Indian Army : ಭಯಂಕರ ಹಿಮಪಾತದ ನಡುವೆಯೇ ಗರ್ಭಿಣಿಯನ್ನು ಸುರಕ್ಷಿತವಾಗಿ ಆಸ್ಪತ್ರೆ ಸೇರಿಸಿದ ಸೇನೆ

ಭಯಂಕರ ಹಿಮದ ನಡುವೆಯೇ ಸಹಾಯಕ್ಕೆ ಧಾವಿಸಿದ ಸೇನೆ. ಹೆರಿಗೆ ನೋವುಕಾಣಿಸಿಕೊಂಡ ಮಹಿಳೆಯನ್ನು ಹೆಗಲ ಮೇಲೆ  ಹೊತ್ತು ಸಾಗಿದ ಸೈನಿಕರು

Written by - Zee Kannada News Desk | Last Updated : Jan 7, 2021, 06:52 PM IST
  • ದಟ್ಟ ಹಿಮದ ಮಧ್ಯೆಯೇ ಮಹಿಳೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ ಸೇನೆ
  • ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
  • ಸಿಹಿ ಹಂಚಿ ಸೇನೆಗೆ ಧನ್ಯವಾದ ಹೇಳಿದ ಮಹಿಳೆಯ ಪತಿ
Indian Army : ಭಯಂಕರ ಹಿಮಪಾತದ ನಡುವೆಯೇ ಗರ್ಭಿಣಿಯನ್ನು ಸುರಕ್ಷಿತವಾಗಿ ಆಸ್ಪತ್ರೆ ಸೇರಿಸಿದ ಸೇನೆ title=
ದಟ್ಟ ಹಿಮದ ಮಧ್ಯೆಯೇ ಮಹಿಳೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ ಸೇನೆ

ಕಾಶ್ಮೀರ : ಕಾಶ್ಮೀರ  ಭೂಮಿ ಮೇಲಿನ ಸ್ವರ್ಗ. ಜೀವನದಲ್ಲಿ ಒಮ್ಮೆಯಾದರೂ ಈ ಸ್ವರ್ಗಕ್ಕೆ ಭೇಟಿ ನೀಡಬೇಕು. ಇನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಮಾಡುವವರೂ ಬಹಳಷ್ಟು ಮಂದಿ ಇದ್ದಾರೆ. ಆದರೆ ಅದೇ ಚಳಿಗಾಲದಲ್ಲಿಇಲ್ಲಿನ ಬದುಕನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಮೈ ಕೊರೆಯುವ ಚಳಿ ಒಂದೆಡೆಯಾದರೆ ಸುತ್ತ ಎತ್ತ ನೋಡಿದರೂ ಹಿಮವಷ್ಟೇ ಕಣ್ಣಿಗೆ ಬೀಳುತ್ತದೆ.

ಕಾಶ್ಮೀರದಲ್ಲಿ(Kashmir) ಚಳಿಗಾಲದಲ್ಲಿ ಹಿಮಪಾತ (Snow Fall) ಹೊಸದೇನಲ್ಲ. ಇಲ್ಲಿ ಹಿಮ ಬೀಳಲು ಆರಂಭವಾದರೆ ಮನುಷ್ಯನ ದೇಹದ ಅರ್ಧ ಭಾಗದಷ್ಟು ಹಿಮದಲ್ಲಿಯೇ ಮುಚ್ಚಿ ಹೋಗುತ್ತದೆ.  ಹಿಮಪಾತದ ಸದರ್ಭದಲ್ಲಿ ಈ ಪ್ರದೇಶದಲ್ಲಿ ಹೊರಗಿನ ಜಗತ್ತಿನ ಸಂಪರ್ಕವೇ  ಕಡಿದು ಹೋಗುತ್ತದೆ. ಆಗ ಈ ಭಾಗದ ಜನರ ಪಾಲಿಗೆ ದೇವರಾಗಿ ಕಂಡುಬರುವುದು ನಮ್ಮ ಸೇನೆ (Army). ಈ ಜನರು ತಮಗೆ ಏನೇ ಸಹಾಯ ಬೇಕೆಂದರು ನಿರೀಕ್ಷಿಸುವುದು ಸೇನೆಯ ಸಹಾಯವನ್ನು. ಸೇನೆಗೆ ಇಲ್ಲಿಯ ಜನರ ಕಷ್ಟ ತಲುಪಿದರೆ  ಸಾಕು ನಮ್ಮ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಾದೂ ಜನರ ಜೀವನ ರಕ್ಷಿಸುವಲ್ಲಿ ಟೊಂಕ ಕಟ್ಟಿ ನಿಲ್ಲುತ್ತಾರೆ.

ಇದನ್ನೂ ಓದಿ : ಖ್ಯಾತ ಫ್ಯಾಶನ್ ಡಿಸೈನರ್ ಸತ್ಯಪಾಲ್ ನಿಧನ

ಎರಡು ದಿನಗಳ ಹಿಂದೆ ಇಲ್ಲಿ ನಡೆದದ್ದೂ ಇದೇ. ಕಾಶ್ಮೀರದ  ಕುಪವಾಡದ ಒಂದು ಹಳ್ಳಿಯಲ್ಲಿ ಮಹಿಳೆಗೆ ಹೆರಿಗೆ ನೋವು (Labor Pain) ಕಾಣಿಸಿಕೊಂಡಿದೆ. ಭಯಂಕರ ಹಿಮಪಾತವಾದ ಕಾರಣ ಮನೆಯಿಂದ ಹೊರ ಬರುವುದು ಸಾಧ್ಯವಲ್ಲದ ಮಾತು. ಅಲ್ಲದೆ ಎಲ್ಲಾ ಸಂಪರ್ಕವೂ ಕಳೆದು ಹೋಗಿತ್ತು. ಈ ಸಂದರ್ಭದಲ್ಲಿ ಈ  ಪರಿವಾರಕ್ಕೆ ದೇವರಂತೆ ಸಹಾಯಕ್ಕೆ ಬಂದಿದ್ದು ಸೇನೆ. ರಾತ್ರಿ  ತನ್ನ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ವೇಳೆ   ಮಹಿಳೆಯ ಪತಿ  ಮನ್ಸೂರ್ ಅಹಮ್ಮದ್ ಶೇಖ್ ಅವರಿಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಒಮ್ಮೆ ಸೇನೆಯ ಸಂಪರ್ಕಕ್ಕೆ ಬಂದರೆ ನೆರವು ಸಿಗುವುದು ಖಂಡಿತಾ ಎಂಬುದನ್ನು ಅರಿತ ಶೇಖ್ ಹೇಗಾದರೂ ಮಾಡಿ ಕರಾಲ್ ಪುರದಲ್ಲಿದ್ದ ಸೇನೆಯ ತುಕಡಿಗೆ  ಸುದ್ದಿ ತಲುಪಿಸುತ್ತಾರೆ. 

ಸುದ್ದಿ ತಲುಪುತ್ತಿದ್ದಂತೆ, ವೈದ್ಯಾಧಿಕಾರಿ ಜೊತೆ  ಸ್ಥಳಕ್ಕೆ ಧಾವಿಸಿದ ಸೈನಿಕರು, ಗರ್ಭವತಿ ಮಹಿಳೆಯನ್ನು (Pregnant Women) ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಾರೆ. ಮೊಣಕಾಲಿನವರೆಗೆ ಹಿಮದಿಂದ ಕೂಡಿದ ರಸ್ತೆಯಲ್ಲಿ ಮಹಿಳೆಯನ್ನು ಹೆಗಲ ಮೇಲೆ  ಹೊತ್ತುಕೊಂಡು ಸೈನಿಕರು ಸಾಗುತ್ತಾರೆ. ಸುಮಾರು 2 ಕಿಮೀ ದೂರದವರೆಗೆ ಹೀಗೆ ಸಾಗಿದ ಸೈನಿಕರು ಮಹಿಳೆಯನ್ನು ಸುರಕ್ಷಿತವಾಗಿ ಆ್ಯಂಬ್ಯುಲೆನ್ಸ್ ತಲುಪಿಸುತ್ತಾರೆ. ಅಲ್ಲಿಂದ ಆ್ಯಂಬುಲೆನ್ಸ್ (Ambulance) ಮೂಲಕ ಆಸ್ಪತ್ರೆ ಸೇರಿದ ಮಹಿಳೆ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. 

ಈ ಎಲ್ಲಾ  ಘಟನೆಯ ನಂತರ ಮನ್ಸೂರ್ ಅಹಮ್ಮದ್  ಶೇಖ್ ಸೇನೆಗೆ ಧನ್ಯವಾದ ತಿಳಿಸಿದ್ದು,  ಸಿಹಿ ಹಂಚಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News