Amit shah: ಅನ್ನದಾತರ ಪ್ರತಿಭಟನೆ: ಸಮಸ್ಯೆ ಬಗೆಹರಿಯುವ ಮುನ್ಸೂಚನೆ ನೀಡಿದ ಅಮಿತ್ ಶಾ!

ಈ ಮಧ್ಯೆ ಇಂದು ಸಂಜೆ ಮಾತುಕತೆಗೆ ಬರುವಂತೆ ರೈತ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂದೇಶ

Last Updated : Dec 8, 2020, 04:17 PM IST
  • ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನು ವಿರೋಧಿಸಿ ದೇಶಾದ್ಯಂತ ಇಂದು ಭಾರತ್ ಬಂದ್‌ಗೆ ಕರೆ
  • ಈ ಮಧ್ಯೆ ಇಂದು ಸಂಜೆ ಮಾತುಕತೆಗೆ ಬರುವಂತೆ ರೈತ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂದೇಶ
  • ರೈತ ನಾಯಕ ರಾಕೇಶ್ ಟಿಕೈಟ್ 'ನನಗೊಂದು ಕರೆ ಬಂದಿದ್ದು, ಇಂದು ಸಂಜೆ ಏಳು ಗಂಟೆಗೆ ಅಮಿತ್ ಶಾ ನಮ್ಮನ್ನು ಭೇಟಿಯಾಗಲು ಹೇಳಿದ್ದಾರೆ
Amit shah: ಅನ್ನದಾತರ ಪ್ರತಿಭಟನೆ: ಸಮಸ್ಯೆ ಬಗೆಹರಿಯುವ ಮುನ್ಸೂಚನೆ ನೀಡಿದ ಅಮಿತ್ ಶಾ! title=

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನು ವಿರೋಧಿಸಿ ದೇಶಾದ್ಯಂತ ಇಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ನಾಲ್ಕು ಗಂಟೆಗಳ ಕಾಲ ನಡೆಯುವ ಈ ಬಂದ್‌ಗೆ ಒಟ್ಟು ಹದಿನೆಂಟು ರಾಜಕೀಯ ಪಕ್ಷಗಳು ಸೇರಿ ಅನೇಕ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.

ಈ ಮಧ್ಯೆ ಇಂದು ಸಂಜೆ ಮಾತುಕತೆಗೆ ಬರುವಂತೆ ರೈತ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit shah) ಸಂದೇಶ ರವಾನಿಸಿದ್ದು, ಸಮಸ್ಯೆ ಇತ್ಯರ್ಥವಾಗುವ ಲಕ್ಷಣಗಳು ಕಂಡುಬರುತ್ತಿವೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ- ಆಮ್ ಆದ್ಮಿ ಪಕ್ಷ ಆರೋಪ

ಹೀಗಿರುವಾಗಲೇ ರೈತ ನಾಯಕ ರಾಕೇಶ್ ಟಿಕೈಟ್ 'ನನಗೊಂದು ಕರೆ ಬಂದಿದ್ದು, ಇಂದು ಸಂಜೆ ಏಳು ಗಂಟೆಗೆ ಅಮಿತ್ ಶಾ ನಮ್ಮನ್ನು ಭೇಟಿಯಾಗಲು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

Bharat Bandh: ರೈತರನ್ನು ಬೆಂಬಲಿಸಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

ಡಿ.04 ರಂದು ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ ಸಭೆ ನಡೆದಿತ್ತು. ಅಲ್ಲದೇ ನಾಳೆ ಕೂಡ ಎರಡೂ ಬಣಗಳ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವುದಿದೆ.

ಭಾರತದ ಈ ಪ್ರಾಂತ್ಯದಲ್ಲಿ Petrol-Diesel ಇಲ್ಲದೆಯೇ ವಾಹನಗಳು ಓಡಾಡುತ್ತವಂತೆ... ಕಾರಣ ಇಲ್ಲಿದೆ

ಈ ಮಧ್ಯೆ ಅಮಿತ್ ಶಾ ಇಂದು(ಡಿ.08) ಸಂಜೆಯೇ ತುರ್ತು ಸಭೆ ಕರೆದಿದ್ದು, ಈ ಸಭೆಯಲ್ಲಿ ಭಾಗವಹಿಸುವುದಾಗಿ ರೈತ ಸಂಘಟನೆಗಳು ಘೋಷಿಸಿವೆ.

Trending News