LPG cylinder price: ಸಿಲಿಂಡರ್ ದರ ಬದಲಾವಣೆ
ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗಳ (ಎಲ್ಪಿಜಿ ಗ್ಯಾಸ್ ಸಿಲಿಂಡರ್) ಬೆಲೆಗಳನ್ನು ಹೆಚ್ಚಿಸಿಲ್ಲ.
ಎಲ್ಪಿಜಿ ಸಿಲಿಂಡರ್ ದರಗಳನ್ನು ಸೆಪ್ಟೆಂಬರ್‌ನಲ್ಲಿ ಮತ್ತೆ ಪರಿಶೀಲಿಸಲಾಗಿದೆ. ದೇಶದ ತೈಲ ಮಾರುಕಟ್ಟೆ ಕಂಪನಿಗಳು (ಎಚ್‌ಪಿಸಿಎಲ್, ಬಿಪಿಸಿಎಲ್, ಐಒಸಿ) ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್‌ಗಳ (LPG cylinder) ಬೆಲೆಗಳನ್ನು ಹೆಚ್ಚಿಸಿಲ್ಲ. ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ (LPG) ಸಿಲಿಂಡರ್ ಬೆಲೆ 594 ರೂ. ಆಗಿದೆ.
ಕೋಲ್ಕತ್ತಾದಲ್ಲಿ ಬೆಲೆ ಏರಿಕೆ:
ಆದರೆ ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪ್ರತಿ ಸಿಲಿಂಡರ್‌ಗೆ 50 ಪೈಸೆ ಹೆಚ್ಚಾಗಿದೆ. ಅದೇ ಸಮಯದಲ್ಲಿ 19 ಕೆಜಿ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಲಾಗಿದೆ. ಇದನ್ನು 2 ರೂಪಾಯಿಗೆ ಇಳಿಸಲಾಗಿದೆ.
ಜುಲೈನಲ್ಲಿ ಹೆಚ್ಚಳಗೊಂಡಿದ್ದ ಬೆಲೆ:
ದೆಹಲಿಯಲ್ಲಿ ಜೂನ್ ಮತ್ತು ಜುಲೈನಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಅದೇ ಸಮಯದಲ್ಲಿ ಇದು ಮೇ ತಿಂಗಳಲ್ಲಿ 162.50 ರೂ. ಅಗ್ಗವಾಗಿತ್ತು.
ಹೊಸ ದರ:
ಐಒಸಿ ವೆಬ್‌ಸೈಟ್ ಪ್ರಕಾರ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 594 ರೂ. ಮುಂಬೈನಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಕೂಡ 594 ರೂ.
ಚೆನ್ನೈನಲ್ಲಿ ಬೆಲೆ:
ಆದರೆ ಚೆನ್ನೈನಲ್ಲಿ ಇದರ ಬೆಲೆ ಪ್ರತಿ ಸಿಲಿಂಡರ್‌ಗೆ 50 ಪೈಸೆ ಕಡಿಮೆಯಾಗಿದೆ ಮತ್ತು ಅದು ಈಗ 610 ರೂ.ಗೆ ಇಳಿದಿದೆ. ಕೋಲ್ಕತ್ತಾದ ಎಲ್‌ಪಿಜಿ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್‌ಗೆ 50 ಪೈಸೆ ಹೆಚ್ಚಾಗಿದೆ.
19 ಕೆಜಿ ಸಿಲಿಂಡರ್:
ಐಒಸಿ ವೆಬ್‌ಸೈಟ್ ಪ್ರಕಾರ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ 2 ರೂಪಾಯಿಯಷ್ಟು ಅಗ್ಗವಾಗಿದೆ. ಈಗ ಇದು 1133 ರೂ.ಗಳಿಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ ಇದು 1198.50 ರೂ.ಗಳಿಂದ 1196.50 ರೂ.ಗೆ ಇಳಿದಿದೆ. ಮುಂಬೈನಲ್ಲಿ ಇದರ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 1091 ರೂ.ನಿಂದ 1089 ರೂ.ಗೆ ಇಳಿಸಲಾಗಿದೆ. ಆದರೆ ಚೆನ್ನೈನಲ್ಲಿ 19 ಕೆಜಿ ಎಲ್ಪಿಜಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 1253 ರೂ.ನಿಂದ 1250 ರೂ.ಗೆ ಇಳಿಸಲಾಗಿದೆ.