ನವದೆಹಲಿ: ಕರೋನಾವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶದಲ್ಲಿ ಜಾರಿಗೆ ತರಲಾದ ಲಾಕ್‌ಡೌನ್ (Lockdown)‌   ಪರಿಣಾಮ ಇದೀಗ ಕಾಣಲಾರಂಭಿಸಿದೆ. ಕಂಪನಿಗಳು ನಷ್ಟವನ್ನು ಸರಿದೂಗಿಸಲು ತಮ್ಮ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿವೆ ಅಥವಾ ನೌಕರರ ವೇತನವನ್ನು ಕಡಿಮೆ ಮಾಡುತ್ತಿವೆ.


COMMERCIAL BREAK
SCROLL TO CONTINUE READING

 ಕರೋನವೈರಸ್ (Coronavirus)  ಸಾಂಕ್ರಾಮಿಕ ರೋಗದಿಂದಾಗಿ ದೇಶದ ಮೂರನೇ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿ  ಟಿವಿಎಸ್ ಮೋಟಾರ್ ಕಂಪನಿ ತನ್ನ ನೌಕರರ ವೇತನವನ್ನು ಆರು ತಿಂಗಳವರೆಗೆ 20 ಪ್ರತಿಶತದಷ್ಟು ಕಡಿತಗೊಳಿಸಿದೆ. 


ಆರಂಭಿಕ ಹಂತದ ಉದ್ಯೋಗಿಗಳನ್ನು ಹೊರತುಪಡಿಸಿ ಈ ವರ್ಷ ಮೇ ನಿಂದ ಅಕ್ಟೋಬರ್ ವರೆಗೆ ಕಾರ್ಯನಿರ್ವಾಹಕ ಮಟ್ಟದಲ್ಲಿ ಕೆಲಸ ಮಾಡುತ್ತಿರುವವರ ವೇತನವನ್ನು ಕಡಿತಗೊಳಿಸಲು ಕಂಪನಿ ನಿರ್ಧರಿಸಿದೆ.


ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಂಪನಿಯು ಮೇ ನಿಂದ ಅಕ್ಟೋಬರ್ ವರೆಗೆ ಆರು ತಿಂಗಳವರೆಗೆ ವಿವಿಧ ಹಂತಗಳಲ್ಲಿ ವೇತನವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿದೆ ಎಂದು ಟಿವಿಎಸ್ ಮೋಟಾರ್ ಕಂಪನಿಯ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ. ಆದರೆ ಕಾರ್ಮಿಕ ಮಟ್ಟದಲ್ಲಿ ಕೆಲಸ ಮಾಡುವವರ ವೇತನದಲ್ಲಿ ಕಡಿತವಿಲ್ಲ ಎಂದು ಸ್ಪಷ್ಟಪಡಿಸಿದೆ.


ಹಿರಿಯ ಕಾರ್ಯನಿರ್ವಾಹಕ ಮಟ್ಟದಲ್ಲಿ ಕೆಲಸ ಮಾಡುವವರ 15 ರಿಂದ 20 ಪ್ರತಿಶತದಷ್ಟು ವೇತನ ಕಡಿತವಾಗಿದ್ದರೆ ಸಣ್ಣ ಕಾರ್ಯನಿರ್ವಾಹಕ ಮಟ್ಟದಲ್ಲಿ ಕಾರ್ಯನಿರ್ವಹಿಸುವವರ ವೇತನದಲ್ಲಿ 5 ಪ್ರತಿಶತದಷ್ಟು ವೇತನವನ್ನು ಕಡಿಮೆ ಮಾಡಲಾಗುತ್ತದೆ.


ಮೇ 6 ರಂದು ಕಂಪನಿಯು ದೇಶಾದ್ಯಂತ ತನ್ನ ಎಲ್ಲಾ ಸ್ಥಾವರಗಳಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಕಂಪನಿಯು ನಾಲ್ಕು ಪ್ಲಾಂಟ್ ಗಳನ್ನು ಹೊಂದಿದೆ. ಅದರಲ್ಲಿ ಮೂರು ತಮಿಳುನಾಡಿನ ಹೊಸೂರು, ಕರ್ನಾಟಕದ ಮೈಸೂರು ಮತ್ತು ಹಿಮಾಚಲ ಪ್ರದೇಶದ ನಲಗಢದಲ್ಲಿದ್ದಾರೆ ಮತ್ತು ಒಂದು ಇಂಡೋನೇಷ್ಯಾದ ಕಾರ್ವಾಂಗ್‌ನಲ್ಲಿದ್ದಾರೆ.