ಸುಪ್ರೀಂ ತೀರ್ಪಿಗೂ ಮುನ್ನ, ಟ್ರೈಡೆಂಟ್ ಹೋಟೆಲ್‌ನಲ್ಲಿ ಅಜಿತ್ ಪವಾರ್, ಭೂಪೇಂದ್ರ ಯಾದವ್ ಭೇಟಿ
Maharashtra : ಮಾಹಿತಿಯ ಪ್ರಕಾರ, ಬೆಳಿಗ್ಗೆ ಅಜಿತ್ ಪವಾರ್ ತಮ್ಮ ಮನೆಯಿಂದ ಟ್ರೈಡೆಂಟ್ ಹೋಟೆಲ್‌ಗೆ ತೆರಳಿದರು. ಸ್ವಲ್ಪ ಸಮಯದ ನಂತರ, ಮಹಾರಾಷ್ಟ್ರದ ಬಿಜೆಪಿಯ ಉಸ್ತುವಾರಿ ಭೂಪೇಂದ್ರ ಯಾದವ್ ಅವರೊಂದಿಗೆ ಟ್ರೈಡೆಂಟ್ ಹೋಟೆಲ್‌ನಲ್ಲಿ ಉಪಾಹಾರ ಸೇವಿಸುತ್ತಿರುವ ಚಿತ್ರ ಹೊರಬಿದ್ದಿದೆ.
ನವದೆಹಲಿ/ಮುಂಬೈ: ಮಹಾರಾಷ್ಟ್ರ(Maharashtra)ದ ರಾಜಕೀಯದಲ್ಲಿ ಇಂದು ಬಹಳ ಮಹತ್ವದ ದಿನ. ರಾಜ್ಯ ಸರ್ಕಾರದ ಬಹುಮತ ಸಾಬೀತಿಗೆ ಸಮಯ ನಿಗದಿ ಕುರಿತು ಸುಪ್ರೀಂ ಕೋರ್ಟ್‌ನ(Supreme Court) ನಿರ್ಣಾಯಕ ತೀರ್ಪು ಹೊರಬೀಳುವ ಮೊದಲು ಎನ್‌ಸಿಪಿ(NCP) ಮುಖಂಡ ಮತ್ತು ರಾಜ್ಯ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಅವರು ಇಂದು ಬೆಳಿಗ್ಗೆ ಚರ್ಚ್‌ಗೇಟ್‌ನಲ್ಲಿರುವ ತಮ್ಮ ಮನೆಯಿಂದ ಹೊರಟು ಅಲ್ಲಿಂದ ಟ್ರೈಡೆಂಟ್ ಹೋಟೆಲ್‌ನ್ನು ತಲುಪಿದರು. ಈ ಹೋಟೆಲ್‌ನಲ್ಲಿ ಮಹಾರಾಷ್ಟ್ರದ ಬಿಜೆಪಿ ಉಸ್ತುವಾರಿ ಭೂಪೇಂದ್ರ ಯಾದವ್ ಅವರೊಂದಿಗೆ ಉಪಹಾರ ಸೇವಿಸುತ್ತಿರುವ ಫೋಟೋ ದೊರೆತಿದೆ.
ಮಾಹಿತಿಯ ಪ್ರಕಾರ, ಬೆಳಿಗ್ಗೆ ಅಜಿತ್ ಪವಾರ್ ತಮ್ಮ ಮನೆಯಿಂದ ಟ್ರೈಡೆಂಟ್ ಹೋಟೆಲ್‌ಗೆ ತೆರಳಿದರು. ಸ್ವಲ್ಪ ಸಮಯದ ನಂತರ, ಮಹಾರಾಷ್ಟ್ರದ ಬಿಜೆಪಿಯ ಉಸ್ತುವಾರಿ ಭೂಪೇಂದ್ರ ಯಾದವ್ ಅವರೊಂದಿಗೆ ಟ್ರೈಡೆಂಟ್ ಹೋಟೆಲ್‌ನಲ್ಲಿ ಉಪಾಹಾರ ಸೇವಿಸುತ್ತಿರುವ ಚಿತ್ರ ಹೊರಬಿದ್ದಿದೆ. ಉಭಯ ನಾಯಕರ ನಡುವೆ ಮಹತ್ವದ ಚರ್ಚೆ ನಡೆದಿರುವ ಸಾಧ್ಯತೆ ಇದ್ದು, ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮಹಾರಾಷ್ಟ್ರದ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಸೋಮವಾರ ಒಂದೂವರೆ ಗಂಟೆ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿದ್ದು ಇಂದು 10.30ಕ್ಕೆ ಪ್ರಕಟಿಸಲಿದೆ. ಈ ರೀತಿಯಾಗಿ ಬಿಜೆಪಿ-ಅಜಿತ್ ಪವಾರ್ ಅವರಿಗೆ ಒಂದು ದಿನದ ಪರಿಹಾರ ಸಿಕ್ಕಿತು. ಸಾಲಿಸಿಟರ್ ತುಷಾರ್ ಮೆಹ್ತಾ "ರಾಜ್ಯಪಾಲರು ಮೊನ್ನೆ ಮುಂಜಾನೆ ದಿಢೀರನೇ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮತ್ತು ಉಪ ಮುಖ್ಯಮಂತ್ರಿಯಾಗಿ ಎನ್ ಸಿಪಿಯ ಅಜಿತ್ ಪವಾರ್ ಗೆ ಪ್ರಮಾಣ ವಚನ ಬೋಧಿಸಿದ್ದು ಕ್ರಮಬದ್ದವಾಗಿಯೇ ಇತ್ತು ಎಂದು ಸಮರ್ಥಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಆಗಿ ಒಂದು ತಿಂಗಳಾದರೂ ಜನಪ್ರತಿನಿಧಿಗಳ ಸರ್ಕಾರ ಬಾರದಿದ್ದ ಕಾರಣಕ್ಕೆ ಲಘುಬಗೆಯಲ್ಲಿ ಪ್ರಮಾಣವಚನ ಬೋಧಿಸಿದ್ದಾರೆ. ಇದು ಅವರ ವಿವೇಚನಾಧಿಕಾರವಾಗಿದೆ ಎಂದು ಹೇಳಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದ ಮತ್ತು ದೇವೇಂದ್ರ ಫಡ್ನವಿಸ್ ಗೆ ಪ್ರಮಾಣವಚನಕ್ಕೆ ಆಹ್ವಾನಿಸಿದ ಪತ್ರಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಎನ್‌ಸಿಪಿಯ 54 ಶಾಸಕರನ್ನು ಬೆಂಬಲಿಸುವ ಪತ್ರವನ್ನು ಅಜಿತ್ ಪವಾರ್ ಅವರು ರಾಜ್ಯಪಾಲರಿಗೆ ಸಹಿ ಹಾಕಿದ್ದಾರೆ ಎಂಬುದು ಪತ್ರದಲ್ಲಿ ಸ್ಪಷ್ಟವಾಗಿದೆ" ಎಂದು ಮೆಹ್ತಾ ಹೇಳಿದ್ದಾರೆ.
"ನವೆಂಬರ್ 22 ರಂದು ಅಜಿತ್ ಪವಾರ್ ನೀಡಿದ ಪತ್ರದ ನಂತರವೇ ದೇವೇಂದ್ರ ಫಡ್ನವಿಸ್ ಅವರು ಸರ್ಕಾರ ರಚಿಸುವುದಾಗಿ ಹೇಳಿಕೊಂಡರು, ಜೊತೆಗೆ 11 ಸ್ವತಂತ್ರ ಮತ್ತು ಇತರ ಶಾಸಕರ ಬೆಂಬಲ ಪತ್ರವನ್ನು ಪತ್ರಕ್ಕೆ ಲಗತ್ತಿಸಲಾಗಿದೆ" ಎಂದು ಅವರು ಹೇಳಿದರು.
288 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 105 ಶಾಸಕರನ್ನು ಹೊಂದಿದ್ದರೆ, ಎನ್‌ಸಿಪಿ 54 ಸ್ಥಾನಗಳನ್ನು ಗೆದ್ದಿದೆ. ಇತರ 11 ಸ್ವತಂತ್ರ ಶಾಸಕರ ಬೆಂಬಲದ ನಂತರ ಅವರು 170 ಶಾಸಕರ ಬಲವನ್ನು ಹೊಂದಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ಇದರೊಂದಿಗೆ ಮಹಾರಾಷ್ಟ್ರ ರಾಜ್ಯಪಾಲ ಬಿ.ಎಸ್.ಕೊಶ್ಯರಿ ಅವರ ತೀರ್ಪಿನ ನ್ಯಾಯಾಂಗ ಪರಿಶೀಲನೆಗೆ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು.
"ಇದರ ನಂತರ ರಾಜ್ಯಪಾಲರು ರಾಷ್ಟ್ರಪತಿಗೆ ಮಾಹಿತಿ ನೀಡಿದರು. ಮಾಹಿತಿಯನ್ನು ಉಲ್ಲೇಖಿಸಿ ಅವರು ರಾಷ್ಟ್ರಪತಿಗಳ ಆಡಳಿತವನ್ನು ರಾಜ್ಯದಿಂದ ತೆಗೆದುಹಾಕುವಂತೆ ರಾಷ್ಟ್ರಪತಿಗೆ ವಿನಂತಿಸಿದರು" ಎಂದು ಮೆಹ್ತಾ ಹೇಳಿದರು.
170 ಶಾಸಕರ ಬೆಂಬಲ ಹೊಂದಿರುವ ಪಕ್ಷಕ್ಕೆ ರಾಜ್ಯಪಾಲರು ಒಲವು ತೋರಿದ್ದಾರೆ ಎಂದು ಬಿಜೆಪಿ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಹೇಳಿದ್ದಾರೆ. ಬೆಂಬಲ ಪತ್ರದಲ್ಲಿ ಶಾಸಕರ ಸಹಿ ನಕಲಿ ಎಂದು ಇತರ ಪಕ್ಷಗಳು ಎಂದಿಗೂ ಹೇಳಿಲ್ಲ ಎಂದು ರೋಹ್ಟಗಿ ತಿಳಿಸಿದರು.
ಅದೇ ಸಮಯದಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಕಾಂಗ್ರೆಸ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. 150 ಶಾಸಕರನ್ನು ಬೆಂಬಲಿಸುವ ಅಫಿಡವಿಟ್ ತನ್ನಲ್ಲಿದೆ ಎಂದು ಹೇಳಿದರು. ಶಿವಸೇನೆಗೆ ನೀಡಿದ ಭರವಸೆಯನ್ನು ಈಡೇರಿಸಲು ಬಿಜೆಪಿ ನಿರಾಕರಿಸಿದ್ದರಿಂದ ಶಿವಸೇನೆ ಜೊತೆ ಬಿಜೆಪಿಯ ಚುನಾವಣಾ ಪೂರ್ವ ಮೈತ್ರಿ ಮುರಿದಿದೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಅದೇ ಸಮಯದಲ್ಲಿ, ಕಾಂಗ್ರೆಸ್ ಮತ್ತು ಎನ್‌ಸಿಪಿ ಪರವಾಗಿ ಹಾಜರಾದ ಅಭಿಷೇಕ್ ಮನು ಸಿಂಗ್ವಿ, ಪ್ರಸ್ತುತ ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದಿರುವುದು 'ಪ್ರಜಾಪ್ರಭುತ್ವದ ವಂಚನೆ'. ಕವರ್ ಲೆಟರ್ ಇಲ್ಲದೆ ಶಾಸಕರುಗಳ ಸಹಿಯನ್ನು ರಾಜ್ಯಪಾಲರು ಹೇಗೆ ನಂಬುತ್ತಾರೆ? ಎಂದು ಪ್ರಶ್ನಿಸಿದರು.