ಉದ್ಯೋಗಿ ಭವಿಷ್ಯ ನಿಧಿ ಸಂಘಟನೆ (EPFO ) ಚಂದಾದಾರರಿಗೆ ತಮ್ಮ ಇಪಿಎಫ್ ಖಾತೆಗೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳ ಬಗ್ಗೆ ಅರಿವಿಲ್ಲ. ಈ ಕಾರಣದಿಂದ ಕೆಲವರಿಗೆ ತಮ್ಮ ಖಾತೆಗೆ ಸಂಬಂಧಿಸಿದ ಪ್ರಯೋಜನಗಳನ್ನ ಪಡೆದುಕೊಳ್ಳಲು ಸಾಧ್ಯವಾಗೋಲ್ಲ. ಇಡಿಎಲ್ಇ(EDLE) ಯೋಜನೆಯಡಿ ವಿಮೆ, ಪಿಂಚಣಿ, ಆದಾಯ ತೆರಿಗೆ ಕಡಿತ ಸೇರಿದಂತೆ ಹಲವು ನಿಯಮಗಳು ಬಹುತೇಕ ಚಂದಾದಾರರಿಗೆ ತಿಳಿದಿಲ್ಲ. ಇನ್ನು ಇದ್ರಲ್ಲಿ ʼಲಾಯಲ್ಟಿ ಕಮ್ ಲೈಫ್ ಬೆನಿಫಿಟ್ʼ(loyalty-come life benifit)ಗೆ ಸಂಬಂಧಿಸಿದ ನಿಯಮವೂ ಇದೆ. ಈ ಪ್ರಯೋಜನದಲ್ಲಿ, ಉದ್ಯೋಗಿಯು ತನ್ನ ಇಪಿಎಫ್ ಖಾತೆಗೆ ಸತತ 20 ವರ್ಷಗಳ ಕಾಲ ನಿಯಮಿತವಾಗಿ ಕೊಡುಗೆ ನೀಡಿದರೆ, ನಿವೃತ್ತಿಯ ಸಮಯದಲ್ಲಿ 50,000 ರೂ.ಗಳವರೆಗೆ ಪ್ರಯೋಜನಗಳನ್ನ ಪಡೆಯಬಹುದು.
EPFO ಪಿಂಚಣಿದಾರರಿಗೆ ಇಲ್ಲಿದೆ ಒಂದು ನೆಮ್ಮದಿಯ ಸುದ್ದಿ
ವಾಸ್ತವವಾಗಿ, ಎಲ್ಲಾ ಇಪಿಎಫ್(EPF) ಖಾತೆದಾರರು ತಮ್ಮ ಉದ್ಯೋಗಗಳನ್ನ ಬದಲಿಸಿದ ನಂತರವೂ ಅದೇ ಇಪಿಎಫ್(EPF) ಖಾತೆಗೆ ಕೊಡುಗೆ ನೀಡುವುದನ್ನ ಮುಂದುವರಿಸಬೇಕು. ಯಾಕಂದ್ರೆ, ಅವರು ಸತತ 20 ವರ್ಷಗಳ ಕಾಲ ಒಂದೇ ಖಾತೆಗೆ ಕೊಡುಗೆ ನೀಡಿದ ನಂತರ ಈ ಲಾಯಲ್ಟಿ-ಕಮ್-ಲೈಫ್ ಪ್ರಯೋಜನವನ್ನ ಪಡೆಯಬೋದು.
EPF ಖಾತೆಯ ಎಲ್ಲಾ ಮಾಹಿತಿ Whatsappನಲ್ಲಿ ಲಭ್ಯ, ಇಲ್ಲಿದೆ ಸಹಾಯವಾಣಿ ನಂಬರ್
ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮವೇನು..? ಇಪಿಎಫ್ಒ(EPFO) ತಜ್ಞರು ಹೇಳುವಂತೆ, 20 ವರ್ಷಗಳಿಂದ ಇಪಿಎಫ್ (EPF) ಖಾತೆಗೆ ಕೊಡುಗೆ ನೀಡಿದ ಖಾತೆದಾರರು ಲಾಯಲ್ಟಿ ಕಮ್ ಲೈಫ್ ಬೆನಿಫಿಟ್ನ ಪ್ರಯೋಜನವನ್ನ ಸಿಬಿಟಿ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದ್ದು, ಇದರರ್ಥ ಯಾರಾದರೂ ಈ ಅರ್ಹತೆಯನ್ನ ಹೊಂದಿದ್ದರೆ, ಅವರು 50,000 ರೂಪಾಯಿ ಹೆಚ್ಚುವರಿ ಪ್ರಯೋಜನವನ್ನ ಪಡೆಯುತ್ತಾರೆ.
ಈಗ ಇಪಿಎಫ್ಒ ದೂರುಗಳನ್ನು WhatsAppನಲ್ಲಿ ಇತ್ಯರ್ಥಪಡಿಸಿ
ಯಾರಿಗೆ ಎಷ್ಟು ಲಾಭ? ಲಾಯಲ್ಟಿ ಕಮ್ ಲೈಫ್ ಬೆನಿಫಿಟ್ ಅಡಿಯಲ್ಲಿ, 5,000 ರೂಪಾಯಿಗಳ ವರೆಗಿನ ಮೂಲ ವೇತನ ಹೊಂದಿರುವ ಜನರು 30,000 ರೂಪಾಯಿಗಳ ಪ್ರಯೋಜನವನ್ನ ಪಡೆಯಬಹುದಾಗಿದೆ. 5,001 ರಿಂದ 10,000 ರೂ.ಗಳ ವರೆಗಿನ ಮೂಲ ವೇತನವು ರೂ.40,000 ದ ಪ್ರಯೋಜನವನ್ನ ಪಡೆಯಲಿದ್ದು, ನೀವು ರೂ.10,000 ಕ್ಕಿಂತ ಹೆಚ್ಚಿನ ಮೂಲ ವೇತನವನ್ನ ಹೊಂದಿದ್ದರೆ, ರೂ 50,000 ಪ್ರಯೋಜನವನ್ನು ಪಡೆಯಬೋದು.
ನಿಮ್ಮ PF ಹಳೆಯ ಕಂಪನಿಯಲ್ಲಿ ಸಿಲುಕಿದೆಯೇ? ಹಣ ಹಿಂಪಡೆಯಲು ಈ ಸುಲಭ ಮಾರ್ಗ ಅನುಸರಿಸಿ
ಈ ಪ್ರಯೋಜನ ಪಡೆಯಲು ಚಂದದಾರರು ಮಾಡಬೇಕಾದ್ದೇನು? ಇಪಿಎಫ್ಒ(EPFO) ಚಂದಾದಾರರು ಇದರ ಪ್ರಯೋಜನವನ್ನ ಪಡೆಯಲು ಅತ್ಯುತ್ತಮ ಮಾರ್ಗವೆಂದರೆ, ನೀವು ನಿಮ್ಮ ಉದ್ಯೋಗಗಳನ್ನ ಬದಲಾಯಿಸಿದರೂ ಅದೇ ಇಪಿಎಫ್ ಖಾತೆಯನ್ನೇ ಮುಂದುವರಿಸಿ. ಇದಕ್ಕಾಗಿ, ನೀವು ನಿಮ್ಮ ಹಳೆಯ ಉದ್ಯೋಗದಾತ ಮತ್ತು ಪ್ರಸ್ತುತ ಉದ್ಯೋಗದಾತರಿಗೆ ಮಾಹಿತಿಯನ್ನ ನೀಡಬೇಕಾಗುತ್ತೆ. ಸಾಮಾನ್ಯವಾಗಿ ಕೆಲಸ ಮಾಡುವಾಗ ಪಿಎಫ್(PF) ವಿತ್ ಡ್ರಾ ಮಾಡಬಾರದು. ಯಾಕಂದ್ರೆ, ಇದ್ರಿಂದ ಚಂದಾದಾರರು ಆದಾಯ ತೆರಿಗೆ ಸೇರಿದಂತೆ ನಿವೃತ್ತಿ ನಿಧಿಗಳಲ್ಲಿ ನಷ್ಟ ಅನುಭವಿಸಬೋದು. ಇದರಿಂದ ಪಿಂಚಣಿ ಸೌಲಭ್ಯ ಹಾಗೂ ನಿಷ್ಠೆಯೂ ನಷ್ಟವಾಗುತ್ತೆ.