ಮಹಾರಾಷ್ಟ್ರದಲ್ಲಿ ಕರೋನಾದ ಹೆಚ್ಚುತ್ತಿರುವ ವೇಗ ಎಲ್ಲರನ್ನೂ ಚಿಂತೆಗೀಡು ಮಾಡಿದ್ದು ರಾಜ್ಯದಲ್ಲಿ ಲಾಕ್‌ಡೌನ್ 2.0 ಅನ್ನು ವಿಧಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ಈ ಮಧ್ಯೆ ಜನರ ನಿರ್ಲಕ್ಷ್ಯದ ಬಗ್ಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಶಿಫಾರಸ್ಸಿನ ಮೇರೆಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಖಾತೆ ಹಂಚಿಕೆಗೆ ಅನುಮತಿ ನೀಡುತ್ತಿದ್ದಂತೆ, ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಶಾಸಕರಿಗೆ ಹಣಕಾಸು, ಗೃಹ ಮತ್ತು ಕಂದಾಯ ಮುಂತಾದ ಪ್ರಮುಖ ಸಚಿವಾಲಯಗಳನ್ನು ಹಂಚಿಕೆ ಮಾಡಲಾಯಿತು.
ಉದ್ಧವ್ ಠಾಕ್ರೆ ನೇತೃತ್ವದ ಒಕ್ಕೂಟದಲ್ಲಿ ಮುಂದಿನ ಉಪಮುಖ್ಯಮಂತ್ರಿಯಾಗಿ ತಮ್ಮ ಸೋದರಳಿಯ ಅಜಿತ್ ಪವಾರ್ ಅವರನ್ನು ನೇಮಕ ಮಾಡುವ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮಂಗಳವಾರ ನಿರಾಕರಿಸಿದ್ದಾರೆ.
ಉದ್ಧವ್ ಸರ್ಕಾರದ ಬಹುಮತ ಸಾಬೀತು, ಹೊಸ ಸ್ಪೀಕರ್ ಆಯ್ಕೆ, ವಿರೋಧ ಪಕ್ಷದ ಮುಖಂಡರ ಘೋಷಣೆ ಮತ್ತು ರಾಜ್ಯಪಾಲರ ಭಾಷಣಕ್ಕಾಗಿ ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ.
ಮಹಾರಾಷ್ಟದಲ್ಲಿ ಹಲವು ರಾಜಕೀಯ ಬೆಳವಣಿಗೆ ನಂತರ ಬಿಜೆಪಿ ಜೊತೆ ಸೇರಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅಜಿತ್ ಪವಾರ್ ಸೂಕ್ತ ಸಂಖ್ಯಾಬಲದ ಕೊರತೆಯಿಂದಾಗಿ 78 ಗಂಟೆಗಳ ನಂತರ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು. ಈಗ ಉದ್ಧವ್ ಠಾಕ್ರೆ ನೇತೃತ್ವದ ನೂತನ ಸರ್ಕಾರದಲ್ಲಿಯೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ತಡರಾತ್ರಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿಯಾದ ನಂತರ ಆದಿತ್ಯ ಠಾಕ್ರೆ, "ಮಹಾ ವಿಕಾಸ್ ಅಗಾಡಿ ಅವರು ಉದ್ಧವ್ ಠಾಕ್ರೆ ಸಾಹೇಬರನ್ನು ತಮ್ಮ ನಾಯಕರಾಗಿ ಆಯ್ಕೆ ಮಾಡಿದ್ದಾರೆ. ರಾಜ್ಯಪಾಲರು ಇಂದು ನಮಗೆ ಸಮಯವನ್ನು ನೀಡಿದರು ಮತ್ತು ಸರ್ಕಾರ ರಚಿಸುವ ಅವಕಾಶವನ್ನು ನಾವು ಬಯಸುತ್ತೇವೆ. ಜನರಿಗೆ ಮತ್ತು ರಾಜ್ಯಕ್ಕೆ ಸ್ಥಿರವಾದ ಸರ್ಕಾರವನ್ನು ಒದಗಿಸಿ ನಾವು ಜನಪರ ಕೆಲಸ ಮಾಡಲು ಬಯಸುತ್ತೇವೆ" ಎಂದರು.
ಕಳೆದ ವಾರಾಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯ ಅಚ್ಚರಿಯ ಪುನರಾಗಮನಕ್ಕೆ ಪ್ರಮುಖ ಕಾರಣವಾದ ಅಜಿತ್ ಪವಾರ್ ಮಂಗಳವಾರ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಸಿಎಂ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಳೆ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ NCP ನಾಯಕ ಅಜಿತ್ ಪವಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಕುರಿತು ಸೋಮವಾರ ಎರಡೂ ಕಡೆಯ ವಾದ-ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣದ ತನ್ನ ಆದೇಶವನ್ನು ಇಂದು ಬೆಳಿಗ್ಗೆ 10.30 ಕ್ಕೆ ಕಾಯ್ದಿರಿಸಿತ್ತು. ತೀರ್ಪು ಓದಿದ ನ್ಯಾಯಮೂರ್ತಿ ಎನ್.ವಿ.ರಮಣ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ ಆದಷ್ಟು ಬೇಗ ಬಹುಮತ ಸಾಬೀತು ಪಡಿಸಬೇಕು ಎಂಬ ಮಹತ್ವದ ಆದೇಶ ಹೊರಡಿಸಿದರು.
Maharashtra : ಮಾಹಿತಿಯ ಪ್ರಕಾರ, ಬೆಳಿಗ್ಗೆ ಅಜಿತ್ ಪವಾರ್ ತಮ್ಮ ಮನೆಯಿಂದ ಟ್ರೈಡೆಂಟ್ ಹೋಟೆಲ್‌ಗೆ ತೆರಳಿದರು. ಸ್ವಲ್ಪ ಸಮಯದ ನಂತರ, ಮಹಾರಾಷ್ಟ್ರದ ಬಿಜೆಪಿಯ ಉಸ್ತುವಾರಿ ಭೂಪೇಂದ್ರ ಯಾದವ್ ಅವರೊಂದಿಗೆ ಟ್ರೈಡೆಂಟ್ ಹೋಟೆಲ್‌ನಲ್ಲಿ ಉಪಾಹಾರ ಸೇವಿಸುತ್ತಿರುವ ಚಿತ್ರ ಹೊರಬಿದ್ದಿದೆ.
ರಾತ್ರೋರಾತ್ರಿ ಏನೆಲ್ಲಾ ಬೆಳವಣಿಗೆಗಳಾಗಬಹುದು. ನಸುಕಿನಲ್ಲೇ ಸರ್ಕಾರವೊಂದು ಕಣ್ಣು ಬಿಡಬಹುದು. ಚುನಾವಣಾ ಪೂರ್ವ ಮೈತ್ರಿ ಪುಡಿಪುಡಿಯಾಗಬಹುದು. ಚುನಾವಣೋತ್ತರ ಮೈತ್ರಿ ಹತ್ತಿಕ್ಕಲು ಷಡ್ಯಂತ್ರ ನಡೆಯಬಹುದು. ಈ ಎಲ್ಲಾ ಚಮತ್ಕಾರಗಳ ನಡುವೆಯೂ ದೇಶದ ಜನ ನಿರೀಕ್ಷೆ ಇಟ್ಟುಕೊಂಡಿರುವುದು ನ್ಯಾಯಾಂಗದ ಮೇಲೆ.
ಮಹಾರಾಷ್ಟ್ರ ನೀರಾವರಿ ಹಗರಣದ ಭಾಗವಾಗಿ ತನಿಖೆ ನಡೆಸುತ್ತಿರುವ ಅಂದಾಜು 3,000 ಪ್ರಕರಣಗಳಲ್ಲಿ ಕೇವಲ ಒಂಬತ್ತು ಪ್ರಕರಣಗಳಲ್ಲಿ ಅಜಿತ್ ಪವಾರ್ ವಿರುದ್ಧ ಏಜೆನ್ಸಿ ಸಾಕ್ಷ್ಯಾಧಾರಗಳು ಕಂಡುಬಂದಿಲ್ಲ ಎಂದು ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳದ ಮೂಲಗಳು ತಿಳಿಸಿವೆ.