ನವದೆಹಲಿ: 2023ರ ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳ ಬಾಕಿ ಇವೆ. ಹೊಸ ವರ್ಷಕ್ಕೆ ರಜಾದಿನಗಳ ಮಜಾ ಅನುಭವಿಸಲು ಪ್ಲಾನ್ ಮಾಡುವ ಸಮಯ ಇದು. ವರ್ಷವಿಡೀ ನೀವು ದೀರ್ಘ ರಜಾದಿನಗಳನ್ನು ತೆಗೆದುಕೊಳ್ಳಬಹುದು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ. 2023ರ ದೀರ್ಘ ವಾರಾಂತ್ಯಗಳ ಪಟ್ಟಿಯನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದರಿಂದ ನೀವು ಹೊಸ ವರ್ಷದಲ್ಲಿ ರಜಾದಿನಗಳ ಗರಿಷ್ಠ ಪ್ರಯೋಜನ ಪಡೆದುಕೊಳ್ಳಬಹುದು ಮತ್ತು ಹೆಚ್ಚು ಆನಂದಿಸಬಹುದು.


COMMERCIAL BREAK
SCROLL TO CONTINUE READING

ಡಿಸೆಂಬರ್ 31, 2022ರ ಶನಿವಾರ ಹೊಸ ವರ್ಷದ ಮುನ್ನಾದಿನದ ಕೊನೆಯ ವಾರಾಂತ್ಯವಾಗಿರುತ್ತದೆ.


ಜನವರಿ 2023


ಜನವರಿ 1ರ ಭಾನುವಾರ: ಹೊಸ ವರ್ಷದ ದಿನ


ನೀವು 30 ಡಿಸೆಂಬರ್ 2022ರಂದು 1 ದಿನ ಮತ್ತು ಶುಕ್ರವಾರ ಮತ್ತು ಜನವರಿ 2ರಂದು ರಜೆಯನ್ನು ತೆಗೆದುಕೊಂಡರೆ 5 ದಿನಗಳ ವಾರಾಂತ್ಯವನ್ನು ಆನಂದಿಸಬಹುದು.  


ಜನವರಿ 14ರ ಶನಿವಾರ: ಲೋಹ್ರಿ, ಮಕರ ಸಂಕ್ರಾಂತಿ


ಜನವರಿ 15ರ ಭಾನುವಾರ: ಪೊಂಗಲ್


ನೀವು 13ನೇ (ಶುಕ್ರವಾರ) ಅಥವಾ 16ನೇ ಜನವರಿ (ಸೋಮವಾರ) ರಜೆ ತೆಗೆದುಕೊಂಡರೆ 4 ದಿನಗಳ ರಜೆ ಪಡೆಯಬಹುದು.


ಜನವರಿ 26ರ ಗುರುವಾರ: ಗಣರಾಜ್ಯೋತ್ಸವ


ಜನವರಿ 28ರ ಶನಿವಾರ


ಜನವರಿ 29ರ ಭಾನುವಾರ


ಜನವರಿ 27 ಶುಕ್ರವಾರ ರಜೆ ಹಾಕಿದರೆ ನಿಮಗೆ ಒಟ್ಟು 4 ದಿನ ರಜೆ ಸಿಗುತ್ತದೆ.


ಫೆಬ್ರವರಿ 2023


ಫೆಬ್ರವರಿ 18ರ ಶನಿವಾರ: ಮಹಾಶಿವರಾತ್ರಿ


ಫೆಬ್ರವರಿ 19ರ ಭಾನುವಾರ


ನೀವು ಫೆಬ್ರವರಿ 17ರಂದು (ಶುಕ್ರವಾರ) 1 ದಿನ ರಜೆ ತೆಗೆದುಕೊಂಡರೆ ಫೆಬ್ರವರಿಯಲ್ಲಿ 3 ದಿನಗಳ ರಜೆಯನ್ನು ಆನಂದಿಸಬಹುದು.


ಮಾರ್ಚ್ 2023


ಮಾರ್ಚ್ 8ರ ಬುಧವಾರ - ಹೋಳಿ


ಮಾರ್ಚ್ 11ರ ಶನಿವಾರ


ಮಾರ್ಚ್ 12ರ ಭಾನುವಾರ


ಮಾರ್ಚ್ 9 (ಗುರುವಾರ) ಮತ್ತು ಮಾರ್ಚ್ 10 (ಶುಕ್ರವಾರ) ರಜೆ ತೆಗೆದುಕೊಂಡರೆ 5 ದಿನ ರಜೆ ಪಡೆಯಬಹುದು. 


ಏಪ್ರಿಲ್ 2023


ಏಪ್ರಿಲ್ 4ರ ಮಂಗಳವಾರ - ಮಹಾವೀರ ಜಯಂತಿ


ಏಪ್ರಿಲ್ 7ರ ಶುಕ್ರವಾರ - ಶುಭ ಶುಕ್ರವಾರ


ಏಪ್ರಿಲ್ 8ರ ಶನಿವಾರ


ಏಪ್ರಿಲ್ 9ರ ಭಾನುವಾರ


6 ದಿನಗಳ ಸುದೀರ್ಘ ರಜೆಗಾಗಿ ನೀವು ಏಪ್ರಿಲ್ 5 ಬುಧವಾರ ಮತ್ತು 6ನೇ ಏಪ್ರಿಲ್ ಗುರುವಾರ ರಜೆ ತೆಗೆದುಕೊಳ್ಳಬೇಕಾಗುತ್ತದೆ.


ಮೇ 2023


ಮೇ 5ರ ಶುಕ್ರವಾರ - ಬುದ್ಧ ಪೂರ್ಣಿಮಾ


ಮೇ 6ರ ಶನಿವಾರ


ಮೇ 7ರ ಭಾನುವಾರ


ಜೂನ್-ಜುಲೈ 2023


ಜೂನ್ 17ರ ಶನಿವಾರ


ಜೂನ್ 18ರ ಭಾನುವಾರ


ಜೂನ್ 20ರ ಮಂಗಳವಾರ: ರಥ ಯಾತ್ರೆ (ನಿರ್ಬಂಧಿತ ರಜೆ ಇರಬಹುದು)


ಒಟ್ಟ 4 ದಿನಗಳ ರಜೆಗಾಗಿ ಜೂನ್ 19ರಂದು ಸೋಮವಾರ ರಜೆ ತೆಗೆದುಕೊಳ್ಳಬೇಕು.


ಜೂನ್ 29ರ ಗುರುವಾರ: ಬಕ್ರೀದ್ ಈದ್


ಜುಲೈ 1ರ ಶನಿವಾರ


ಜುಲೈ 2ರ ಭಾನುವಾರ


ಶುಕ್ರವಾರ, ಜೂನ್ 30ರಂದು ನಿಮ್ಮ ರಜೆ ತೆಗೆದುಕೊಳ್ಳಬೇಕು.


ಇದನ್ನೂ ಓದಿ: Viral Video : ಮಕ್ಕಳೊಂದಿಗೆ ಟೀಚರ್ ಡ್ಯಾನ್ಸ್! ಸೊಂಟದ ವಿಷ್ಯಾ ಬ್ಯಾಡ ಓ ಶಿಷ್ಯಾ ಎಂದ ನೆಟ್ಟಿಜನ್‌!


ಆಗಸ್ಟ್ 2023


ಆಗಸ್ಟ್ 12ರ ಶನಿವಾರ


ಆಗಸ್ಟ್ 13ರ ಭಾನುವಾರ


ಆಗಸ್ಟ್ 15ರ ಮಂಗಳವಾರ - ಸ್ವಾತಂತ್ರ್ಯ ದಿನ


ಆಗಸ್ಟ್ 16ರ ಬುಧವಾರ: ಪಾರ್ಸಿ ಹೊಸ ವರ್ಷ (ನಿರ್ಬಂಧಿತ ರಜೆ)


ಆಗಸ್ಟ್ 14ರ ಸೋಮವಾರ ನೀವು 5 ದಿನಗಳ ರಜೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.


ಆಗಸ್ಟ್ 26ರ ಶನಿವಾರ


ಆಗಸ್ಟ್ 27ರ ಭಾನುವಾರ


ಆಗಸ್ಟ್ 29ರ ಮಂಗಳವಾರ: ಓಣಂ (ನಿರ್ಬಂಧಿತ ರಜೆ)


ಆಗಸ್ಟ್ 30ರ ಬುಧವಾರ - ರಕ್ಷಾ ಬಂಧನ


5 ದಿನಗಳ ರಜೆಗಾಗಿ ನೀವು ಆಗಸ್ಟ್ 28ರ ಸೋಮವಾರ ರಜೆ ತೆಗೆದುಕೊಳ್ಳಬಹುದು.


ಸೆಪ್ಟೆಂಬರ್ 2023


ಸೆಪ್ಟೆಂಬರ್ 7ರ ಗುರುವಾರ - ಜನ್ಮಾಷ್ಟಮಿ (ನಿರ್ಬಂಧಿತ ರಜೆ)


ಸೆಪ್ಟೆಂಬರ್ 9ರ ಶನಿವಾರ


ಸೆಪ್ಟೆಂಬರ್ 10ರ ಭಾನುವಾರ


ಸೆಪ್ಟೆಂಬರ್ 8ರಂದು ಸೋಮವಾರ ರಜೆ ತೆಗೆದುಕೊಳ್ಳುವ ಮೂಲಕ ನೀವು 4 ದಿನಗಳ ಸುದೀರ್ಘ ರಜೆಗೆ ಹೋಗಬಹುದು.


ಸೆಪ್ಟೆಂಬರ್ 16ರ ಶನಿವಾರ


ಸೆಪ್ಟೆಂಬರ್ 17ರ ಭಾನುವಾರ


ಸೆಪ್ಟೆಂಬರ್ 19ರ ಮಂಗಳವಾರ - ಗಣೇಶ ಚತುರ್ಥಿ (ನಿರ್ಬಂಧಿತ ರಜೆ)


ಸೆಪ್ಟೆಂಬರ್ 18ರಂದು ಸೋಮವಾರ ರಜೆ ತೆಗೆದುಕೊಳ್ಳುವ ಮೂಲಕ ನೀವು 4 ದಿನಗಳ ರಜೆ ತೆಗೆದುಕೊಳ್ಳಬಹುದು.


ಅಕ್ಟೋಬರ್ 2023


30 ಸೆಪ್ಟೆಂಬರ್, ಶನಿವಾರ    


ಅಕ್ಟೋಬರ್ 1ರ ಭಾನುವಾರ


ಅಕ್ಟೋಬರ್ 2ರ ಸೋಮವಾರ - ಗಾಂಧಿ ಜಯಂತಿ


ಅಕ್ಟೋಬರ್ 21ರ ಶನಿವಾರ


ಅಕ್ಟೋಬರ್ 22ರ ಭಾನುವಾರ


ಅಕ್ಟೋಬರ್ 24ರ ಮಂಗಳವಾರ - ದಸರಾ


ಸೋಮವಾರ ಅಕ್ಟೋಬರ್ 23ರಂದು ರಜೆಯನ್ನು ತೆಗೆದುಕೊಳ್ಳುವ ಮೂಲಕ ನೀವು 4 ದಿನಗಳ ರಜೆಯನ್ನು ತೆಗೆದುಕೊಳ್ಳಬಹುದು.


ನವೆಂಬರ್ 2023


ನವೆಂಬರ್ 11ರ ಶನಿವಾರ


ನವೆಂಬರ್ 12ರ ಭಾನುವಾರ - ದೀಪಾವಳಿ


ನವೆಂಬರ್ 13ರ ಸೋಮವಾರ - ಗೋವರ್ಧನ ಪೂಜೆ (ನಿರ್ಬಂಧಿತ ರಜೆ)


 25 ನವೆಂಬರ್, ಶನಿವಾರ


ನವೆಂಬರ್ 26ರ ಭಾನುವಾರ


ನವೆಂಬರ್ 27ರ ಸೋಮವಾರ: ಗುರುನಾನಕ್ ಜಯಂತಿ


ಇದನ್ನೂ ಓದಿ: ವರದಕ್ಷಿಣೆಯಾಗಿ ಬೈಕ್ ಕೊಡದಿದ್ದಕ್ಕೆ ಮದುವೆ ಮಂಟಪದಿಂದಲೇ ಕಾಲ್ಕಿತ್ತ ವರ...!


ಡಿಸೆಂಬರ್ 2023


ಡಿಸೆಂಬರ್ 23ರ ಶನಿವಾರ


ಡಿಸೆಂಬರ್ 24ರ ಭಾನುವಾರ


ಡಿಸೆಂಬರ್ 25ರ ಸೋಮವಾರ - ಕ್ರಿಸ್ಮಸ್


22ನೇ ಡಿಸೆಂಬರ್ ಶುಕ್ರವಾರದಂದು ನೀವು ರಜೆಯ ದೀರ್ಘ ವಾರಾಂತ್ಯವನ್ನು ಆನಂದಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.