ನವದೆಹಲಿ: ಲಖಿಂಪುರ್ ಖೇರಿಯ ರೈತರ ಹತ್ಯಾಕಾಂಡದ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಮಂತ್ರಿ, ಅವರು ಮಂತ್ರಿ ಮಗನನ್ನು ರಕ್ಷಿಸಿದ್ದಾರೆ ಎಂದು ಆರೋಪಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Petrol Diesel Price: ರಾಜ್ಯಗಳು ಬಯಸಿದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಮಾಡಬಹುದು- ಕೇಂದ್ರ ಪೆಟ್ರೋಲಿಯಂ ಸಚಿವ


ಭಾನುವಾರದಂದು ಮೋದಿಯವರ ಸಂಸತ್ ಕ್ಷೇತ್ರ ವಾರಣಾಸಿಯಲ್ಲಿ ನಡೆದ 'ಕಿಸಾನ್ ನ್ಯಾಯ' ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಕಳೆದ ವಾರ, ಕೇಂದ್ರದ ಸಚಿವರ ಮಗ ತನ್ನ ವಾಹನದಿಂದ 6 ರೈತರ ಸಾವಿಗೆ ಕಾರಣನಾಗಿದ್ದಾನೆ.ಎಲ್ಲ ಸಂತ್ರಸ್ತರ ಕುಟುಂಬಗಳು ತಮಗೆ ನ್ಯಾಯ ಬೇಕು ಎಂದು ಕೂಗುತ್ತಿದ್ದಾರೆ.ಆದರೆ ಸರ್ಕಾರವು ಮಂತ್ರಿ ಮತ್ತು ಆತನ ಮಗನನ್ನು ರಕ್ಷಿಸುತ್ತಿದೆ ಎಂದು ನೀವೆಲ್ಲರೂ ನೋಡಿದ್ದೀರಿ 'ಎಂದು ಪ್ರಿಯಾಂಕಾ ಗಾಂಧಿ (Priyanka Gandhi) ಹೇಳಿದರು.


ಇದನ್ನೂ ಓದಿ: ಕಾಂಗ್ರೆಸ್‌ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾದರೂ ಏನು ? ಪ್ರಶಾಂತ್‌ ಕಿಶೋರ್‌ ನೀಡಿದ ಉತ್ತರ ಇದು


ಸಿಎಂ ಸಾರ್ವಜನಿಕ ವೇದಿಕೆಯಿಂದ ಸಚಿವರನ್ನು ರಕ್ಷಿಸುತ್ತಿದ್ದಾರೆ. ಉತ್ತಮ್ ಪ್ರದೇಶ ಮತ್ತು 'ಆಜಾದಿ ಕಾ ಅಮೃತ್ ಮಹೋತ್ಸವ'ದ ಪ್ರದರ್ಶನವನ್ನು ನೋಡಲು ಪ್ರಧಾನಿ ಲಕ್ನೋಗೆ ಬಂದರು, ಆದರೆ ಸಂತ್ರಸ್ತ ಕುಟುಂಬಗಳ ದುಃಖವನ್ನು ಹಂಚಿಕೊಳ್ಳಲು ಲಖಿಂಪುರ್ ಖೇರಿಗೆ ಹೋಗಲು ಸಾಧ್ಯವಾಗಲಿಲ್ಲ, ಎಂದು ಅವರು ಹೇಳಿದರು.


ಅವರು ಅಧಿಕಾರದಲ್ಲಿರುವವರನ್ನು ಮತ್ತು ಅವರ ಶ್ರೀಮಂತ ಸ್ನೇಹಿತರನ್ನು ಮಾತ್ರ ರಕ್ಷಿಸುತ್ತಾರೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು."ಈ ದೇಶದಲ್ಲಿ ಇಂದು ಕೇವಲ ಎರಡು ವಿಧದ ಜನರು ಮಾತ್ರ ಸುರಕ್ಷಿತರಾಗಿದ್ದಾರೆ - ಅಧಿಕಾರದಲ್ಲಿರುವ ಬಿಜೆಪಿ ನಾಯಕರು ಮತ್ತು ಅವರ ಕೋಟ್ಯಧಿಪತಿ ಸ್ನೇಹಿತರು" ಎಂದು ಅವರು ಹೇಳಿದರು.


'ಪ್ರಧಾನಿ ಮೋದಿ ಪ್ರತಿಭಟಿಸುತ್ತಿರುವ ರೈತರನ್ನು 'ಆಂದೋಲಂಜಿವಿ' ಮತ್ತು ಭಯೋತ್ಪಾದಕರು ಎಂದು ಕರೆಯುತ್ತಾರೆ.ಯೋಗಿ ಅವರನ್ನು ಗೂಂಡಾಗಳು ಎಂದು ಕರೆದು ಬೆದರಿಸಲು ಪ್ರಯತ್ನಿಸುತ್ತಾರೆ.ಅದೇ ಮಂತ್ರಿ (ಅಜಯ್ ಕುಮಾರ್ ಮಿಶ್ರಾ) ಪ್ರತಿಭಟಿಸುವ ರೈತರನ್ನು ಎರಡು ನಿಮಿಷಗಳಲ್ಲಿ ಸಾಲಿನಲ್ಲಿ ನಿಲ್ಲುವಂತೆ ಮಾಡುತ್ತೇನೆ ಎಂದು ಹೇಳುತ್ತಾರೆ' ಎಂದರು.


ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ ಎನ್ನುವುದಾದರೆ ಪ್ರಿಯಾಂಕಾ ಗಾಂಧಿ ಜೈಲಿನಲ್ಲಿರುವುದೇಕೆ?


ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಮಾರಾಟ ಮಾಡಿದ್ದಕ್ಕಾಗಿ ಪ್ರಿಯಾಂಕಾ  ಗಾಂಧಿಯವರು ಪ್ರಧಾನ ಮಂತ್ರಿ ಮೋದಿ ವಿರುದ್ಧ ವ್ಯಂಗ್ಯವಾಡಿದರು.ಕಳೆದ ವರ್ಷ ಮೋದಿ ಜೀ ಎರಡು ವಿಮಾನಗಳನ್ನು 16,000 ಕೋಟಿಗೆ ಖರೀದಿಸಿದ್ದಾರೆ. ಅವರು ಈ ದೇಶದ ಸಂಪೂರ್ಣ ಏರ್ ಇಂಡಿಯಾವನ್ನು ಕೇವಲ 18,000 ಕೋಟಿ ರೂಪಾಯಿಗೆ ತನ್ನ ಬಿಲಿಯನೇರ್ ಸ್ನೇಹಿತರಿಗೆ ಮಾರಿದರು "ಎಂದು ಅವರು ಹೇಳಿದರು.


ಇದನ್ನೂ ಓದಿ : CRICURU App : ಕ್ರಿಕೆಟ್ ತರಬೇತಿಗೆ 'ಆ್ಯಪ್' ಆರಂಭಿಸಿದ ವೀರೇಂದ್ರ ಸೆಹ್ವಾಗ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.