Maharashtra Coronavirus Update - ಮಹಾರಾಷ್ಟ್ರದಲ್ಲಿ ಲಾಕ್ಡೌನ್, ಕರ್ಫ್ಯೂ ವಿಧಿಸಿದರೂ ಕೂಡ 398 ಜನರ ಪ್ರಾಣ ತೆಗೆದ ಕೊರೊನಾ
Maharashtra Coronavirus Update - ಮಹಾರಾಷ್ಟ್ರ (Maharashtra)ದಲ್ಲಿ ಇಂದು ಕೊರೊನಾ ವೈರಸ್ ನ ದಾಖಲೆಯ 63, 729 ಹೊಸ ಪ್ರಕರಣಗಳು ವರದಿಯಾಗಿವೆ. ಇನ್ನೊಂದೆಡೆ ಕಳೆದ 24 ಗಂಟೆಗಳಲ್ಲಿ ಸುಮಾರು 400 ಜನರು ಈ ಮಾರಕ ವೈರಸ್ ದಾಳಿಗೆ ತುತ್ತಾಗಿದ್ದಾರೆ.
ಮುಂಬೈ: Maharashtra Coronavirus Update - ಲಾಕ್ ಡೌನ್ (Lockdown), ಕರ್ಫ್ಯೂ (Curfew) ಹೊರತಾಗಿಯೂ ಕೂಡ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ರಾಜ್ಯ ಆರೋಗ್ಯ ಇಲಾಖೆ ಇಂದು ರಾತ್ರಿ 8 ಗಂಟೆಗೆ ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 63, 729 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದೆ ದಿನದಲ್ಲಿ ಇದುವರೆಗಿನ ಅತಿ ದೊಡ್ಡ ಸಂಖ್ಯೆ ಇದಾಗಿದೆ.
ಇನ್ನೊಂದೆಡೆ ರಾಜ್ಯದಲ್ಲಿ ಕೊರೊನಾ (Coronavirus) ಮಾರಕ ದಾಳಿಗೆ ಇಂದು ಒಂದೇ ದಿನದಲ್ಲಿ 398 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಕೊರೊನಾ ದಾಳಿಗೆ ತುತ್ತಾದ ಒಟ್ಟು ಜನರ ಸಂಖ್ಯೆ 59,551ಕ್ಕೆ ತಲುಪಿದೆ. ಆರಂಭದಿಂದ ಇಂದಿನವರೆಗೆ 37,03,584 ಜನರು ಸೋಂಕಿಗೆ ಗುರಿಯಾಗಿದ್ದರೆ, 30,04,391 ರೋಗಿಗಳು ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.
ಇದನ್ನೂ ಓದಿ- Covid-19 Symptoms In Kids: ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೊಳಪಡಿಸಿ..!
ಮಹಾರಾಷ್ಟ್ರದಲ್ಲಿ ಗುರುವಾರ ಒಟ್ಟು 61 ಸಾವಿರದ 695 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, 349 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಬುಧವಾರ 58,952 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದರೆ, 278 ರೋಗಿಗಳು ಬಲಿಯಾಗಿದ್ದರು. ಮಂಗಳವಾರ 60,212, ಸೋಮವಾರ 51,751 ಹಾಗೂ ಭಾನುವಾರ ಅತ್ಯಧಿಕ 63,294 ಜನರು ಈ ಸೋಂಕಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ- Printing Currency Notes: Corona ಸಂಕಟ, ನಾಸಿಕ್ ಪ್ರೆಸ್ ನಲ್ಲಿ ನೋಟುಗಳ ಮುದ್ರಣ ಏಪ್ರಿಲ್ 30ರವರೆಗೆ ಸ್ಥಗಿತ
ಹೆಚ್ಚಾಗುತ್ತಿರುವ ಕೊರೊನಾ (Covid-19) ಪ್ರಕರಣಗಳ ಹಿನ್ನೆಲೆ ಮೇ 1, 2021ರ ಬೆಳಗ್ಗೆ 7 ಗಂಟೆಯವರೆಗೆ ಮಹಾರಾಷ್ಟ್ರದಲ್ಲಿ ಕರ್ಫ್ಯೂ (Curfew) ಘೋಷಿಸಲಾಗಿದೆ.
ಇದನ್ನೂ ಓದಿ - Covid 19 Most Risky Places: ಕರೋನ ಎರಡನೇ ಅಲೆಯಿಂದ ರಕ್ಷಣೆ ಬೇಕೇ? ಈ ಸ್ಥಳಗಳಿಂದ ದೂರವಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.