ಇಪಿಎಫ್ನ ಅಧಿಕೃತ ಪೋರ್ಟಲ್ನಲ್ಲಿ ಇ–ಪಾಸ್ಬುಕ್ ಸೇವೆಯಲ್ಲಿ ದೋಷ ಕಾಣಿಸಿ, ಆ ಪುಟ ತೆರೆಯುತ್ತಿಲ್ಲ ಎಂದು ಈಗಾಗಲೇ ಬಹಳ ಮಂದಿ ಸದ್ಯಸರು ಇಂಟರ್ನೆಟ್ನಲ್ಲಿ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಸಮಸ್ಯೆ ತಲೆದೋರಿ ಹಲವು ದಿನಗಳೇ ಆಗಿವೆ. ತಿಂಗಳುಗಳಿಂದಲೂ ಈ ತೊಂದರೆ ಇದೆ. ಆರೇಳು ತಿಂಗಳ ಹಿಂದೆಯೇ ಇಪಿಎಫ್ನ ಇ–ಸೇವೆಗಳು ನಿಧಾನಗೊಂಡಿದ್ದವು. ಈಗ ಪೋರ್ಟಲ್ನಲ್ಲಿ ಸರ್ವಿಸ್ ಪುಟವೇ ತೆರೆಯುತ್ತಿಲ್ಲ ಎನ್ನಲಾಗಿದೆ. ಈ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿರುವುದಾಗಿ ಇಪಿಎಫ್ಒ ಸಂಸ್ಥೆ ಸ್ಪಷ್ಟಪಡಿಸಿದ್ದು, ಕೆಲ ದಿನಗಳವರೆಗೆ ಸಂಯಮದಿಂದ ಇರಬೇಕೆಂದು ಕೋರಿದೆ. ಆದಾಗ್ಯೂ ನಿಮ್ಮ ಇಪಿಎಫ್ ಖಾತೆಯ ವಿವರಗಳನ್ನು ನೋಡಲು ಬೇರೆ ಕೆಲ ಸರಳ ಮಾರ್ಗಗಳ ಆಯ್ಕೆ ನಿಮಗೆ ಇದೆ.
Umang: ಇದೀಗ ಯಾವುದೇ ರೀತಿಯ ಖಾತೆ ಇರಲಿ ಅದರ ಮಾಹಿತಿಯನ್ನು ಕುಳಿತಲ್ಲಿಯೇ ಪಡೆಯಬಹುದು. ಇಪಿಎಫ್ಒ ಪಾಸ್ಬುಕ್ ಅನ್ನು ಕೂಡ ನೀವು ಇರುವ ಜಾಗದಲ್ಲಿಯೇ ಕುಳಿತು ಉಮಾಂಗ್ ಅಪ್ಲಿಕೇಶನ್ನಲ್ಲಿ ಸುಲಭವಾಗಿ ವೀಕ್ಷಿಸಬಹುದು. ಅದರ ಪ್ರಕ್ರಿಯೆ ಬಗ್ಗೆ ತಿಳಿಯೋಣ.
PF Balance : 'ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ' ಎಂಬುದು ಇಪಿಎಫ್ ಖಾತೆದಾರರು ಹೆಚ್ಚು ಕೇಳುವ ಪ್ರಶ್ನೆಗಳಲ್ಲಿ ಒಂದಾಗಿದೆ. ಉದ್ಯೋಗಿ ಮತ್ತು ಇಪಿಎಫ್ (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಸದಸ್ಯರಾಗಿರುವ ನೀವು ಯಾವುದೇ ಸಮಯದಲ್ಲಿ ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳುವುದು ನಿಮ್ಮ ಹಕ್ಕು.
ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಇಪಿಎಫ್ಒನ ಆನ್ಲೈನ್ ಪೋರ್ಟಲ್ ಅಥವಾ ಅಪ್ಲಿಕೇಶನ್ ಅಗತ್ಯವಿಲ್ಲ. ಕೇವಲ ಮಿಸ್ಡ್ ಕಾಲ್ ನೀಡುವ ಮೂಲಕ ಪಿಎಫ್ ಖಾತೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು.
EPFO: ದೇಶದ 6 ಕೋಟಿ EPFO ಚಂದಾದಾರರಿಗೆ ವರ್ಷ 2019-20ರ ಸಾಲಿನ ಶೇ.8.5 ರಷ್ಟು ಬಡ್ಡಿದರವನ್ನು ಕೇಂದ್ರದ ಮೋದಿ ಸರ್ಕಾರ ಜಾರಿಗೊಳಿಸಿದೆ. ಹೀಗಾಗಿ ಜನರು ತಮ್ಮ ಖಾತೆಯಿಂದ ಈ ರಾಶಿಯನ್ನು ಹಿಂಪಡೆಯಬಹುದು.
ಉಮಾಂಗ್ ಅಪ್ಲಿಕೇಶನ್ ಭಾರತ ಸರ್ಕಾರದ ಸಂಯೋಜಿತ, ಬಹುಭಾಷಾ, ಬಹು-ಮಾಧ್ಯಮ ಮತ್ತು ಬಹು-ಸೇವೆಗಳ ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಮತ್ತು ಸೇವೆಗಳಿಗೆ ಜನರಿಗೆ ಸುಲಭವಾಗಿ ಪ್ರವೇಶವನ್ನು ಖಾತ್ರಿಗೊಳಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.