ತವರಿಗೆ ಬಂದ ಆ ಸೈನಿಕನಿಗೆ ಕಾದಿತ್ತು ಅಚ್ಚರಿ..! ತೇವವಾಗಿತ್ತು ಕಣ್ಣಂಚು.!
ದೇಶ ಕಾಯುವ ಯೋಧ ಯಾವ ದೇವರಿಗೂ ಕಡಿಮೆಯಲ್ಲ. ಮಳೆ, ಚಳಿ ಬಿಸಿಲು ಯಾವುದನ್ನೂ ಲೆಕ್ಕಿಸದೆ ಗಡಿಯಲ್ಲಿ ನಮ್ಮ ದೇಶವನ್ನು ಕಾಯುತ್ತಿರುತ್ತಾನೆ.
ಮಧ್ಯಪ್ರದೇಶ : ದೇಶ ಕಾಯುವ ಯೋಧ (Soldiers) ಯಾವ ದೇವರಿಗೂ ಕಡಿಮೆಯಲ್ಲ. ಮಳೆ, ಚಳಿ ಬಿಸಿಲು ಯಾವುದನ್ನೂ ಲೆಕ್ಕಿಸದೆ ಗಡಿಯಲ್ಲಿ ನಮ್ಮ ದೇಶವನ್ನು ಕಾಯುತ್ತಿರುತ್ತಾನೆ. ಯಾವ ಸಂದರ್ಭದಲ್ಲಿ ಏನಾಗುತ್ತದೋ ಗೊತ್ತಿಲ್ಲ. ಏನೇ ಆಗಲಿ, ಯಾವ ಸಮಯ ಸಂದರ್ಭವೇ ಇರಲಿ ಯಾವುದಕ್ಕೂ ಬಗ್ಗದೆ, ಜಗ್ಗದೆ ತನ್ನ ಕಾರ್ಯವನ್ನು ಮಾಡುತ್ತಿರುತ್ತಾನೆ. ಹೊರಗಿನ ಶತ್ರುಗಳಿಂದ ನಮ್ಮನ್ನು ಸುರಕ್ಷಿತವಾಗಿಡಲು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಾನೆ. ಇವತ್ತು ನಾವು ಸುರಕ್ಷಿತವಾಗಿ, ನೆಮ್ಮದಿಯಿಂದ ಬೆಚ್ಚಗೆ ನಮ್ಮ ಮನೆಯೊಳಗಿದ್ದೇವೆ ಎಂದರೆ ಅದು ನಮ್ಮ ಸೈನಿಕರಿಂದ.
ಇದೇ ಕಾರಣಕ್ಕೆ ಸೈನ್ಯ (Army) ಸೇನೆ ಅಂದ ಕೂಡಲೇ ಒಂದು ವಿಶೇಷ ಗೌರವ ಹೊಮ್ಮಿಬಿಡುತ್ತದೆ. ಗಡಿಕಾಯುವ ಯೋಧ ತನ್ನ ವೃತ್ತಿಜೀವನದ ಪೂರ್ಣಾವಧಿಯನ್ನು ಪೂರೈಸಿ ಬಂದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. ಮಧ್ಯಪ್ರದೇಶದಲ್ಲಿ (Madhyapradesh) ನಡೆದ ಘಟನೆ ಎಂಥವರ ಕಣ್ಣಂಚನ್ನೂ ಒದ್ದೆಯಾಗಿಸದೆ ಬಿಡದು.
ಯಾವುದೇ ಸೂಪರ್ ಪವರ್ ರಾಷ್ಟ್ರದ ಗೌರವವನ್ನು ಘಾಸಿಗೊಳಿಸಿದರೆ ತಕ್ಕ ಉತ್ತರ ನೀಡಲಾಗುವುದು
ಮಧ್ಯಪ್ರದೇಶದ ಚಿರೂನ್ ಗ್ರಾಮದ ನಾಯಕ್ ವಿಜಯ್ ಬಹದ್ದೂರ್ ಸಿಂಗ್ (Vijaya B Singh) ಸೇನೆಯಲ್ಲಿ 17 ವರ್ಷಗಳ ಸೇವೆಯನ್ನು ಪೂರೈಸಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿ ಬಳಿಕ ತನ್ನ ಗ್ರಾಮಕ್ಕೆ ಬಂದ ವಿಜಯ್ ಬಹದ್ದೂರ್ ಸಿಂಗ್ ಗೆ ಅಚ್ಚರಿ ಕಾದಿತ್ತು. ಯೋಧನಿಗೆ (Soldier) ಸ್ವಾಗತ ಕೋರಲು ಗ್ರಾಮಸ್ಥರೆಲ್ಲಾ ಒಂದೆಡೆ ಸೇರಿದ್ದರು. ವಿಜಯ್ ಬಹದ್ದೂರ್ ಅವರನ್ನು ತಮ್ಮ ಅಂಗೈಗಳ ಮೇಲೆ ನಡೆಸಿ ಸೈನಿಕನಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಜಯ್ ಬಹದ್ದೂರ್ ಸಿಂಗ್, 17 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಜನರ ಪ್ರೀತಿ ವಿಶ್ವಾಸಕ್ಕೆ ಅಬಾರಿಯಾಗಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : Indian Army : ಭಯಂಕರ ಹಿಮಪಾತದ ನಡುವೆಯೇ ಗರ್ಭಿಣಿಯನ್ನು ಸುರಕ್ಷಿತವಾಗಿ ಆಸ್ಪತ್ರೆ ಸೇರಿಸಿದ ಸೇನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.