕೂಲ ಮಾಡಿಕೊಡುತ್ತೇವೆ ಮತ್ತು ಅವರಿಗೆ ಶ್ರೀರಾಮನ ದರ್ಶನಕ್ಕೆ ಸಹಾಯ ಮಾಡುತ್ತೇವೆ. ಕ್ರಿಶ್ಚಿಯನ್ನರಿಗೆ ವೆಲಂಕಣಿಗೆ ಉಚಿತ ತೀರ್ಥಯಾತ್ರೆ, ಮುಸ್ಲಿಮರಿಗೆ ಅಜ್ಮೀರ್ ಷರೀಫ್‌ಗೆ ತೀರ್ಥಯಾತ್ರೆ,ಗೋವಾದಲ್ಲಿ ಶಿರಡಿಯನ್ನು ಬಹುವಾಗಿ ನಂಬುವುದರಿಂದ,ನಾವು ಅವರಿಗೆ ಶಿರಡಿ ತೀರ್ಥಯಾತ್ರೆಗೆ ಅವಕಾಶವನ್ನು ನೀಡುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು, ಕೆಲವು ವರ್ಷಗಳ ಹಿಂದೆ ದೆಹಲಿ ಸರ್ಕಾರವು ಪರಿಚಯಿಸಿದ ನಂತರ 35,000 ಜನರು ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಅಖಿಲೇಶ್ ಯಾದವ್ ಹೇಳಿಕೆ ವಿರುದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಾ ಪ್ರಹಾರ

"ನಾನು ಇತ್ತೀಚೆಗೆ ಅಯೋಧ್ಯೆಗೆ ಹೋಗಿದ್ದೆ ನಾನು ರಾಮಮಂದಿರಕ್ಕೆ ಹೋದೆ, ರಾಮಲಲ್ಲಾನ ದರ್ಶನವನ್ನು ಪಡೆದುಕೊಂಡೆ,ತುಂಬಾ ಸಂತೋಷವಾಯಿತು.ಭಗವಾನ್ ರಾಮನ ದರ್ಶನವನ್ನು ಪಡೆಯುವ ಮೂಲಕ ನನಗೆ ಸಿಕ್ಕಿದ ತೃಪ್ತಿ ಎಂದು ನಾನು ಭಾವಿಸುತ್ತೇನೆ.ಇದು ಪ್ರತಿಯೊಬ್ಬರೂ ಅನುಭವಿಸಬೇಕಾದ ಸಂಗತಿಯಾಗಿದೆ ಎಂದು ಕೇಜ್ರಿವಾಲ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News