ನವದೆಹಲಿ:  ನೂತನ ಆರ್ಥಿಕ ವರ್ಷದ ಮೊದಲ ದಿನದಂದು ನಿಮಗೆ ಒಳ್ಳೆಯ ಸುದ್ದಿ ಬಂದಿದೆ. ನಿಮ್ಮ ಎಲ್‌ಪಿಜಿ (LPG) ಬೆಲೆಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಅನಿಲದ ಬೆಲೆ ಅಂದರೆ ಎಲ್‌ಪಿಜಿ ಸಿಲಿಂಡರ್ ಅನ್ನು ದೇಶದ ರಾಜಧಾನಿ ದೆಹಲಿಯಲ್ಲಿ 61 ರೂ. ಇಳಿಸಲಾಗಿದೆ. ಅದೇ ಸಮಯದಲ್ಲಿ, ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಕೋಲ್ಕತ್ತಾದಲ್ಲಿ 65 ರೂ., ಮುಂಬೈನಲ್ಲಿ 62 ರೂಪಾಯಿ ಮತ್ತು ಚೆನ್ನೈನಲ್ಲಿ 64.40 ರೂಪಾಯಿ ಕಡಿಮೆಯಾಗಿದೆ.


ಹೊಸ ಹಣಕಾಸು ವರ್ಷ ಪ್ರಾರಂಭ: ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರಲಿದೆ ಈ ನೂತನ ನಿಯಮಗಳು


COMMERCIAL BREAK
SCROLL TO CONTINUE READING

ದೆಹಲಿ, ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿ ಸಬ್ಸಿಡಿ ಇಲ್ಲದೆ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಕ್ರಮವಾಗಿ 744, 774, 714.50 ಮತ್ತು 761.50 ರೂ.ಗಳಿಗೆ ಇಳಿದಿದೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ತಜ್ಞರು ಹೇಳುತ್ತಾರೆ. ಈ ಬೆಲೆ ಏಪ್ರಿಲ್ 1 ರಿಂದ ಅನ್ವಯಿಸುತ್ತದೆ.


LPG ಸಿಲಿಂಡರ್ ಸಿಗದಿದ್ದರೆ ಇಲ್ಲಿ ದೂರು ನೀಡಿ, ತಕ್ಷಣವೇ ಕ್ರಮ ಕೈಗೊಳ್ಳಲಿದೆ IOC


ಅದೇ ಸಮಯದಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ದೆಹಲಿ, ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ 1,285.50, 1,348.50, 1,234.50 ಮತ್ತು 1,402 ರೂ.ಗಳಿಗೆ ಇಳಿಸಲಾಗಿದೆ. ನಾಲ್ಕು ಮಹಾನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಕ್ರಮವಾಗಿ 96, 101.50 ರೂ., 96.50 ರೂ., 99.50 ರೂ.ಗೆ ಇಳಿಸಲಾಗಿದೆ.


ಇಂದಿನಿಂದ, ಪೈಪ್‌ಲೈನ್ ಮೂಲಕ ಪಡೆದ ಅನಿಲದ ಬೆಲೆಯೂ ಕಡಿಮೆಯಾಗುವ ನಿರೀಕ್ಷೆಯಿದೆ. ಏಪ್ರಿಲ್ 1 ರಿಂದ ನೈಸರ್ಗಿಕ ಅನಿಲ ಬೆಲೆಗಳಲ್ಲಿ 25-30 ಪ್ರತಿಶತದಷ್ಟು ನಿರೀಕ್ಷಿಸಲಾಗಿದೆ. ಸರ್ಕಾರ ಅದನ್ನು ಶೀಘ್ರದಲ್ಲೇ ಪ್ರಕಟಿಸಬಹುದು.