ಗಡಿಯಲ್ಲಿ ಇಂಡೋ-ಚೀನಾ ಉದ್ವಿಗ್ನತೆ ಮಧ್ಯೆ ಶೀಘ್ರವೇ ಮಿಲಿಟರಿ ಬಲ ಹೆಚ್ಚಿಸಲು ಮುಂದಾದ ಸರ್ಕಾರ

ಇಂಡೋ-ಚೀನಾ ಗಡಿಯಲ್ಲಿ ಉದ್ವಿಗ್ನತೆ ನಡೆಯುತ್ತಿರುವ ಮಧ್ಯೆ, ಮಿಲಿಟರಿಯ ತಕ್ಷಣದ ಬಲವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Last Updated : Jun 22, 2020, 07:11 AM IST
ಗಡಿಯಲ್ಲಿ ಇಂಡೋ-ಚೀನಾ ಉದ್ವಿಗ್ನತೆ ಮಧ್ಯೆ ಶೀಘ್ರವೇ ಮಿಲಿಟರಿ ಬಲ ಹೆಚ್ಚಿಸಲು ಮುಂದಾದ ಸರ್ಕಾರ title=

ನವದೆಹಲಿ: ಇಂಡೋ-ಚೀನಾ ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ತಕ್ಷಣವೇ ಮಿಲಿಟರಿ ಬಲವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇಂಡೋ-ಚೀನಾ (Indo- China) ಗಡಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮೂರು ಸೇನಾ ಸದಸ್ಯರಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಖರೀದಿಸಲು ಸರ್ಕಾರವು ತುರ್ತು ಆರ್ಥಿಕ ಅಧಿಕಾರವನ್ನು ನೀಡಿದ್ದು ಈ ಯೋಜನೆಯಲ್ಲಿ ಪ್ರತಿ ಸೇನೆಯು 500 ಕೋಟಿ ರೂ.ವರೆಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ ಎಂದು  ಸರ್ಕಾರಿ ಮೂಲಗಳು ಭಾನುವಾರ ಮಾಹಿತಿ ನೀಡಿವೆ. ಭೂ ಸೈನ್ಯ, ವಾಯುಪಡೆ ಮತ್ತು ನೌಕಾಪಡೆಯು ಸೈನ್ಯದ ಮೂರು ಭಾಗಗಳಲ್ಲಿ ಬರುತ್ತವೆ.

ವಾಸ್ತವಿಕ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ತಮ್ಮ ಕಾರ್ಯಾಚರಣೆಯ ಸಿದ್ಧತೆಗಳನ್ನು ಹೆಚ್ಚಿಸಲು ಅಲ್ಪಾವಧಿಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸಲು ಪಡೆಗಳಿಗೆ ವಿಶೇಷ ಆರ್ಥಿಕ ಅಧಿಕಾರವನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ಮಾರಾಟಗಾರರಿಂದ ಅಗತ್ಯ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಖರೀದಿಸುವಂತಹ ವಿಶೇಷ ರಿಯಾಯಿತಿಗಳನ್ನು ನೀಡುವ ಮೂಲಕ ಸರ್ಕಾರವು ಮಿಲಿಟರಿ ಸಂಗ್ರಹಣೆಯ ವಿಳಂಬವನ್ನು ಕಡಿಮೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷವೆಂದರೆ ಜೂನ್ 15ರಂದು ಪೂರ್ವ ಲಡಾಖ್‌ನ (Ladakh) ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಇದು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಮತ್ತೆ ಮುಖಾಮುಖಿಯಾಗುವ ಭೀತಿಯ ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈಗಾಗಲೇ ಭೂ ಸೈನ್ಯ, ವಾಯುಪಡೆ ಮತ್ತು ನೌಕಾಪಡೆಗೆ ಎಲ್‌ಎಸಿಯಲ್ಲಿ ತಮ್ಮ ಅಭಿಯಾನದ ಸನ್ನದ್ಧತೆಯನ್ನು ಹೆಚ್ಚಿಸುವಂತೆ ಸೂಚನೆ ನೀಡಿದ್ದಾರೆ.

ಶೀಘ್ರದಲ್ಲೇ ಭಾರತಕ್ಕೆ ರಷ್ಯಾದ MIG29 ಮತ್ತು Sukhoi Su-30MKI ವಿಮಾನ

ಸೈನ್ಯವು ತನ್ನ ಮದ್ದುಗುಂಡು ನಿಕ್ಷೇಪಗಳನ್ನು ಹೆಚ್ಚಿಸಲು ತುರ್ತು ಆರ್ಥಿಕ ಅಧಿಕಾರವನ್ನು ಬಳಸಲಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ. 'ಸೇನೆಯ ಮೂರು ಅಂಗಗಳಿಗೆ ಖರೀದಿ ಯೋಜನೆಗೆ 500 ಕೋಟಿ ರೂ. ನೀಡಲಾಗಿದೆ' ಎಂದು ಮೂಲವೊಂದು ತಿಳಿಸಿದೆ.

ಚೀನಾಕ್ಕೆ ಪಾಠ ಕಲಿಸಲು ವಿಚಕ್ಷಣ ವಿಮಾನಗಳ ನಿಯೋಜನೆ ಹೆಚ್ಚಿಸಿದ ಭಾರತ

ಗಾಲ್ವಾನ್ ಕಣಿವೆಯಲ್ಲಿನ ಚಕಮಕಿ ಕಳೆದ 45 ವರ್ಷಗಳಲ್ಲಿ ಉಭಯ ತಂಡಗಳ ನಡುವಿನ ದೊಡ್ಡ ಮುಖಾಮುಖಿಯಾಗಿದೆ. ಏತನ್ಮಧ್ಯೆ ಭಾರತೀಯ ಸೈನಿಕರು ಮಾತ್ರವಲ್ಲ ಈ ಮುಖಾಮುಖಿಯಲ್ಲಿ ತಮ್ಮ ಸೈನಿಕರೂ ಕೂಡ ಹುತಾತ್ಮರಾಗಿದ್ದಾರೆ ಎಂದು ಹೇಳಿಕೊಂಡಿರುವ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತನ್ನ ಎಷ್ಟು ಸೈನಿಕರನ್ನು ಸಾವನ್ನಪ್ಪಿದ್ದಾರೆ ಎಂದು ಈವರೆಗೂ ಸ್ಪಷ್ಟಪಡಿಸಿಲ್ಲ.
 

Trending News