Cow Reaction On Flute Music : ಸಂಗೀತವು ಯಾವಾಗಲೂ ಜನರ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ನಾವು ನೋಡಿದ್ದೇವೆ. ಸಂಗೀತ ಮನೋರೋಗಕ್ಕೆ ಪರಿಹಾರ ಅಂತ ಹೇಳಲಾಗುತ್ತದೆ. ಅದೆಂತಹ ನೋವಿದ್ದರೂ ಸಹ ಸಂಗೀತ ಕೇಳುತ್ತಾ ಕುಳಿತರ ಮನಸು ಹಗುರವಾಗುತ್ತದೆ. ಮನಸ್ಸನ್ನು ಶಾಂತವಾಗಿಡಲು ಸಂಗೀತ ಬಹಳ ಪರಿಣಾಮಕಾರಿ. ಇನ್ನು ಸಂಗೀತ ಬರೀ ಮನುಷ್ಯರ ಮೇಲೆ ಅಷ್ಟೇ ಅಲ್ಲದ ಪ್ರಾಣಿಗಳ ಮೇಲೂ ಪ್ರಭಾವ ಬೀರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವ್ಯಕ್ತಿಯೊಬ್ಬ ಕುರ್ಚಿಯ ಮೇಲೆ ಕುಳಿತು ಕೊಳಲಿನಿಂದ ಹಿತವಾದ ಸಂಗೀತವನ್ನು ನುಡಿಸುತ್ತಿದ್ದಾನೆ. ಅವನ ಪಕ್ಕದಲ್ಲಿ ಹಸು ಕೂಡ ಇದೆ. ಅಲ್ಲದೆ, ಹಸುವಿನ ಜೊತೆ ಇನ್ನೊಂದು ನಾಯಿ ಕೂತು ಸಂಗೀತ ಆಲಿಸುತ್ತಿದೆ. ಒಟ್ಟು 46 ಸೆಕೆಂಡ್‌ಗಳ ವಿಡಿಯೋದಲ್ಲಿ ಎರಡು ಪ್ರಾಣಿಗಳು ಸಮಾಧಾನದಿಂದ ಕುಳಿತು ಕೊಳಲಿನ ನಾದವನ್ನು ಆಲಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ, ಅತ್ಯಂತ ಶಾಂತ ರೀತಿಯಲ್ಲಿ ಕೊಳಲ ಧ್ವನಿ ಕೇಳಿಸಿಕೊಳ್ಳುತ್ತಾ ಹಸು ತಲೆಯಾಡಿಸುತ್ತಿದೆ.
ಇದನ್ನೂ ಓದಿ:Viral Video: ತಮ್ಮ ಮದುವೆಗೆ ಸಂಬಂಧಿಕರಿಗಾಗಿ ಇಡೀ ವಿಮಾನವನ್ನೇ ಬುಕ್ ಮಾಡಿದ ನವದಂಪತಿ!
Take a minute to enjoy this calm and compassionate moment at the #AnimalRahat Sanctuary.
Everyone deserves to feel like this. pic.twitter.com/S5SSYF8Jln
— PETA (@peta) December 3, 2022
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ವೈರಲ್ ಆಗುತ್ತಿದೆ. ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇನ್ನು ವಿಡಿಯೋ ನೋಡಿದ ನೆಟ್ಟಿಗುರ ಹಲವಾರು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲ ನೆಟ್ಟಿಗರು ಇದು ತುಂಬಾ ಸುಂದರವಾದ ದೃಶ್ಯವಾಗಿದೆ. ಕೊಳಲಿನ ನಾದ ಮತ್ತು ದೃಶ್ಯ ಮನಸ್ಸಿಗೆ ಶಾಂತಿ ನೀಡುತ್ತದೆ. ಪ್ರಾಣಿಗಳು ಸಂಗೀತಕ್ಕೆ ಪ್ರತಿಕ್ರಿಯಿಸುವುದು ಇದೇ ಮೊದಲಲ್ಲ. ಪ್ರಾಣಿಗಳು ಸಂಗೀತವನ್ನು ಆನಂದಿಸುತ್ತವೆ ಅಂತ ಕೆಲ ನೆಟ್ಟಿಜನ್ಸ್ ತಮ್ಮ ಅಭಿಪ್ರಾಯ ತೋಡಿಕೊಂಡಿದ್ದಾರೆ.
ಹೌದು, ಇಂತಹ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಸಂದರ್ಭದಲ್ಲಿ ಒಮ್ಮೆ ದ್ವಾಪರಯುಗವನ್ನು ನೆನಪು ಮಾಡಿಕೊಳ್ಳಬೇಕು. ಶ್ರೀಕೃಷ್ಣ ಪರಮಾತ್ಮ ಗೋಪಾಲನಾಗಿದ್ದಾಗ ಅವನ ಮಧುರ ಕೊಳಲ ನಾದಕ್ಕೆ ಹಸುಗಳು ಓಡೋಡಿ ಬರುತ್ತಿದ್ದವು, ಮುರಳಿಯ ನಾದ ಹಸುಗಳಿಗೆ ತುಂಬಾ ಇಷ್ಟ ಎಂದು ಪುರಾಣ ಪುಣ್ಯ ಕಥೆಗಳಲ್ಲಿ ನಾವು ಕೇಳಿದ್ದೇವೆ. ಇಂದು ಇಂತಹ ಘಟನೆಗಳು ನಮಗೆ ಅಂದಿನ ಸಂಗತಿಗಳನ್ನು ನೆನಪು ಮಾಡಿಸುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.