BJP : ತೆಲಂಗಾಣ ಮಾಜಿ ಸಚಿವ ಬಿಜೆಪಿಗೆ ಸೇರ್ಪಡೆ!

ತೆಲಂಗಾಣ ರಾಷ್ಟ್ರ ಸಮಿತಿಗೆ ರಾಜೀನಾಮೆ ನೀಡಿದ ಕೆಲ ದಿನಗಳ ನಂತರ

Last Updated : Jun 14, 2021, 03:24 PM IST
  • ತೆಲಂಗಾಣದ ಮಾಜಿ ಸಚಿವ ಈಟೆಲಾ ರಾಜೇಂದರ್
  • ಈಟೆಲಾ ರಾಜೇಂದರ್ ಇಂದು ಬಿಜೆಪಿಗೆ ಸೇರ್ಪಡೆ
  • ತೆಲಂಗಾಣ ರಾಷ್ಟ್ರ ಸಮಿತಿಗೆ ರಾಜೀನಾಮೆ ನೀಡಿದ ಕೆಲ ದಿನಗಳ ನಂತರ
BJP : ತೆಲಂಗಾಣ ಮಾಜಿ ಸಚಿವ ಬಿಜೆಪಿಗೆ ಸೇರ್ಪಡೆ! title=

ಹೈದರಾಬಾದ್ : ತೆಲಂಗಾಣದ ಮಾಜಿ ಸಚಿವ ಈಟೆಲಾ ರಾಜೇಂದರ್ ಇಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಮೇದಕ್ ಜಿಲ್ಲೆಯಲ್ಲಿ ಭೂ ಕಬಳಿಕೆ ಆರೋಪದ ಮೇಲೆ ಮೇ 1 ರಂದು ರಾಜೇಂದರ್(Etela Rajender) ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡಿ ಕೈಬಿಡಲಾಯಿತು.

ಇದನ್ನೂ ಓದಿ : Tecno Spark 7T- 6,000mAh ಬ್ಯಾಟರಿ ಸಾಮರ್ಥ್ಯದ ಅಗ್ಗದ ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ

ತೆಲಂಗಾಣ ರಾಷ್ಟ್ರ ಸಮಿತಿ (TRS) ಗೆ ರಾಜೀನಾಮೆ ನೀಡಿದ ಕೆಲ ದಿನಗಳ ನಂತರ ತೆಲಂಗಾಣದ ಮಾಜಿ ಆರೋಗ್ಯ ಸಚಿವ ಎಟೆಲಾ ರಾಜೇಂದರ್ ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೋಮವಾರ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಜಿ ಕಿಶನ್ ರೆಡ್ಡಿ ಅವರ ಸಮ್ಮುಖದಲ್ಲಿ ಸೇರಿಕೊಂಡಿದ್ದಾರೆ.

ಇದನ್ನೂ ಓದಿ : Mobile Hang: ಈ ಅಪ್ಲಿಕೇಶನ್‌ಗಳಿಂದಾಗಿ ನಿಮ್ಮ ಮೊಬೈಲ್ ಕೂಡ ಸ್ಲೋ ಆಗಬಹುದು

ಪಕ್ಷದ ಸೇರ್ಪಡೆ ಸಮಾರಂಭದ ವೇಳೆ ಸಂಸದ ಧರ್ಮಪುರಿ ಅರವಿಂದ್(Dharmapuri Aravind), ಸಂಸದ ಸೋಯಂ ಬಾಪುರಾವ್, ಶಾಸಕ ಎಂ.ರಘುನಂದನ್ ರಾವ್, ಜಿ ಪ್ರೀಮಂದರ್ ರೆಡ್ಡಿ ಸೇರಿದಂತೆ ತೆಲಂಗಾಣ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ : Corona 3rd Wave : ಕೊರೋನಾ 3ನೇ ಅಲೆಯಲ್ಲಿ ಮಕ್ಕಳು ಸೇಫ್..!​? 

ಕೇಸರಿ ಪಕ್ಷಕ್ಕೆ ಸೇರುವ ಎರಡು ದಿನಗಳ ಮೊದಲು ರಾಜೇಂದರ್ ತೆಲಂಗಾಣ(Telangana) ರಾಜ್ಯ ವಿಧಾನಸಭೆಯಲ್ಲಿ ತಮ್ಮ ಶಾಸಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News