ದೆಹಲಿಯಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಸರ್ಕಾರದ ಮಹತ್ವದ ನಿರ್ಧಾರ!

ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜನವರಿ 26ರಂದು ಡ್ರೈ ಡೇಯಂದು ಮದ್ಯದ ಅಂಗಡಿಗಳು ಮತ್ತು ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

Written by - Puttaraj K Alur | Last Updated : Jan 23, 2023, 11:13 PM IST
  • ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ
  • ಜ.26ರಂದು ಡ್ರೈ ಡೇಯಂದು ಮದ್ಯದ ಅಂಗಡಿ, ಬಾರ್ & ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟ ನಿಷೇಧ
  • ದೆಹಲಿಯಲ್ಲಿ ಮೊದಲ ಬಾರಿಗೆ ಕೇಜ್ರಿವಾಲ್ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ
ದೆಹಲಿಯಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಸರ್ಕಾರದ ಮಹತ್ವದ ನಿರ್ಧಾರ! title=
ಕೇಜ್ರಿವಾಲ್ ಸರ್ಕಾರದಿಂದ ಮಹತ್ವದ ನಿರ್ಧಾರ

ನವದೆಹಲಿ: ಜನವರಿ 26ರಂದು ದೆಹಲಿಯ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯವನ್ನು ನೀಡಲಾಗುವುದಿಲ್ಲ. ಮೊದಲು ಜನವರಿ 26ಅನ್ನು ಡ್ರೈ ಡೇ ಎಂದು ಘೋಷಿಸಲಾಗಿತ್ತು, ಆದರೆ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯವನ್ನು ನೀಡಲು ಅನುಮತಿಸಲಾಗಿತ್ತು. ಈ ಬಾರಿ ಜನವರಿ 26ರಂದು ಮೊದಲ ಬಾರಿಗೆ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಇದನ್ನೂ ಓದಿ: Bikes Sales: ಕೇವಲ 5 ಸಾವಿರಕ್ಕೆ ಈ ಅಗ್ಗದ ಮತ್ತು ಶಕ್ತಿಶಾಲಿ ಬೈಕ್ ಮನೆಗೆ ತನ್ನಿ..!

ಕೇಜ್ರಿವಾಲ್ ಸರ್ಕಾರ ಇಂದು ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ಮಹಾಶಿವರಾತ್ರಿ, ರಾಮನವಮಿ ಮತ್ತು ಹೋಳಿ ಹಬ್ಬದಂದು ಅಂಗಡಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಕೇಜ್ರಿವಾಲ್ ಸರ್ಕಾರವು ಸ್ವಾಮಿ ದಯಾನಂದ ಜಯಂತಿ ಮತ್ತು ಗುರು ರವಿದಾಸ್ ಜಯಂತಿಯಂದು ಡ್ರೈ ಡೇ ಘೋಷಿಸಿದೆ, ಈ ದಿನವೂ ಮದ್ಯದ ಅಂಗಡಿಗಳು ಮುಚ್ಚಲ್ಪಡುತ್ತವೆ.

ಇದನ್ನೂ ಓದಿ: Pension Scheme: ಪ್ರಧಾನಿ ಮೋದಿ ಸರ್ಕಾರದ ಉತ್ತಮ ಯೋಜನೆ, ನಿಮಗೆ ಉಪಯುಕ್ತವಾಗಬಹುದು

ಜನವರಿ 1, 2023ರಿಂದ ಮಾರ್ಚ್ 31, 2023ರವರೆಗೆ ದೆಹಲಿ ಸರ್ಕಾರದ ಅಬಕಾರಿ ಇಲಾಖೆಯು ಡ್ರೈ ಡೇ ಪಟ್ಟಿ ನೀಡಿದೆ. ಇದರಲ್ಲಿ ಕೇಜ್ರಿವಾಲ್ ಸರ್ಕಾರ ಜನವರಿ 26ರಂದು ಗಣರಾಜ್ಯೋತ್ಸವ, ಫೆಬ್ರವರಿ 5ರಂದು ಗುರು ರವಿದಾಸ್ ಜಯಂತಿ, ಫೆಬ್ರವರಿ 15ರಂದು ಸ್ವಾಮಿ ದಯಾನಂದ ಸರಸ್ವತಿ ಜಯಂತಿ, ಫೆಬ್ರವರಿ 18ರಂದು ಮಹಾಶಿವರಾತ್ರಿ, ಮಾರ್ಚ್ 8ರಂದು ಹೋಳಿ ಮತ್ತು ಮಾರ್ಚ್ 30ರಂದು ರಾಮನವಮಿಯನ್ನು ಡ್ರೈ ಡೇ ಎಂದು ಘೋಷಿಸಿದೆ. ಈ ಸಮಯದಲ್ಲಿ ಮದ್ಯದ ಮಾರಾಟ ನಿಷೇಧವಿರುತ್ತದೆ. ಕೇಜ್ರಿವಾಲ್ ಸರ್ಕಾರ ಪ್ರತಿ 3 ತಿಂಗಳಿಗೊಮ್ಮೆ ಡ್ರೈ ಡೇಗಳ ಪಟ್ಟಿಯನ್ನು ನೀಡುತ್ತದೆ. ಪ್ರಸ್ತುತ ವರ್ಷದಲ್ಲಿ ಸುಮಾರು 21 ಡ್ರೈ ಡೇಗಳಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News