ನಾಗ್ಪುರ: ಮಹಾರಾಷ್ಟ್ರದ  (Maharashtra) ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಭೀಕರ ಎನ್‌ಕೌಂಟರ್‌ನಲ್ಲಿ 26 ನಕ್ಸಲೀಯರು ಹತರಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವ ಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಶನಿವಾರ ಮುಂಜಾನೆ ಪ್ರಾರಂಭವಾದ ಎನ್‌ಕೌಂಟರ್ ಮಧ್ಯಾಹ್ನದವರೆಗೆ ಮುಂದುವರೆದಿದೆ. ಈ ಎನ್‌ಕೌಂಟರ್‌ನಲ್ಲಿ ಕೋಲ್ಗುಟ್-ದನಾತ್ ಅರಣ್ಯಗಳಲ್ಲಿ ತಲೆಮರೆಸಿಕೊಂಡಿದ್ದ 26 ನಕ್ಸಲೀಯರನ್ನು ಹೊಡೆದುರುಳಿಸಲಾಗಿದೆ.


COMMERCIAL BREAK
SCROLL TO CONTINUE READING

ಶನಿವಾರ ಬೆಳಗ್ಗೆ ಕಾಡಿನಲ್ಲಿ ಎನ್‌ಕೌಂಟರ್ ನಡೆದಿದೆ
ಜಿಲ್ಲೆಯ ಗ್ಯಾರಪಟ್ಟಿ ಪ್ರದೇಶದಲ್ಲಿ ನಕ್ಸಲೀಯರ ಚಲನವಲನದ ಬಗ್ಗೆ ಮಾಹಿತಿ ಲಭಿಸಿತ್ತು ಎಂದು ಗಡ್ಚಿರೋಲಿ ಎಸ್ಪಿ ಅಂಕಿತ್ ಗೋಯೆಲ್ ತಿಳಿಸಿದ್ದಾರೆ. ಇದಾದ ನಂತರ ಮಹಾರಾಷ್ಟ್ರ ಪೊಲೀಸ್ ನ (Maharashtra Police) ನಕ್ಸಲ್ ನಿಗ್ರಹ ವಿಶೇಷ ದಳದ ಸಿ-60 ಘಟಕ(C-60 Commando Unit) ತನ್ನ ಕಾರ್ಯಾಚರಣೆ ಆರಂಭಿಸಿದೆ. ಶೋಧ ಕಾರ್ಯಾಚರಣೆ ವೇಳೆ ಗ್ಯಾರಪಟ್ಟಿ ದಟ್ಟ ಅರಣ್ಯದಲ್ಲಿ ನಕ್ಸಲೀಯರನ್ನು ಸುತ್ತುವರೆಯಲಾಯಿತು, ದೀರ್ಘ ಕಾಲದವರೆಗೆ ನಡೆದ ಈ  ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಿಪಿಐ (ನಕ್ಸಲ್) ಮತ್ತು ಪೋಲೀಸರ ಮಧ್ಯೆ ಭಾರಿ ಗುಂಡಿನ ಕಾಳಗ ನಡೆದಿದೆ. 


ಉಗ್ರದಾಳಿಯಲ್ಲಿ ಅಸ್ಸಾಂ ರೈಫಲ್ಸ್ ನ ಕಮಾಂಡಿಂಗ್ ಆಫಿಸರ್ ಸೇರಿದಂತೆ ಅವರ ಕುಟುಂಬ ಹುತಾತ್ಮ

26 ನಕ್ಸಲೀಯರನ್ನು ಮಟ್ಟಹಾಕಲಾಗಿದೆ (Naxal Encounter)
ಪೊಲೀಸರ ಪ್ರಕಾರ, ಕಮಾಂಡೋ ಯೂನಿಟ್ ನ (C-60 Commando Unit) ಜಬರ್ದಸ್ತ್ ಆಕ್ಷನ್ ಬಳಿಕ ನಕ್ಸಲೀಯರು ಅಲ್ಲಿಂದ ನಿಧಾನಕ್ಕೆ ಕಾಲ್ಕಿತ್ತರು. ಇದಾದ ಬಳಿಕ ಅಲ್ಲಿ ಅಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ  26 ನಕ್ಸಲೀಯರು ಮೃತಪಟ್ಟಿರುವುದು ದೃಢಪಟ್ಟಿದೆ. ಈ ಎನ್‌ಕೌಂಟರ್‌ನಲ್ಲಿ 3 ಯೋಧರೂ ಕೂಡ ಗಾಯಗೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಕ್ಸಲೀಯರ ವಿರುದ್ಧ ನಡೆದ ಅತ್ಯಂತ ಯಶಸ್ವಿ ಎನ್‌ಕೌಂಟರ್ ಇದಾಗಿದೆ. ಇದರಲ್ಲಿ ಯೋಧರು ಯಾವುದೇ ರೀತಿಯ ಹೆಚ್ಚಿನ ನಷ್ಟವನ್ನು ಅನುಭವಿಸದೆಯೇ ಹಲವು ನಕ್ಸಲೀಯರನ್ನು ಮಟ್ಟಹಾಕಿದ್ದಾರೆ. 


ಇದನ್ನೂ ಓದಿ-Kangana Ranaut Challenge: ನನ್ನ ಈ ಪ್ರಶ್ನೆಗೆ ಉತ್ತರ ಕೊಡಿ, 'ಪದ್ಮಶ್ರೀ' ಪ್ರಶಸ್ತಿಯನ್ನು ಹಿಂದಿರುಗಿಸುವೆ


ಆ್ಯಂಟಿ ನಕ್ಸಲ್ ವಿಶೇಷ ಪಡೆ ಸಿ-60 ಯುನಿಟ್
ನಕ್ಸಲೀಯರನ್ನು ಎದುರಿಸಲು ಆಂಧ್ರಪ್ರದೇಶ ಪೊಲೀಸರು ಗ್ರೇಹೌಂಡ್ ಘಟಕವನ್ನು ರಚಿಸಿದ್ದಾರೆ  ಎಂಬುದು ಇಲ್ಲಿ ಉಲ್ಲೇಖನೀಯ. ಈ ಘಟಕದ ಯೋಧರು ನಕ್ಸಲೀಯರ ಬಟ್ಟೆಯಲ್ಲಿ ಕಾಡಿನಲ್ಲಿ ವಾಸಿಸುತ್ತಾರೆ ಮತ್ತು ಅಲ್ಲಿ ಅವರು ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾವೋವಾದಿಗಳನ್ನು ನಿರ್ಮೂಲನೆ ಮಾಡುತ್ತಾರೆ. ಅವರ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿ ಆ್ಯಂಟಿ ನಕ್ಸಲ್ ವಿಶೇಷ ಸ್ಕ್ವಾಡ್ ಸಿ-60 ಘಟಕವನ್ನು (C-60 Commando Unit) ಸಿದ್ಧಪಡಿಸಲಾಗಿದೆ. ಈ ಘಟಕದಲ್ಲಿ, ರಾಜ್ಯ ಪೊಲೀಸರಿಂದ 60 ರಾಪಿಡ್ ಸ್ಪೀಡ್ ಯೋಧರನ್ನು ಆಯ್ಕೆ ಮಾಡಿ ತಂಡದಲ್ಲಿ ಶಾಮೀಲುಗೊಳಿಸಲಾಗಿದೆ. ವಿಶೇಷ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ಹೊಂದಿರುವ ಈ ಸೈನಿಕರು ಕೂಡ ನಕ್ಸಲೀಯರಂತೆ ಕಾಡಿನಲ್ಲಿಯೇ ಉಳಿದು ತಮ್ಮ ಕೆಲಸವನ್ನು ಮಾಡುತ್ತಲೇ ಇರುತ್ತಾರೆ.


ಇದನ್ನೂ ಓದಿ-Jeff Bezos Predictions:ಬಾಹ್ಯಾಕಾಶದಲ್ಲಿ ಜನಿಸುವ ಮನುಷ್ಯರು ಭೂಮಿಗೆ ರಜೆ ಕಳೆಯಲು ಬರುತ್ತಾರಂತೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ