LPG ಬಳಕೆದಾರರಿಗೆ `ಬಿಗ್ ಶಾಕ್`..! 50 ರೂ. ಏರಿಕೆಯಾದ ಸಿಲಿಂಡರ್ ಬೆಲೆ!
ಐದು ತಿಂಗಳು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಸತತವಾಗಿ ಮೂರು ತಿಂಗಳು ದರ ಕಡಿತ ಆದ ಮೇಲೆ, ಜೂನ್ ಹಾಗೂ ಜುಲೈನಲ್ಲಿ ಎಲ್ ಪಿಜಿ ಸಿಲಿಂಡರ್ ದರ ಭಾರತದಲ್ಲಿ ಏರಿಕೆ
ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್ ಸೈಟ್ ನಲ್ಲಿನ ಅಪ್ ಡೇಟ್ ಪ್ರಕಾರ, ಎಲ್ಲ ಪ್ರಮುಖ ನಗರಗಳಲ್ಲಿ 14.2 ಕೆಜಿ ತೂಕದ ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆ ಆಗಿದೆ. ಐದು ತಿಂಗಳು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಸತತವಾಗಿ ಮೂರು ತಿಂಗಳು ದರ ಕಡಿತ ಆದ ಮೇಲೆ, ಜೂನ್ ಹಾಗೂ ಜುಲೈನಲ್ಲಿ ಎಲ್ ಪಿಜಿ ಸಿಲಿಂಡರ್ ದರ ಭಾರತದಲ್ಲಿ ಏರಿಕೆ ಆಗಿತ್ತು.
ಜುಲೈ ಆದ ನಂತರ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದ್ದರಿಂದ ಡಿಸೆಂಬರ್ ಆರಂಭದಿಂದ ಆ ಬಗ್ಗೆ ಘೋಷಣೆ ಕೂಡ ಮಾಡಿಲ್ಲ. ಎಲ್ ಪಿಜಿ(LPG) ಸಿಲಿಂಡರ್ 2020ರ ಡಿಸೆಂಬರ್ ತಿಂಗಳ ದರ ಹೀಗಿದೆ. ದೆಹಲಿ- 644 ರೂ., ಕೋಲ್ಕತ್ತಾ 670.5 ರೂ., ಮುಂಬೈ 644 ರೂ., ಚೆನ್ನೈ 660 ರೂ.
ರೈತರಿಗೆ ಬೆಂಬಲಿಸಿ ಪದ್ಮವಿಭೂಷಣ ತಿರಸ್ಕರಿಸಿದ್ದ ಪ್ರಕಾಶ್ ಬಾದಲ್ ಗೆ ಪ್ರಧಾನಿ ಮೋದಿ ಕರೆ
ಈ ದರವನ್ನು ಸರ್ಕಾರಿ ಸ್ವಾಮ್ಯದ ರೀಟೇಲ್ ದರವನ್ನು ಅಂತರರಾಷ್ಟ್ರೀಯ ಕಚ್ಚಾ ದರ ಮತ್ತು ಡಾಲರ್ ವಿರುದ್ಧ ರುಪಾಯಿ ದರದ ಆಧಾರದಲ್ಲಿ ನಿಗದಿ ಮಾಡಲಾಗುತ್ತದೆ. ಭಾರತದಲ್ಲಿ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ಗರಿಷ್ಠ ಹನ್ನೆರಡು ಸಿಲಿಂಡರ್ ಸಬ್ಸಿಡಿ ದರದಲ್ಲಿ ದೊರೆಯುತ್ತದೆ. ಆ ಹಂತದಲ್ಲಿ ಪೂರ್ತಿ ಹಣ ನೀಡಬೇಕು. ನಂತರದಲ್ಲಿ ಸಬ್ಸಿಡಿ ಹಣವನ್ನು ಖಾತೆದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ.
Amit shah: ಅನ್ನದಾತರ ಪ್ರತಿಭಟನೆ: ಸಮಸ್ಯೆ ಬಗೆಹರಿಯುವ ಮುನ್ಸೂಚನೆ ನೀಡಿದ ಅಮಿತ್ ಶಾ!