Pensionಗಾಗಿ ಆನ್ಲೈನ್ ನಲ್ಲಿ Life Certificate ಪಡೆಯುವುದು ಹೇಗೆ, ಇಲ್ಲಿದೆ ಸ್ಟೆಪ್-ಬೈ-ಸ್ಟೆಪ್ ಮಾಹಿತಿ

ನಿಯಮಿತ ಪಿಂಚಣಿಗಾಗಿ ಪಿಂಚಣಿದಾರರಿಗೆ ಜೀವನ ಪ್ರಮಾಣ ಪತ್ರ ಅಂದರೆ  'ಲೈಫ್ ಸರ್ಟಿಫಿಕೇಟ್' ಅಗತ್ಯವಿದೆ. ನವೆಂಬರ್‌ನಲ್ಲಿ, ಪ್ರತಿ ವರ್ಷ 'ಲೈಫ್ ಸರ್ಟಿಫಿಕೇಟ್' ಅನ್ನು ವೈಯಕ್ತಿಕವಾಗಿ ಪ್ರಸ್ತುತಪಡಿಸಬೇಕು. 'ಲೈಫ್ ಸರ್ಟಿಫಿಕೇಟ್' ಅನ್ನು ಆನ್‌ಲೈನ್‌ನಲ್ಲಿಯೂ ಕೂಡ ನೀವು ಜನರೇಟ್ ಮಾಡಬಹುದು. 

Last Updated : Nov 9, 2020, 04:36 PM IST
  • ನಿಯಮಿತ ಪಿಂಚಣಿಗಾಗಿ ಪಿಂಚಣಿದಾರರಿಗೆ ಜೀವನ ಪ್ರಮಾಣ ಪತ್ರ ಸಲ್ಲಿಸುವುದು ಆವಶ್ಯಕ.
  • ನವೆಂಬರ್‌ನಲ್ಲಿ, ಪ್ರತಿ ವರ್ಷ 'ಲೈಫ್ ಸರ್ಟಿಫಿಕೇಟ್' ಅನ್ನು ವೈಯಕ್ತಿಕವಾಗಿ ಪ್ರಸ್ತುತಪಡಿಸಬೇಕು.
  • 'ಲೈಫ್ ಸರ್ಟಿಫಿಕೇಟ್' ಅನ್ನು ಆನ್‌ಲೈನ್‌ನಲ್ಲಿಯೂ ಕೂಡ ನೀವು ಜನರೇಟ್ ಮಾಡಬಹುದು.
Pensionಗಾಗಿ  ಆನ್ಲೈನ್ ನಲ್ಲಿ Life Certificate ಪಡೆಯುವುದು ಹೇಗೆ, ಇಲ್ಲಿದೆ ಸ್ಟೆಪ್-ಬೈ-ಸ್ಟೆಪ್ ಮಾಹಿತಿ title=

ನವದೆಹಲಿ:ನಿಯಮಿತ ಪಿಂಚಣಿಗಾಗಿ (Pension) ಪಿಂಚಣಿದಾರರಿಗೆ ಜೀವನ ಪ್ರಮಾಣ ಪತ್ರ ಅಂದರೆ  'ಲೈಫ್ ಸರ್ಟಿಫಿಕೇಟ್' ಅಗತ್ಯವಿದೆ. ನವೆಂಬರ್‌ನಲ್ಲಿ, ಪ್ರತಿ ವರ್ಷ 'ಲೈಫ್ ಸರ್ಟಿಫಿಕೇಟ್' ಅನ್ನು ವೈಯಕ್ತಿಕವಾಗಿ ಪ್ರಸ್ತುತಪಡಿಸಬೇಕು. 'ಲೈಫ್ ಸರ್ಟಿಫಿಕೇಟ್' ಅನ್ನು ಆನ್‌ಲೈನ್‌ನಲ್ಲಿಯೂ ಕೂಡ ನೀವು ಜನರೇಟ್ ಮಾಡಬಹುದು. ಪಿಂಚಣಿದಾರರು ಒಂದು ಸಾಫ್ಟ್ವೇರ್ ಅಪ್ಲಿಕೇಶನ್ ಹಾಗೂ ಸುರಕ್ಷಿತ  ಆಧಾರ್ ಆಧಾರಿತ ಬಯೋಮೆಟ್ರಿಕ್ ಆಥೆಂಟಿಕೆಶನ್ ಸಿಸ್ಟಂ ಅನ್ನು ಬಳಸಿ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಿದ್ಧಪಡಿಸಬಹುದು. ಅಗತ್ಯವೆನಿಸಿದಾಗ ಪಿಂಚಣಿದಾರರಿಂದ ಹಾಗೂ ಪಿಡಿಎ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಎಕ್ಸಸ್ ಮಾಡಬಹುದಾಗಿದೆ.

ಇದನ್ನು ಓದಿ- ಶೀಘ್ರದಲ್ಲಿಯೇ 65 ಲಕ್ಷ ಪೆನ್ಷನ್ ಧಾರಕರಿಗೆ ಸಿಗಲಿದೆ Modi Govt ನೀಡಲಿದೆಯೇ ಈ ಗಿಫ್ಟ್

ಡಿಜಿಟಲ್ ಪ್ರಮಾಣಪತ್ರ ಸಿದ್ಧಪಡಿಸಲು ಏನು ಬೇಕಾಗಲಿದೆ?
- ಪಿಂಚಣಿದಾರರ ಬಳಿ ಆಧಾರ್ ಸಂಖ್ಯೆ ಇರಬೇಕು.
- ಪಿಂಚಣಿದಾರರ ಬಳಿ ಒಂದು ಅಧಿಕೃತ ಮೊಬೈಲ್ ಸಂಖ್ಯೆ ಇರಬೇಕು.
- ಪ್ರಮಾಣಪತ್ರಕ್ಕಾಗಿ ಪಿನ್ಚನಿದಾರರು ಮೊದಲು 'ಜೀವನ ಪ್ರಮಾಣ'ದ ಜೊತೆಗೆ ನೊಂದಣೆ ಮಾಡಿಸುವುದು ಆವಶ್ಯಕವಾಗಿದೆ.

ಇದನ್ನು ಓದಿ-ದ್ವಿಗುಣವಾಗಲಿದೆ EPS ಪಿಂಚಣಿ, ಹಣಕಾಸು ಸಚಿವಾಲಯದಿಂದ EPFO ಹೊಸ ಪ್ರಸ್ತಾಪ

ಹೇಗೆ ನಮೂದಿಸಬೇಕು
ಹಂತ 1: ಎಲ್ಲಕ್ಕಿಂತ ಮೊದಲು 'ಜೀವನ ಪ್ರಮಾಣ'ಆಪ್ ಡೌನ್ಲೋಡ್ ಮಾಡಿ ಅದನ್ನು ತೆರೆಯಿರಿ.
ಹಂತ 2: ಈಗ ಹೊಸ ರಜಿಸ್ಟ್ರೆಶನ್ ಮೇಲೆ ಕ್ಲಿಕ್ಕಿಸಿ.
ಹಂತ 3: ಈಗ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಹೆಸರು, ಮೊಬೈಲ್ ಸಂಖ್ಯೆ, PPO ಸಂಖ್ಯೆಯನ್ನು ನಮೂದಿಸಿ.
ಹಂತ 4: ಬಳಿಕ Send OTP ಮೇಲೆ ಕ್ಲಿಕ್ಕಿಸಿ. ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು OTP ಬರಲಿದೆ.
ಹಂತ 5: OTP ನಮೂದಿಸಿ ಮತ್ತು ಆಧಾರ್ ಸಹಾಯದಿಂದ ಅದನ್ನು ದೃಢಪಡಿಸಿ.
ಹಂತ 6: ಇದೀಗ SUBMIT ಮೇಲೆ ಕ್ಲಿಕ್ ಮಾಡಿ. ಪರಿಶೀಲನೆಯ ಬಳಿಕ ಪ್ರಮಾಣ ID ಜನರೇಟ್ ಆಗಲಿದೆ.

ಇದನ್ನು ಓದಿ-Take Home Salary ಯಲ್ಲಿ ಹೆಚ್ಚಳ, ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದ ಗಿಫ್ಟ್

ಆನ್ಲೈನ್ ನಲ್ಲಿ ಲೈಫ್ ಸರ್ಟಿಫಿಕೇಟ್ ಹೇಗೆ ಜನರೆತ್ ಮಾಡಬೇಕು?
ಹಂತ 1: ಪ್ರಮಾಣ ಸಂಖ್ಯೆ ಹಾಗೂ OTP ಉಪಯೋಗಿಸಿ 'ಜೀವನ ಪ್ರಮಾಣ' ಆಪ್ ಅನ್ನು ಪ್ರವೇಶಿಸಿ. 
ಹಂತ 2: 'Generate Jeevan Pramaan' ಆಯ್ಕೆ ಮಡಿ ಹಾಗೂ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ.
ಹಂತ 3: ಜನರೇಟ್ OTP ಮೇಲೆ ಕ್ಲಿಕ್ಕಿಸಿ.
ಹಂತ 4.: OTP ಮೊಬೈಲ್ ಸಂಖ್ಯೆಗೆ ಬರುತ್ತಿದ್ದಂತೆ ಅದನ್ನು ನಮೂದಿಸಿ.
ಹಂತ 5: PPO ಸಂಖ್ಯೆ, ಹೆಸರು, ಹಣ ನೀಡುವ ಸಂಸ್ಥೆಯ ಹೆಸರು ಇತ್ಯಾದಿಗಳನ್ನು ನಮೂದಿಸಿ.
ಹಂತ 6: ಫಿಂಗರ್ ಪ್ರಿಂಟ್/ಐರಿಸ್ ಅನ್ನು ಸ್ಕ್ಯಾನ್ ಮಾಡಿ ಹಾಗೂ ಆಧಾರ ದತಾಮ್ಶವನ್ನು ಬಳಸಿ ಅದನ್ನು ಪ್ರಮಾಣೀಕರಿಸಿ. ಇದಾದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ಮೇಲೆ ಪರಿಶೀಲನೆಯ ಸಂದೇಶ ಬರಲಿದೆ.

Trending News