ನವದೆಹಲಿ: ಒಂದು ವೇಳೆ ನೀವೂ ಕೂಡ pension ಗಾಗಿ ನಿಮ್ಮ ಜೀಎವನ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂದಾದರೆ ಚಿಂತೆ ಮಾಡುವ ಆವಶ್ಯಕತೆ ಇಲ್ಲ. ನಿಮ್ಮ ಪ್ರದೇಶದಲ್ಲಿ ಕಾರ್ಯನಿರತ ಪೋಸ್ಟ್ ಮ್ಯಾನ್ ಅನ್ನು ಫೋನ್ ನಂಬರ್ ಗೆ ಕರೆ ಮಾಡಿ ನೀವು ಈ ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ. ಈ ಕೆಲಸ ಮಾಡಲು ಅವರು ನಿಮಗೆ ಸಯಾಯ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ಪೆನ್ಶನ್ ಧಾರಾಕಾರ ಜೀವನ ಪ್ರಮಾಣಪತ್ರ ಆನ್ಲೈನ್ ನಲ್ಲಿ ಸಲ್ಲಿಕೆ ಮಾಡಲು ಇದೀಗ ಪೋಸ್ಟ್ ಮ್ಯಾನ್ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ಆದರೆ, ಈ ಸೇವೆಗಾಗಿ ಅವರು ನಿಮಗೆ 70 ರೂ.ಚಾರ್ಜ್ ಮಾಡಲಿದ್ದಾರೆ. ದೇಶದಲ್ಲಿರುವ ಎಲ್ಲ ನೌಕರರಿಗೆ ಈ ಸೇವೆ ಲಭ್ಯವಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Pensionಗಾಗಿ ಆನ್ಲೈನ್ ನಲ್ಲಿ Life Certificate ಪಡೆಯುವುದು ಹೇಗೆ, ಇಲ್ಲಿದೆ ಸ್ಟೆಪ್-ಬೈ-ಸ್ಟೆಪ್ ಮಾಹಿತಿ


Post Office ನಲ್ಲಿಯೂ ಈ ಸೌಕರ್ಯ ಇದೆ
ಇದಲ್ಲದೆ ನೀವು ಹತ್ತಿರದ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ ಆಧಾರ್ ಆಧಾರಿತ ಡಿಜಿಟಲ್ ಲೈಫ್ ಸರ್ಟಿಫಿಕೆಟ್ ಕೂಡ ಸಲ್ಲಿಸಬಹುದು.


ಎಲ್ಲ ಕೇಂದ್ರ ಸರ್ಕಾರದ ಪೆನ್ಷನ್ ಧಾರಕರಿಗೆ ಈ ಸೌಲಭ್ಯ 
ಈ ಕುರಿತು ಹೇಳಿಕೆ ನೀಡಿರುವ ಕಾರ್ಮಿಕ ಇಲಾಖೆ, ಪ್ರಸ್ತುತ ಮುಂದುವರೆದಿರುವ ಮಹಾಮಾರಿಯ ಕಾಲದಲ್ಲಿ ಪೆನ್ಷನ್ ಧಾರಕರು ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಜೀವನ ಪ್ರಮಾಣ ಪತ್ರ ಸಲ್ಲಿಸುವ ಮಾರ್ಗ ತುಂಬಾ ಸಹಾಯಕಾರಿಯಾಗಲಿದೆ. 'ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ' ಯ ಈ ಉಪಕ್ರಮವನ್ನು ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅಂಚೆ ಇಲಾಖೆಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಯಶಸ್ವಿಯಾಗಿ ಪ್ರಾರಂಭಿಸಿದೆ.


ಇದನ್ನು ಓದಿ- PF ಖಾತೆದಾರರ ಗಮನಕ್ಕೆ: ಸರ್ಕಾರದಿಂದ ನಿಮ್ಗೆ ಸಿಗುತ್ತೆ ʼ₹ 50 ಸಾವಿರʼ! ಹೇಗೆ ಗೊತ್ತಾ?


Jeevanpraman.gov.in
ಜೀವನಪ್ರಮಾಣ ಅಧಿಕೃತ ಪೋರ್ಟಲ್ ಗೂ ಕೂಡ ಭೇಟಿ ನೀಡುವ ಮೂಲಕ ನೀವು ಈ ಕೆಲಸ ಮಾಡಬಹುದು. ನವೆಂಬರ್ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಸೇವೆಗೆ ಚಾಲನೆ ನೀಡಿದ್ದಾರೆ. ವಯಸ್ಕ ಪೆನ್ಶನ್ ಧಾರಕರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಈ ಪ್ರನಾಳಿಕೆಯನ್ನು ವಿಕಸಿತಗೊಳಿಸಿದೆ.


ಇದನ್ನು ಓದಿ-ಶೀಘ್ರದಲ್ಲಿಯೇ 65 ಲಕ್ಷ ಪೆನ್ಷನ್ ಧಾರಕರಿಗೆ ಸಿಗಲಿದೆ Modi Govt ನೀಡಲಿದೆಯೇ ಈ ಗಿಫ್ಟ್


Umang ಆಪ್ ಮೂಲಕವೂ ಈ ಕೆಲಸ ಮಾಡಬಹುದು
ಇದಲ್ಲದೆ Umang ಆಪ್ ಸಹಾಯದಿಂದ ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಸ್ಮಾರ್ಟ್ ಫೋನ್ ಬಳಸಿ ಡಿಜಿಟಲ್ ಲೈಫ್ ಸರ್ಟಿಫಿಕೆಟ್ ತಯಾರಿಸಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ನಿಮ್ಮ ಬಳಿ 12 ಅಂಕಿಗಳ ಆಧಾರ್ ಸಂಖ್ಯೆ ಇರಬೇಕು ಹಾಗೂ ಆಧಾರ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿಯಾಗಿರಬೇಕು. ಜೊತೆಗೆ ಪೆನ್ಷನ್ ಬಿಡುಗಡೆ ಮಾಡುವ ಸಂಸ್ಥೆ ಹಾಗೂ ಆ ಸಂಸ್ಥೆಯ ಬಳಿ ನಿಮ್ಮ ಆಧಾರ್ ಸಂಖ್ಯೆ ನೊಂದಣಿಯಾಗಿರಬೇಕು.