ಕಾನೂನು ಎಲ್ಲರಿಗೂ ಒಂದೇ ಎನ್ನುವುದಾದರೆ ಪ್ರಿಯಾಂಕಾ ಗಾಂಧಿ ಜೈಲಿನಲ್ಲಿರುವುದೇಕೆ?

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಂಧನಕ್ಕೆ ಬಿಜೆಪಿ ಆಡಳಿತದ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಶಿವಸೇನಾ ಸಂಸದ ಸಂಜಯ್ ರಾವುತ್, "ಕಾನೂನು ಎಲ್ಲರಿಗೂ ಸಮಾನವಾಗಿದ್ದರೆ ಪ್ರಿಯಾಂಕಾ ಗಾಂಧಿ ಏಕೆ ಜೈಲಿನಲ್ಲಿರಬೇಕು, ಇನ್ನೊಂದೆಡೆಗೆ ಮಂತ್ರಿ ಏಕೆ ಮುಕ್ತವಾಗಿ ತಿರುಗಾಡುತ್ತಿದ್ದಾರೆ" ಎಂದು ಪ್ರಶ್ನಿಸಿದ್ದಾರೆ.

Written by - Zee Kannada News Desk | Last Updated : Oct 5, 2021, 09:27 PM IST
  • ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಂಧನಕ್ಕೆ ಬಿಜೆಪಿ ಆಡಳಿತದ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಶಿವಸೇನಾ ಸಂಸದ ಸಂಜಯ್ ರಾವುತ್, ಕಾನೂನು ಎಲ್ಲರಿಗೂ ಸಮಾನವಾಗಿದ್ದರೆ ಪ್ರಿಯಾಂಕಾ ಗಾಂಧಿ ಏಕೆ ಜೈಲಿನಲ್ಲಿರಬೇಕು, ಇನ್ನೊಂದೆಡೆಗೆ ಮಂತ್ರಿ ಏಕೆ ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
 ಕಾನೂನು ಎಲ್ಲರಿಗೂ ಒಂದೇ ಎನ್ನುವುದಾದರೆ ಪ್ರಿಯಾಂಕಾ ಗಾಂಧಿ ಜೈಲಿನಲ್ಲಿರುವುದೇಕೆ? title=
file photo

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಂಧನಕ್ಕೆ ಬಿಜೆಪಿ ಆಡಳಿತದ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಶಿವಸೇನಾ ಸಂಸದ ಸಂಜಯ್ ರಾವುತ್, "ಕಾನೂನು ಎಲ್ಲರಿಗೂ ಸಮಾನವಾಗಿದ್ದರೆ ಪ್ರಿಯಾಂಕಾ ಗಾಂಧಿ ಏಕೆ ಜೈಲಿನಲ್ಲಿರಬೇಕು, ಇನ್ನೊಂದೆಡೆಗೆ ಮಂತ್ರಿ ಏಕೆ ಮುಕ್ತವಾಗಿ ತಿರುಗಾಡುತ್ತಿದ್ದಾರೆ" ಎಂದು ಪ್ರಶ್ನಿಸಿದ್ದಾರೆ.

ಲಖಿಂಪುರ್ ಖೇರಿ ಬಳಿಯ ಸೀತಾಪುರ ಅತಿಥಿಗೃಹದಲ್ಲಿ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ವಾದ್ರಾ ಮತ್ತು ದೀಪೇಂದರ್ ಹೂಡಾ ಮುಂಜಾಗ್ರತಾ ಬಂಧನದಲ್ಲಿ ಇರುವುದರಿಂದ ಇಂದು ಮುಂಜಾನೆ ರಾವತ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ದೆಹಲಿಯಲ್ಲಿ ಭೇಟಿ ಮಾಡಿದರು.

ಇದನ್ನೂ ಓದಿ: ಉತ್ತರ ಪ್ರದೇಶದ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆಯೇ ಪ್ರಿಯಾಂಕಾ ಗಾಂಧಿ?

ಉತ್ತರ ಪ್ರದೇಶದಲ್ಲಿ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆಯ ವಿರುದ್ಧ ಜಂಟಿ ವಿರೋಧದ ಅವಶ್ಯಕತೆ ಇದೆ ಎಂದು ರಾವತ್ ಹೇಳಿದರು."ಪ್ರಿಯಾಂಕಾ ಗಾಂಧಿ (Priyanka Gandhi) ಯನ್ನು ಬಂಧಿಸಲಾಗಿದೆ, ಆದ್ದರಿಂದ ರಾಹುಲ್ ಗಾಂಧಿಯನ್ನು ಭೇಟಿ ಮಾಡುವುದು ಅಗತ್ಯವಾಗಿದೆ. ಕಾನೂನು ಎಲ್ಲರಿಗೂ ಸಮಾನವಾಗಿದ್ದರೆ ಪ್ರಿಯಾಂಕಾ ಗಾಂಧಿ ಜೈಲಿನಲ್ಲಿದ್ದಾರೆ ಮತ್ತು ಸಚಿವರು ಮುಕ್ತವಾಗಿ ತಿರುಗುತ್ತಿದ್ದಾರೆ" ಎಂದು ಅವರು ಟೀಕಾ ಪ್ರಹಾರ ನಡೆಸಿದರು.

ಇದನ್ನೂ ಓದಿ: Video: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೋಲಿಸ್ ಲಾಠಿಚಾರ್ಜ್ ನಿಂದ ರಕ್ಷಿಸಿದ ಪ್ರಿಯಾಂಕಾ ಗಾಂಧಿ

ಈಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ 11 ಜನರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಮಂಗಳವಾರದಂದು (ಅಕ್ಟೋಬರ್ 5) ಎಫ್ಐಆರ್ ದಾಖಲಿಸಿದ್ದಾರೆ.ಹರ್ಗಾಂವ್ ಪೊಲೀಸ್ ಠಾಣೆಯ ಪ್ರಕಾರ, ಎಸ್‌ಎಚ್‌ಒ ಬ್ರಿಜೇಶ್ ತ್ರಿಪಾಠಿ, ಪ್ರಿಯಾಂಕಾ ಗಾಂಧಿ ವಾದ್ರಾ, ದೀಪೇಂದರ್ ಹೂಡಾ ಮತ್ತು ಅಜಯ್ ಕುಮಾರ್ ಲಲ್ಲು ಸೇರಿದಂತೆ 11 ಜನರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 107/16 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:"ಉತ್ತರ ಪ್ರದೇಶದಲ್ಲಿ ನಾವು ಮೈತ್ರಿಮಾಡಿಕೊಳ್ಳಲು ಮುಕ್ತ ಮನಸ್ಸು ಹೊಂದಿದ್ದೇವೆ"

ಈ ಹಿಂದಿನ ದಿನ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಯಾವುದೇ ಆದೇಶ ಅಥವಾ ಎಫ್‌ಐಆರ್ ಇಲ್ಲದೆ ಕಳೆದ 28 ಗಂಟೆಗಳ ಕಾಲ ಬಂಧಿಸಲಾಗಿದೆ ಎಂದು ಹೇಳಿದ್ದರು. ಭಾನುವಾರ ನಡೆದ ಲಖಿಂಪುರ್ ಖೇರಿ ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News