ನವದೆಹಲಿ: ಕಾಂಗ್ರೆಸ್‌ ಯುವ ನಾಯಕ ರಾಹುಲ್‌ ಗಾಂಧಿಯವರನ್ನು ಕೂಲ್‌ ಕ್ಯಾಪ್ಟನ್‌ ಎಂ.ಎಸ್.ಧೋನಿಗೆ ಹೋಲಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವ್ಯಂಗ್ಯವಾಡಿದ್ದಾರೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ನನಗೆ ತಿಳಿದಿರುವಂತೆ ಕ್ರಿಕೆಟ್‍ನಲ್ಲಿ ಈಗಲೂ ಅಭಿಮಾನಿಗಳು ಧೋನಿಯನ್ನು ಉತ್ತಮ ಫಿನಿಶರ್ ಎನ್ನುತ್ತಾರೆ. ಕ್ರಿಕೆಟ್‍ನಲ್ಲಿ ಧೋನಿ ಅತ್ಯುತ್ತಮ ಫಿನಿಶರ್ ಹೇಗೋ.. ಅದೇ ರೀತಿ ರಾಜಕಾರಣದಲ್ಲಿ ರಾಹುಲ್ ಗಾಂಧಿ ಕೂಡ ಓರ್ವ ಉತ್ತಮ ಫಿನಿಶರ್ ಅಂತಾ ಟೀಕಿಸಿದ್ದಾರೆ.  


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಮತ್ತು ಭ್ರಷ್ಟಾಚಾರಕ್ಕೆ ಅವಿನಾಭಾವ ಸಂಬಂಧವಿದೆ. ಬಹುತೇಕ ಕಾಂಗ್ರೆಸ್ ಸರ್ಕಾರಗಳು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿದ್ದವು. ಆದರೆ ಪ್ರಧಾನಿ ಮೋದಿಯವರ ಸರ್ಕಾರದ ಯಾವುದೇ ಸಚಿವರ ವಿರುದ್ಧ ಅಂತಹ ಆರೋಪ ಮಾಡಿಲ್ಲ. ಒಂದು ಕಾಲದಲ್ಲಿ ಭಾರತದಾದ್ಯಂತ ಕಾಂಗ್ರೆಸ್ ಪ್ರಾಬಲ್ಯ ಹೊಂದಿತ್ತು, ಆದರೆ ಈಗ ಅದು ದೇಶದಲ್ಲಿ ಎರಡು ಅಥವಾ ಮೂರು ಸಣ್ಣ ರಾಜ್ಯಗಳಲ್ಲಿ ಮಾತ್ರ ಆಡಳಿತ ನಡೆಸುತ್ತಿದೆ ಎಂದು ಕುಟುಕಿದರು.


ಇದನ್ನೂ ಓದಿ: ಕಾಂಗ್ರೆಸ್‌ನ ತೆರಿಗೆ ಹೋರಾಟಕ್ಕೆ ನಿರ್ಮಲಾ ಸೀತಾರಾಮನ್ ಟಾಂಗ್


ʼಒಂದು ರಾಷ್ಟ್ರ, ಒಂದು ಚುನಾವಣೆʼ ಪ್ರಸ್ತಾವನೆಗೆ ಸಂಪೂರ್ಣ ಬೆಂಬಲ ನೀಡಿರುವ ರಾಜನಾಥ್‌ ಸಿಂಗ್‌, ʼಇದು ದೇಶದ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ. ಏಕಕಾಲಿಕ ಚುನಾವಣೆಗಳು ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ́ಒಂದು ರಾಷ್ಟ್ರ, ಒಂದು ಚುನಾವಣೆ'ಗೆ ಜನರ ಬೆಂಬಲ ಸಿಗುತ್ತದೆ, ಆದರೆ ಕಾಂಗ್ರೆಸ್ ಅದನ್ನು ವಿರೋಧಿಸುತ್ತದೆʼ ಅಂತಾ ಕಿಡಿಕಾರಿದರು. 


ಭಾರತದ ಆರ್ಥಿಕತೆ ಬಲಪಡಿಸಲು ಸರ್ಕಾರ ಒತ್ತು ನೀಡಯತ್ತಿದೆ. 2027ರ ವೇಳೆಗೆ ಭಾರತವು ವಿಶ್ವದ ಅಗ್ರ ೩ ಶ್ರೀಮಂತ ದೇಶಗಳ ಆರ್ಥಿಕತೆಗಳಲ್ಲಿ ಸ್ಥಾನ ಪಡೆಯಲಿದೆ ಎಂದು ಕೆಲವು ದೊಡ್ಡ ಹಣಕಾಸು ಸಂಸ್ಥೆಗಳು ಭವಿಷ್ಯ ನುಡಿಯುತ್ತಿವೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಈಗಾಗಲೇ ದೇಶವನ್ನು ಉನ್ನತ ಮಟ್ಟಕ್ಕೆ ಏರಲು ಸಹಾಯ ಮಾಡಿದೆ ಎಂದು ಹೇಳಿದರು. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ದೇಶದ ಜನರಿಗೆ ಹಲವಾರು ಭರವಸೆಗಳನ್ನು ನೀಡಿತ್ತು. ಅವುಗಳನ್ನು ಭಾಗಶಃ ಈಡೇರಿಸಿದ್ದರೆ, ಭಾರತವು ಬಹಳ ಹಿಂದೆಯೇ ಪ್ರಬಲ ದೇಶವಾಗುತ್ತಿತ್ತು. ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ೧೦ ವರ್ಷಗಳಲ್ಲಿ ಈಡೇರಿಸಿದೆ ಎಂದು ಹೇಳಿದರು. 


ಯುಪಿಎ ಆಡಳಿತಾವಧಿಯಲ್ಲಿ ನಡೆದ ಭಯೋತ್ಪಾದನಾ ದಾಳಿಯ ಕುರಿತು ಮಾತನಾಡಿದ ರಾಜನಾಥ್‌ ಸಿಂಗ್, ಭಾರತವು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ. ಆದರೆ‌ ಯಾವುದೇ ರೀತಿಯ ಪ್ರಚೋದನೆ ನೀಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಅಗತ್ಯಬಿದ್ದರೆ ಗಡಿ ದಾಟುವ ಮೂಲಕವೂ ಭಾರತ ಕಠಿಣ ಕ್ರಮ ಕೈಗೊಳ್ಳಬಹುದು. ಕಳೆದ ೧೦ ವರ್ಷಗಳಲ್ಲಿ ನಮ್ಮ ದೇಶವು ಈಗಾಗಲೇ ಇದನ್ನು ಸಾಬೀತುಪಡಿಸಿದೆ ಎಂದು ಖಡಕ್‌ ಎಚ್ಚರಿಕೆ ನೀಡಿದರು. 


ಇದನ್ನೂ ಓದಿ: ರಾಜ್ಯಕ್ಕೆ ಆಗಿರುವ ಅನ್ಯಾಯ ಒಪ್ಪಿಕೊಂಡ ನಿರ್ಮಲಾ ಸೀತಾರಾಮನ್..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ