Umang App ಆಯ್ತು ಇಂಟರ್ನ್ಯಾಷನಲ್, ಇದರ ಪ್ರಯೋಜನಗಳನ್ನು ತಿಳಿಯಿರಿ
ಉಮಾಂಗ್ ಅಪ್ಲಿಕೇಶನ್ ಭಾರತ ಸರ್ಕಾರದ ಸಂಯೋಜಿತ, ಬಹುಭಾಷಾ, ಬಹು-ಮಾಧ್ಯಮ ಮತ್ತು ಬಹು-ಸೇವೆಗಳ ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಮತ್ತು ಸೇವೆಗಳಿಗೆ ಜನರಿಗೆ ಸುಲಭವಾಗಿ ಪ್ರವೇಶವನ್ನು ಖಾತ್ರಿಗೊಳಿಸುತ್ತದೆ.
ನವದೆಹಲಿ: ಉಮಾಂಗ್ ಆ್ಯಪ್‌ನ ಅಂತರರಾಷ್ಟ್ರೀಯ ಆವೃತ್ತಿಯನ್ನು ಪರಿಚಯಿಸುವುದಾಗಿ ಸರ್ಕಾರ ಸೋಮವಾರ ಪ್ರಕಟಿಸಿದೆ. ವಿದೇಶಕ್ಕೆ ಹೋಗುವ ಭಾರತೀಯ ಪ್ರವಾಸಿಗರು, ಸಾಗರೋತ್ತರ ಭಾರತೀಯರು ಮತ್ತು ಭಾರತೀಯ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಈ ಆವೃತ್ತಿ ಉಪಯುಕ್ತವಾಗಲಿದೆ ಎನ್ನಲಾಗಿದೆ.
ಉಮಾಂಗ್ (ಹೊಸ ಯುಗದ ಆಡಳಿತಕ್ಕಾಗಿ ಏಕೀಕೃತ ಮೊಬೈಲ್ ಅಪ್ಲಿಕೇಶನ್) ಅಪ್ಲಿಕೇಶನ್ ಭಾರತ ಸರ್ಕಾರದ ಸಂಯೋಜಿತ, ಬಹುಭಾಷಾ, ಬಹು-ಮಾಧ್ಯಮ ಮತ್ತು ಬಹು-ಸೇವೆಗಳ ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಮತ್ತು ಸೇವೆಗಳಿಗೆ ಜನರಿಗೆ ಸುಲಭವಾಗಿ ಪ್ರವೇಶವನ್ನು ಖಾತ್ರಿಗೊಳಿಸುತ್ತದೆ.
Life certificate : 67 ಲಕ್ಷ EPS ಪಿಂಚಣಿದಾರರಿಗಾಗಿ ನೆಮ್ಮದಿ ಸುದ್ದಿ
ಈ ಅಪ್ಲಿಕೇಶನ್‌ನ ಮೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವ ರವಿಶಂಕರ್ ಪ್ರಸಾದ್ (Ravi Shankar Prasad) ಅವರು ಉಮಾಂಗ್ ಆ್ಯಪ್‌ನ ಅಂತರರಾಷ್ಟ್ರೀಯ ಆವೃತ್ತಿಯನ್ನು ಪರಿಚಯಿಸುವುದಾಗಿ ಘೋಷಿಸಿದರು. ಈಗ ಉಮಾಂಗ್ (Umang) ಅಪ್ಲಿಕೇಶನ್‌ನ ಅಂತರರಾಷ್ಟ್ರೀಯ ಆವೃತ್ತಿ ಯುಎಸ್, ಯುಕೆ, ಕೆನಡಾ, ಆಸ್ಟ್ರೇಲಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ನೆದರ್‌ಲ್ಯಾಂಡ್ಸ್, ಸಿಂಗಾಪುರ್ ಮತ್ತು ನ್ಯೂಜಿಲೆಂಡ್‌ನಲ್ಲಿ ಲಭ್ಯವಿರುತ್ತದೆ. ಇದರ ಸಹಾಯದಿಂದ ಸಾಗರೋತ್ತರ ಭಾರತೀಯರು, ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಯಾವುದೇ ಸಮಯದಲ್ಲಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದವರು ತಿಳಿಸಿದರು.
EPF ಪಿಂಚಣಿದಾರರಿಗೆ ಪಾಸ್‌ಬುಕ್ ಪರಿಶೀಲನೆ, ಜೀವನ ಪ್ರಮಾಣಪತ್ರ ನವೀಕರಣ ಇನ್ನೂ ಸುಲಭ
ಈ ಸಂದರ್ಭದಲ್ಲಿ ದೇಶದ 3.75 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಮೂಲಕ ಉಮಾಂಗ್ ಆ್ಯಪ್‌ನಲ್ಲಿನ ಸೇವೆಗಳು ನಾಗರಿಕರಿಗೆ ಲಭ್ಯವಿದೆ ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಡಿಜಿಟಲ್ ಪ್ರಪಂಚದ ಭಾಷೆಯನ್ನು ಸುಲಭವಾಗಿ ಜನರಿಗೆ ತಲುಪಿಸಬಹುದು. ಎಐ ತಂತ್ರಜ್ಞಾನವನ್ನು ಧ್ವನಿ ಸೂಚನೆಯ ಮೇಲೆ ಕಾರ್ಯನಿರ್ವಹಿಸುವ ಅಪ್ಲಿಕೇಶನ್ ಆಗಿ ಅಭಿವೃದ್ಧಿಪಡಿಸಲು ಉಮಾಂಗ್ ಆ್ಯಪ್ (Umang App) ಬಳಸುವ ಸಾಧ್ಯತೆಯ ಬಗ್ಗೆ ಗಮನಹರಿಸಬೇಕು ಎಂದು ಅವರು ಹೇಳಿದರು.