ನವದೆಹಲಿ: ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಬಿಹಾರದ ಮಾಜಿ ಸಿಎಂ, ಆರ್‍ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಸಿಂಗಾಪುರದ ಆಸ್ಪತ್ರೆಯಲ್ಲಿ ಯಶಸ್ವಿಯಾಗಿದೆ. ಪುತ್ರಿ ರೋಹಿಣಿ ಆಚಾರ್ಯ ಅವರೇ ತಮ್ಮ ಕಿಡ್ನಿಯನ್ನು ತಂದೆಗೆ ದಾನ ಮಾಡಿದ್ದಾರೆ. ಲಾಲು ಅವರಿಗೆ ಕಿಡ್ನಿ ಕಸಿ ಮಾಡುವ ಮುನ್ನ ರೋಹಿಣಿಯವರಿಗೆ ಆಪರೇಷನ್ ಮಾಡಲಾಗಿತ್ತು.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಲಾಲು ಯಾದವ್ ಪುತ್ರ ತೇಜಸ್ವ್ ಯಾದವ್, ‘ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ನಂತರ ತಂದೆಯವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ ಸ್ಥಳಾಂತರಿಸಲಾಗಿದೆ. ಕಿಡ್ನಿ ದಾನ ಮಾಡಿರುವ ಸಹೋದರಿ ರೋಹಿಣಿ ಆಚಾರ್ಯ ಇಬ್ಬರೂ ಆರೋಗ್ಯವಾಗಿದ್ದಾರೆ. ನಿಮ್ಮ ಪ್ರಾರ್ಥನೆ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು’ ಅಂತಾ ಹೇಳಿದ್ದಾರೆ.


Viral Video: ತಮ್ಮ ಮದುವೆಗೆ ಸಂಬಂಧಿಕರಿಗಾಗಿ ಇಡೀ ವಿಮಾನವನ್ನೇ ಬುಕ್ ಮಾಡಿದ ನವದಂಪತಿ!


ತೇಜಸ್ವಿ ಅವರ ಸಹೋದರಿ ಮಿಸಾ ಭಾರತಿ ಟ್ವೀಟ್ ಮಾಡಿದ್ದು, ‘ತಂದೆಯವರ ಆಪರೇಷನ್ ಯಶಸ್ವಿಯಾಗಿದೆ, ಅವರು ಇನ್ನೂ ಐಸಿಯುನಲ್ಲಿದ್ದಾರೆ, ಪ್ರಜ್ಞೆ ಬಂದಿದ್ದು ಮಾತನಾಡಲು ಸಮರ್ಥರಾಗಿದ್ದಾರೆ! ನಿಮ್ಮ ಶುಭಹಾರೈಕೆಗಳಿಗೆ ಎಲ್ಲರಿಗೂ ಧನ್ಯವಾದಗಳು!’ ಅಂತಾ ಹೇಳಿದ್ದಾರೆ.


ಕಿಡ್ನಿ ಕಸಿ ಮಾಡುವ ಮುನ್ನ ರೋಹಿಣಿಯವರು ಲಾಲು ಅವರ ಜೊತೆಗಿನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ‘Ready to rock and roll ✌️ Wish me a good luck’ ಅಂತಾ ಕ್ಯಾಪ್ಶನ್ ಬರೆದಿದ್ದಾರೆ. ರೋಹಿಣಿ ಮತ್ತು ಲಾಲು ಇಬ್ಬರ ರಕ್ತದ ಗುಂಪು ಎಬಿ ಪಾಸಿಟಿವ್ ಆಗಿದೆ. ಸದ್ಯ ಇಬ್ಬರೂ ಐಸಿಯುನಲ್ಲಿದ್ದಾರೆ.


ಕೊಳಲಿನ ಮಧುರ ನಾದಕ್ಕೆ ತಲೆಯಾಡಿಸಿದ ಗೋಮಾತೆ : ಆಹಾ.. ಇದಲ್ಲವೇ ಅಪರೂಪ..!


ಬಿಹಾರದ ಮಾಜಿ ಸಿಎಂ ಲಾಲು ಅವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಂದ ದೀರ್ಘಕಾಲ ಹೋರಾಡುತ್ತಿದ್ದಾರೆ. ಸಿಂಗಾಪುರದ ವೈದ್ಯರು ಲಾಲು ಯಾದವ್‌ಗೆ ಮೂತ್ರಪಿಂಡ ಕಸಿ ಮಾಡುವಂತೆ ಸಲಹೆ ನೀಡಿದ್ದರು. ಸದ್ಯ ಮೇವು ಹಗರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಅವರು ಹೊರಗಿದ್ದಾರೆ. ಅನಾರೋಗ್ಯ ಕಾರಣ ಅವರು ದೆಹಲಿ ಮತ್ತು ರಾಂಚಿಯಲ್ಲಿ ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.