ಕೋಲ್ಕತಾ : ರಾಜ್ಯದ COVID-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಮತಾ ಬ್ಯಾನರ್ಜಿ ಸರ್ಕಾರ, ನಿರ್ಬಂಧಗಳನ್ನು ಜುಲೈ 1 ರವರೆಗೆ ವಿಸ್ತರಿಸಿದೆ. ಆದರೂ ಈ ಬಾರಿ ಕೆಲವು ರಿಯಾಯಿತಿಗಳನ್ನು ನೀಡಲಾಗಿದೆ. ಹೊಸ ಮಾರ್ಗಸೂಚಿಗಳ (New guidelines) ಪ್ರಕಾರ, ಶೇಕಡಾ 25 ರಷ್ಟು ಸಾಮರ್ಥ್ಯವಿರುವ ಎಲ್ಲಾ ಸರ್ಕಾರಿ ಕಚೇರಿಗಳು ಜೂನ್ 16 ರಿಂದ ಕಾರ್ಯನಿರ್ವಹಿಸಲಿವೆ. ವಿಭಾಗ ಮುಖ್ಯಸ್ಥರು ಡ್ಯೂಟಿ ರೋಸ್ಟರ್ ಅನ್ನು ಸಿದ್ಧಪಡಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಹೊಸ ಮಾರ್ಗಸೂಚಿಗಳು :
ಪ್ರಯಾಣಿಸಬೇಕಾದರೆ ಇ-ಪಾಸ್ ಹೊಂದಿರುವುದು ಅಗತ್ಯ. ಮಾರ್ನಿಂಗ್ ವಾಕ್ (Morning walk) ಮಾಡಲು ಬೆಳಿಗ್ಗೆ 6:00 ರಿಂದ 9:00 ರವರೆಗೆ ಮಾತ್ರ ಪಾರ್ಕ್ ಗಳು ತೆರೆಯಲಿವೆ. ಅಲ್ಲದೆ ಲಸಿಕೆ (Covid vaccine) ಹಾಕಿಕೊಂಡವರಿಗೆ ಮಾತ್ರ, ಪಾರ್ಕ್ ಒಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.  ಎಲ್ಲಾ ಮಾರುಕಟ್ಟೆಗಳು ಬೆಳಿಗ್ಗೆ 7:00 ರಿಂದ 11:00 ರವರೆಗೆ ಮಾತ್ರ ತೆರೆದಿರುತ್ತವೆ. ಇತರ ಚಿಲ್ಲರೆ ಅಂಗಡಿಗಳು ಬೆಳಗ್ಗೆ 11: 00ರಿಂದ ಸಂಜೆ 6  00 ರ ವರೆಗೆ ತೆರೆದಿರುತ್ತದೆ. 


ಇದನ್ನೂ ಓದಿ : BJP : ತೆಲಂಗಾಣ ಮಾಜಿ ಸಚಿವ ಬಿಜೆಪಿಗೆ ಸೇರ್ಪಡೆ!


ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ತೆರೆದಿರುತ್ತವೆ : 
50 ಪ್ರತಿಶತ ಸಾಮರ್ಥ್ಯದೊಂದಿಗೆ ಮಧ್ಯಾಹ್ನ 12ರಿಂದ ರಾತ್ರಿ 8ರ ನಡುವೆ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ತೆರೆಯಲು ಅವಲಾಶ ಕಲ್ಪಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಎಲ್ಲಾ ಶಾಲೆಗಳು (School), ಕೋಚಿಂಗ್, ಅಕಾಡೆಮಿಗಳು ಮುಚ್ಚಲ್ಪಡುತ್ತವೆ. ಎಲ್ಲಾ ಅಂತರ್-ರಾಜ್ಯ ಬಸ್ಸುಗಳ ಸಂಚಾರಕ್ಕೂ ನಿಷೇಧ ಹೇರಲಾಗಿದೆ. ಖಾಸಗಿ ವಾಹನಗಳು , ಕ್ಯಾಬ್‌ಗಳು ತುರ್ತು ಅಥವಾ ಅಗತ್ಯ ಸೇವೆಗಳಿಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ವೈಯಕ್ತಿಕ ಸಂಚಾರಕ್ಕೆ ಅವಕಾಶ ನೀಡಲಾಗುವುದು. 30% ಸಾಮರ್ಥ್ಯದೊಂದಿಗೆ ಮಾಲ್‌ಗಳನ್ನು (Mall) ಬೆಳಿಗ್ಗೆ 11 ರಿಂದ ಸಂಜೆ 6 ರವರೆಗೆ ತೆರೆಯಲು ಅವಕಾಶವಿದೆ. ಪ್ರೇಕ್ಷಕರಿಲ್ಲದ ಆಟಗಾರರಿಗೆ ಕ್ರೀಡಾಂಗಣದಲ್ಲಿ ಆಡಲು ಅವಕಾಶವಿರುತ್ತದೆ. ಜಿಮ್‌ಗಳು, ಬ್ಯೂಟಿ ಪಾರ್ಲರ್‌ಗಳು, ಸಲೂನ್‌ಗಳು (Saloon)  ಮತ್ತು ಸಿನೆಮಾ ಹಾಲ್‌ಗಳಿಗೆ ಅವಕಾಶವಿಲ್ಲ. 


ಇದನ್ನೂ ಓದಿ : Corona 3rd Wave : ಕೊರೋನಾ 3ನೇ ಅಲೆಯಲ್ಲಿ ಮಕ್ಕಳು ಸೇಫ್..!​? 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.