ನವದೆಹಲಿ: ಮಹಾರಾಷ್ಟ್ರರಾಜ್ಯವು ಕರೋನವೈರಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತೊಂದು ದೈನಂದಿನ ದಾಖಲೆಯನ್ನು ಸೃಷ್ಟಿಸಿದೆ, 6,330 ಹೊಸ ಸೋಂಕುಗಳು ಗುರುವಾರ ದಾಖಲಾಗಿದ್ದು, ಇದುವರೆಗೆ ದಾಖಲಾದ ಒಟ್ಟು ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 1,86,626 ಕ್ಕೆ ತಲುಪಿದೆ.


ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 5,493 ಹೊಸ Covid-19 ಪ್ರಕರಣ ದಾಖಲು, ಬೇರೆ ರಾಜ್ಯಗಳ ಸ್ಥಿತಿಗತಿ...


COMMERCIAL BREAK
SCROLL TO CONTINUE READING

ಗುರುವಾರದ ಆರೋಗ್ಯ ಬುಲೆಟಿನ್ ನಲ್ಲಿ 125 ಸಾವುಗಳು ಸಂಭವಿಸಿರುವ ವರದಿ ಆಗಿದೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 8,178 ಕ್ಕೆ ತಲುಪಿದೆ. COVID ಪ್ರಕರಣಗಳಲ್ಲಿ ಮಹಾರಾಷ್ಟ್ರದ ಹಿಂದಿನ ಅತ್ಯಧಿಕ ಏಕದಿನ ಸ್ಪೈಕ್ ಅನ್ನು ಬುಧವಾರ ದಾಖಲಿಸಲಾಗಿದ್ದು, 5,537 ಹೊಸ ಸೋಂಕುಗಳು ವರದಿಯಾಗಿದ್ದವು.125 ಸಾವುಗಳಲ್ಲಿ 110 ಕಳೆದ 48 ಗಂಟೆಗಳಲ್ಲಿ ಸಂಭವಿಸಿದ್ದು, ಉಳಿದವುಗಳನ್ನು ಕೊವಿಡ್ -19 ಸಾವು ನೋವುಗಳೆಂದು ರಾಜಿ ಮಾಡಿಕೊಳ್ಳಲಾಗಿದೆ.


ಆದಾಗ್ಯೂ, 8,018 ಕೊರೊನಾ ರೋಗಿಗಳು ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆಂದು ಘೋಷಿಸಲಾಗಿದ್ದು, ರಾಜ್ಯದ ಒಟ್ಟು ಚೇತರಿಕೆಯ ಸಂಖ್ಯೆಯನ್ನು 1,01,172 ಕ್ಕೆ ತಲುಪಿದೆ. ಇನ್ನೊಂದೆಡೆ ಮುಂಬೈನಲ್ಲಿ  ಗುರುವಾರ 1,554 ಹೊಸ ಪ್ರಕರಣಗಳು ಸೇರ್ಪಡೆಯಾದ ನಂತರ ಒಟ್ಟು ಸಂಖ್ಯೆ  80,262 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಇದು 57 ಹೊಸ ಸಾವುಗಳನ್ನು ದಾಖಲಿಸಿದ್ದು, ಸಾವಿನ ಸಂಖ್ಯೆ 4,686 ಕ್ಕೆ ತಲುಪಿದೆ ಎನ್ನಲಾಗಿದೆ.