EPF ಪಿಂಚಣಿದಾರರಿಗೆ ಪಾಸ್‌ಬುಕ್ ಪರಿಶೀಲನೆ, ಜೀವನ ಪ್ರಮಾಣಪತ್ರ ನವೀಕರಣ ಇನ್ನೂ ಸುಲಭ

ತನ್ನ 66 ಲಕ್ಷ ಪಿಂಚಣಿದಾರರ ಮನೆ ಬಾಗಿಲಲ್ಲಿ ತನ್ನ ಸೇವೆಗಳನ್ನು ಸುರಕ್ಷಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು, ಇಪಿಎಫ್‌ಒ 'ವ್ಯೂ ಪಿಂಚಣಿದಾರರ ಪಾಸ್‌ಬುಕ್' ಸೌಲಭ್ಯವನ್ನು ಸೇರಿಸಿದೆ.  

Last Updated : Aug 12, 2020, 06:48 AM IST
EPF ಪಿಂಚಣಿದಾರರಿಗೆ ಪಾಸ್‌ಬುಕ್ ಪರಿಶೀಲನೆ, ಜೀವನ ಪ್ರಮಾಣಪತ್ರ ನವೀಕರಣ ಇನ್ನೂ ಸುಲಭ title=

ನವದೆಹಲಿ: ಪಿಂಚಣಿದಾರರು ತಮ್ಮ ಪಾಸ್‌ಬುಕ್ ಪರಿಶೀಲಿಸಲು ಮತ್ತು ಅವರ ಮೊಬೈಲ್ ಫೋನ್‌ನಿಂದ ಜೀವನ ಪ್ರಮಾಣಪತ್ರವನ್ನು ನವೀಕರಿಸುವ ಹೊಸ ಸೌಲಭ್ಯದೊಂದಿಗೆ, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಗ್ರಾಹಕರಿಗೆ ಉಮಾಂಗ್ ಅಪ್ಲಿಕೇಶನ್‌ನಲ್ಲಿ 16 ವಿಭಿನ್ನ ಸೇವೆಗಳನ್ನು ಪ್ರವೇಶಿಸಲು ಅನುಮತಿಸುತ್ತದೆ.

ತನ್ನ 66 ಲಕ್ಷ ಪಿಂಚಣಿದಾರರ ಮನೆ ಬಾಗಿಲಲ್ಲಿ ತನ್ನ ಸೇವೆಗಳನ್ನು ಸುರಕ್ಷಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು, ಇಪಿಎಫ್‌ಒ 'ವ್ಯೂ ಪಿಂಚಣಿದಾರರ ಪಾಸ್‌ಬುಕ್' ಸೌಲಭ್ಯವನ್ನು ಸೇರಿಸಿದೆ ಮತ್ತು ಉಮಾಂಗ್ (UMANG) ಅಪ್ಲಿಕೇಶನ್‌ನಲ್ಲಿ ಜೀವನ್ ಸೇವಾ ಪತ್ರವನ್ನು ನವೀಕರಿಸಿದೆ.

ಏಪ್ರಿಲ್ ನಿಂದ ಜುಲೈ 2020 ರವರೆಗೆ COVID-19 ಸಾಂಕ್ರಾಮಿಕ ಅವಧಿಯಲ್ಲಿ, ವ್ಯೂ ಪಿಂಚಣಿದಾರರ ಪಾಸ್‌ಬುಕ್ ಸೇವೆಯಲ್ಲಿ 18.52 ಲಕ್ಷ ಎಪಿಐ ಹಿಟ್‌ಗಳನ್ನು ಸ್ವೀಕರಿಸಲಾಗಿದ್ದು, ಜೀವನ್ ಸೇವಾ ಪತ್ರವನ್ನು ನವೀಕರಿಸಿದ ನಂತರ 29,773 ಎಪಿಐ ಹಿಟ್‌ಗಳನ್ನು ದಾಖಲಿಸಲಾಗಿದೆ.

ನಿಮ್ಮ PF ಖಾತೆಯಲ್ಲಿ ಎಷ್ಟು ಹಣ ಜಮಾ ಮಾಡಲಾಗಿದೆ? ಒಂದು ಮಿಸ್ಡ್ ಕಾಲ್‌ನಲ್ಲಿ ತಿಳಿಯಿರಿ

ಈ ಸೇವೆಗಳನ್ನು ಪಡೆಯಲು, ನಿಮಗೆ ಸಕ್ರಿಯ ಯುಎಎನ್ (ಯುನಿವರ್ಸಲ್ ಅಕೌಂಟ್ ಸಂಖ್ಯೆ) ಮತ್ತು ಇಪಿಎಫ್‌ಒನೊಂದಿಗೆ ನೋಂದಾಯಿತ ಮೊಬೈಲ್ ಸಂಖ್ಯೆ ಅಗತ್ಯವಿದೆ.

ಉಮಾಂಗ್ ಆ್ಯಪ್ ಮೂಲಕ ಸದಸ್ಯರು ಸ್ವೀಕರಿಸಿದ ಅತ್ಯಂತ ಜನಪ್ರಿಯ ಸೇವೆಯೆಂದರೆ 'ಸದಸ್ಯ ಪಾಸ್‌ಬುಕ್ ವೀಕ್ಷಿಸಿ' (View Member Passbook) ಎಂದು ತಿಳಿದುಬಂದಿದೆ.

EPF ನಿಂದ ಹಣ ಹಿಂಪಡೆಯುವುದು ಇದೀಗ ಮತ್ತಷ್ಟು ಸುಲಭವಾಗಿದೆ

ಉಮಾಂಗ್ ಅಪ್ಲಿಕೇಶನ್‌ನಲ್ಲಿ 90 ಪ್ರತಿಶತ ಬಳಕೆದಾರರು ಇಪಿಎಫ್‌ಒಗೆ ಸಂಬಂಧಿಸಿದ ಸೇವೆಗಳಿಗೆ ಬರುತ್ತಾರೆ. ಈ ಅಪ್ಲಿಕೇಶನ್ ಅನ್ನು ಕ್ಲೈಮ್‌ಗಾಗಿ ಅಪ್ಲೈ ಮಾಡಬಹುದು, ಕ್ಲೈಮ್ ಅನ್ನು ಟ್ರ್ಯಾಕ್ ಮಾಡಬಹುದು ಮತ್ತು ಅದರ ಸ್ಥಿತಿಯನ್ನು ತಿಳಿಯಬಹುದು.

ಇಪಿಎಫ್‌ಒ ಪ್ರಕಾರ, "ಭಾರತದಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ಗಳ ಒಳಹೊಕ್ಕು, ಮೊಬೈಲ್ ಆಡಳಿತದ ಮೂಲಕ ತನ್ನ ಸದಸ್ಯರಿಗೆ ತನ್ನ ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಇಪಿಎಫ್‌ಒ ಯಶಸ್ವಿಯಾಗಿದೆ."

Trending News