ಗೂಗಲ್, ಅಮೆಜಾನ್ ಸಾಮೂಹಿಕ ವಜಾ: ಉದ್ಯೋಗ ನಷ್ಟದಿಂದ ಒತ್ತಡ ಮತ್ತು ಆತಂಕದಲ್ಲಿರುವ ಜನರು!
ಜನವರಿ 2023ರಿಂದ ತೆಗೆದ ಮಾಹಿತಿಯ ಪ್ರಕಾರ, ಪ್ರತಿದಿನ ಸುಮಾರು 3 ಸಾವಿರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸಂಖ್ಯೆಯು ಆತಂಕ, ಖಿನ್ನತೆ ಮತ್ತು ಇತರ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ದೂಡುವ ಜನರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.
ನವದೆಹಲಿ: ಈ ತಿಂಗಳ ಆರಂಭದಲ್ಲಿ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ವಿಪ್ರೋದಂತಹ ದೊಡ್ಡ ಟೆಕ್ ಕಂಪನಿಗಳು ಲಕ್ಷಾಂತರ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಿವೆ. ಈ ಬೃಹತ್ ವಜಾದಿಂದ ಪ್ರಪಂಚದಾದ್ಯಂತದ ಭಾರತೀಯ ವೃತ್ತಿಪರರಲ್ಲಿ ಭಾರಿ ಒತ್ತಡ ಮತ್ತು ಆತಂಕ ಸೃಷ್ಟಿಯಾಗಿದೆ. ಮುಂಬರುವ ವಾರಗಳಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಲು ಪ್ಲಾನ್ ಮಾಡಿವೆ ಎಂದು ಊಹಿಸಲಾಗಿದೆ. ಜೀವನ ನಡೆಸಲು ಹಣ ಸಂಪಾದಿಸುವುದು ಎಷ್ಟು ಮುಖ್ಯವೆಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಈ ಸಾಮೂಹಿಕ ವಜಾಗಳಿಂದ ಅನೇಕರಲ್ಲಿ ಆತಂಕ ಮೂಡಿದೆ.
ಆರೋಗ್ಯ ತಜ್ಞರ ಪ್ರಕಾರ ಸಾಮೂಹಿಕ ವಜಾಗಳು ಹೆಚ್ಚುತ್ತಿರುವುದರಿಂದ ಕಳೆದ ಕೆಲವು ವಾರಗಳಿಂದ ಆತಂಕ ಮತ್ತು ಖಿನ್ನತೆಯಿಂದ ವಿವಿಧ ದೊಡ್ಡ ಟೆಕ್ ಕಂಪನಿಗಳಿಂದ ಬರುವ ರೋಗಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದಕ್ಕೆ ಕಾರಣ ಭವಿಷ್ಯದ ಭದ್ರತೆಯ ಭಯ, ಇದರಿಂದ ಅವರಿಗೆ ತೀವ್ರ ಮಾನಸಿಕ ನೋವು, ಸಂಕಟ ಉಂಟಾಗಿದೆ.
ಜನವರಿ 2023ರಿಂದ ತೆಗೆದ ಮಾಹಿತಿಯ ಪ್ರಕಾರ, ಪ್ರತಿದಿನ ಸುಮಾರು 3 ಸಾವಿರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸಂಖ್ಯೆಯು ಆತಂಕ, ಖಿನ್ನತೆ ಮತ್ತು ಇತರ ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ದೂಡುವ ಜನರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಸರ್ಕಾರದ ಮಹತ್ವದ ನಿರ್ಧಾರ!
ಭರವಸೆ ಕಳೆದುಕೊಳ್ಳಬೇಡಿ
ಈ ಸಾಮೂಹಿಕ ವಜಾಗಳು ಕೆಲವರಿಗೆ ಅರಿಗಿಸಿಕೊಳ್ಳಲು ಕಷ್ಟವಾಗಬಹುದು. ಆದರೆ ಇದರಿಂದಾಗುವ ಮಾನಸಿಕ ಯಾತನೆಯು ಅವರ ಮನಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ ತಜ್ಞರು ಭರವಸೆ ಕಳೆದುಕೊಳ್ಳಬೇಡಿ, ನಿಮ್ಮ ಆಂತರಿಕ ಧೈರ್ಯವನ್ನು ಕಾಪಾಡಿಕೊಳ್ಳಿ ಮತ್ತು ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ನಿಮ್ಮ ಆಲೋಚನೆಗಳನ್ನು ಮುಕ್ತಗೊಳಿಸಿ, ನಿಮಗಾಗಿ ದೈನಂದಿನ ದಿನಚರಿ ರೂಪಿಸಿ. ನಿಮ್ಮ ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡಿ. ನೀವು ದುಃಖಿತರಾದಾಗ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಿರಿ ಎಂದು ಹೇಳಿದ್ದಾರೆ.
ಉದ್ಯೋಗ ಹುಡುಕುವುದು ಮತ್ತು ನಿಮ್ಮ ಕೆಲಸದ ಪ್ರೊಫೈಲ್ ಅನ್ನು ಅಪ್‍ಡೇಟ್ ಮಾಡುವುದು ಮುಖ್ಯವಾಗಿದೆ. ಈ ಸಂದರ್ಭದಲ್ಲಿ ಆತಂಕದಿಂದ ಹೊರಬರುವುದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಆತಂಕವನ್ನು ಎದುರಿಸುವುದು ಹೇಗೆ?
ಯಾವಾಗಲೂ ಧೈರ್ಯದಿಂದ ಇರಬೇಕು ಮತ್ತು ವಾಸ್ತವವನ್ನು ಅರ್ಥಮಾಡಿಕೊಂಡು ಮುಂದುವರೆಯಿರಿ.
ನಿಮಗಾಗಿ ದಿನಚರಿಯನ್ನು ರೂಪಿಸಿರಿ
ನೀವು ದುರ್ಬಲರಾಗಿರುವಾಗ ನಿಮಗೆ ಸಹಾಯ ಮಾಡುವ ಮತ್ತು ನಿಮ್ಮ ಭಾವನಾತ್ಮಕ ವಿಷಯಗಳನ್ನು ಬೆಂಬಲಿಸುವ ಜನರೊಂದಿಗೆ ಸಂಪರ್ಕ ಸಾಧಿಸಿ.
ದೈಹಿಕವಾಗಿ ಕ್ರಿಯಾಶೀಲರಾಗಿರಿ. ಈ ಸಮಯದಲ್ಲಿ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಮುಖ್ಯ.
ಆರೋಗ್ಯಕರ ಆಹಾರ ತಿನ್ನಿರಿ. ವ್ಯಾಯಾಮದ ಜೊತೆಗೆ ನಿಮ್ಮ ಆಹಾರ ಮತ್ತು ನಿಮ್ಮ ಊಟದ ತಟ್ಟೆಯಲ್ಲಿ ಏನಿದೆ ಎಂಬುದರ ಬಗ್ಗೆಯೂ ಕಾಳಜಿ ವಹಿಸಬೇಕು. ದೈಹಿಕ ಆರೋಗ್ಯವು ನಿಮ್ಮ ದೇಹಕ್ಕೆ ನೀವು ಏನು ನೀಡುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಸಾಕಷ್ಟು ಧ್ಯಾನ ಮಾಡುವುದು ನಿಮಗೆ ಸಹಕಾರಿಯಾಗುತ್ತದೆ
ಇದನ್ನೂ ಓದಿ: ದೆಹಲಿ-ಎನ್‌ಸಿಆರ್‌ನಲ್ಲಿ ನಡುಗಿದ ಭೂಮಿ, 30 ಸೆಕೆಂಡ್‌ಗೂ ಹೆಚ್ಚು ಕಾಲ ಭೂಕಂಪನದ ಅನುಭವ
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.