ಮುಂಬೈ: ಮಹಾರಾಷ್ಟ್ರ(Maharashtra) ದಲ್ಲಿ ಸರ್ಕಾರ ರಚನೆ ಕಸರತ್ತು ಅಂತಿಮ ಹಂತವನ್ನು ತಲುಪಿದೆ. ಶುಕ್ರವಾರ, ದಿನವಿಡೀ ಒಂದು ಸುತ್ತಿನ ಸಭೆಗಳು ನಡೆಯುವ ಸಾಧ್ಯತೆ ಇದೇ. ಮೂಲಗಳ ಪ್ರಕಾರ, ಕಾಂಗ್ರೆಸ್ (Congress), ಶಿವಸೇನೆ, ಎನ್‌ಸಿಪಿ ಮೂರು ಪಕ್ಷಗಳ ಮುಖಂಡರು ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚಿನೆಗೆ ಹಕ್ಕು ಮಂಡಿಸುವ ಸಾಧ್ಯತೆಯಿದೆ.


COMMERCIAL BREAK
SCROLL TO CONTINUE READING

ಶುಕ್ರವಾರ ಮಧ್ಯಾಹ್ನ 2 ಗಂಟೆಯ ನಂತರ ಕಾಂಗ್ರೆಸ್ (Congress), ಎನ್‌ಸಿಪಿ(NCP) ಮತ್ತು ಶಿವಸೇನೆ(Shiv Sena)ಯ ಮಹತ್ವದ ಸಭೆ ಮುಂಬೈನಲ್ಲಿ ನಡೆಯಲಿದ್ದು, ನಂತರ ಮೂರು ಪಕ್ಷಗಳ ಮೈತ್ರಿ ಘೋಷಿಸಲಾಗುವುದು ಮತ್ತು ಹೊಸ ಸರ್ಕಾರ ರಚಿಸುವ ಪ್ರಕ್ರಿಯೆಯು ಅದರೊಂದಿಗೆ ಪ್ರಾರಂಭವಾಗುತ್ತದೆ ಎಂದು ನಂಬಲಾಗಿದೆ. ಇದಕ್ಕೂ ಮುನ್ನ ಮಧ್ಯಾಹ್ನ 12.30 ಕ್ಕೆ ಧನಂಜಯ್ ಮುಂಡೆ ಅವರ ಮನೆಯಲ್ಲಿ ಎನ್‌ಸಿಪಿ, ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳ ಸಭೆ ನಡೆಯಲಿದೆ.


ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ:
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತು ಚರ್ಚಿಸಲು ಕಾಂಗ್ರೆಸ್ ಮುಖಂಡರಾದ ಕೆ.ಸಿ.ವೇಣುಗೋಪಾಲ್, ಅಹ್ಮದ್ ಪಟೇಲ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ಇಂದು ಶಿವಸೇನೆ ಮತ್ತು ಎನ್‌ಸಿಪಿ ಜೊತೆಗಿನ ಸಭೆಗಾಗಿ ಮುಂಬೈಗೆ ತೆರಳಲಿದ್ದಾರೆ.


ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಇಂದು ಆಯ್ಕೆಯಾಗಲಿದ್ದಾರೆ. ಹೊಸದಾಗಿ ಚುನಾಯಿತರಾದ ಕಾಂಗ್ರೆಸ್ ಶಾಸಕರ ಸಭೆಯನ್ನು ವಿಧಾನ ಭವನದಲ್ಲಿ ನಾಲ್ಕು ಗಂಟೆಗೆ ಕರೆಯಲಾಗಿದ್ದು, ಆ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಾರೆ.


ಇಂದು ಮತ್ತೆ ಶರದ್ ಪವಾರ್ ಅವರನ್ನು ಭೇಟಿಯಾಗಲಿರುವ ಉದ್ಧವ್ ಠಾಕ್ರೆ:
ಅದೇ ಸಮಯದಲ್ಲಿ ಶಿವಸೇನೆ ಶಾಸಕರ ಸಭೆ ಮಾತೋಶ್ರೀನಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತೊಮ್ಮೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಬಹುದು. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಉದ್ಧವ್ ಠಾಕ್ರೆ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದರು. ಉದ್ಧವ್ ಠಾಕ್ರೆ ಅವರೊಂದಿಗೆ ಆದಿತ್ಯ ಠಾಕ್ರೆ ಮತ್ತು ಸಂಜಯ್ ರೌತ್ ಉಪಸ್ಥಿತರಿದ್ದರು.


ಶರದ್ ಪವಾರ್, ಅಜಿತ್ ಪವಾರ್ ಅವರೊಂದಿಗಿನ ಈ ಸಭೆ ಸುಮಾರು 1 ಗಂಟೆಗಳ ಕಾಲ ನಡೆಯಿತು ಎಂದು ಹೇಳಲಾಗುತ್ತಿದೆ. ಆದರೂ ಸಭೆ ಬಳಿಕ ಉದ್ಧವ್ ಠಾಕ್ರೆ ಅವರಾಗಲಿ, ಸಂಜಯ್ ರೌತ್ ಅವರಾಗಲಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.