ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸುವ ಒಂದು ದಿನ ಮುಂಚಿತವಾಗಿ ಕಾಂಗ್ರೆಸ್ 13 ಖಾತೆಗಳಿಗೆ ಒಪ್ಪಿಕೊಂಡಿದೆ. ಅದರಲ್ಲಿ 9 ಕ್ಯಾಬಿನೆಟ್ ಖಾತೆ ಹಾಗೂ 4 ರಾಜ್ಯ ಖಾತೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಈಗ ಕ್ಯಾಬಿನೆಟ್ ಸ್ಥಾನಗಳಿಗೆ ಸಂಭವನೀಯ ಹೆಸರುಗಳಾಗಿ ವಿಜಯ್ ನಾಮದೇವರಾವ್ ವಾಡೆಟ್ಟಿವಾರ್, ಯಶೋಮತಿ ಠಾಕೂರ್, ನಾನಾ ಪಟೋಲೆ, ವರ್ಷಾ ಗಾಯಕವಾಡ್, ಅಮೀನ್ ಪಟೇಲ್, ಅಶೋಕ್ ಚವಾಣ್, ಅಮಿತ್ ದೇಶ್ಮುಖ್, ಬಂಟಿ ಪಾಟೀಲ್, ವಿಶ್ವಜಿತ್ ಕದಮ್, ಕೆ.ಸಿ.ಪಡ್ವಿ ಅವರ ಹೆಸರುಗಳು ಕೇಳಿಬಂದಿವೆ. ಇನ್ನು ಶಿವಸೇನಾ ಕ್ರಮವಾಗಿ 16 ಮತ್ತು ಎನ್‌ಸಿಪಿ 15 ಸ್ಥಾನಗಳಿಗೆ ಒಪ್ಪಿಕೊಂಡಿವೆ ಎಂದು ತಿಳಿದುಬಂದಿದೆ. 288 ಹೊಸ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರಿಂದ ಬುಧವಾರ ರಾಜ್ಯದಲ್ಲಿ ಭಾರಿ ಬೆಳವಣಿಗೆಗಳು ನಡೆದವು. ಇಂದು ಎನ್ಸಿಪಿಯ ಸುಪ್ರಿಯಾ ಸುಳೆ ತಮ್ಮ ಸೋದರ ಸಂಬಂಧಿ ಅಜಿತ್ ಪವಾರ್ ಅವರನ್ನು ಅಪ್ಪುಗೆಯೊಂದಿಗೆ ಸ್ವಾಗತಿಸಿದ್ದು ವಿಶೇಷವಾಗಿತ್ತು.


ಪ್ರಾರಂಭದಲ್ಲಿ ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ನೀಡುವ ಮೂಲಕ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಕಾಲಾಂತರದಲ್ಲಿ ಅವರಿಗೆ ಸದಸ್ಯರ ಬೆಂಬಲ ಸಿಗದ ಹಿನ್ನಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬೆನ್ನಲ್ಲೇ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ 80 ಗಂಟೆಯಲ್ಲಿ ಸರ್ಕಾರ ಪತನಗೊಂಡಿತ್ತು.


ಇನ್ನೊಂದೆಡೆ ಈಗ ಮಹಾರಾಷ್ಟ್ರದಲ್ಲಿ ತ್ರಿವಳಿ ಪಕ್ಷಗಳು ಸರ್ಕಾರ ರಚನೆಗೆ ಸಿದ್ದತೆ ನಡೆಸಿರುವ ಬೆನ್ನಲ್ಲೇ  ಎನ್ಸಿಪಿ ಸದಸ್ಯರು ಈಗ ಅಜಿತ್ ಪವಾರ್ ಅವರಿಗೆ ಪ್ರಮುಖ ಹುದ್ದೆ ನೀಡಲು ಆಗ್ರಹಿಸಿದ್ದಾರೆ. ಎನ್ಸಿಪಿ ಶಾಸಕ ನವಾಬ್ ಮಲ್ಲಿಕ್ ಅವರು ಶರದ್ ಪವಾರ್ ಅವರನ್ನು ಟ್ವೀಟ್ ಮಾಡಿ ತಮ್ಮ ಒಪ್ಪಿಕೊಂಡವನು ಉತ್ತಮ ,ಆ ತಪ್ಪನ್ನು ಮನ್ನಿಸುವವನು ಸರ್ವೋತ್ತಮ ಎಂದು ಟ್ವೀಟ್ ಮಾಡಿದ್ದಾರೆ.