ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ 'ಶಾಸ್ತ್ರ ಪೂಜೆ' ಸಂಪ್ರದಾಯವನ್ನು 'ತಮಾಶಾ' ಎಂದು ಕರೆದಿದ್ದಕ್ಕಾಗಿ ಮುಂಬೈ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸಂಜಯ್ ನಿರುಪಮ್ ಅವರು ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಬುಧವಾರದಂದು ವಾಗ್ದಾಳಿ ನಡೆಸಿದ್ದಾರೆ.



COMMERCIAL BREAK
SCROLL TO CONTINUE READING

'ಖರ್ಗೆ ನಾಸ್ತಿಕ, ಆದರೆ ಪ್ರತಿಯೊಬ್ಬ ಕಾಂಗ್ರೆಸ್ ನಾಯಕ ನಾಸ್ತಿಕನಲ್ಲ ಮತ್ತು ಭಾರತದ ಸಂಪ್ರದಾಯವನ್ನು ಗೌರವಿಸುವ ಅನೇಕರು ಪಕ್ಷದಲ್ಲಿದ್ದಾರೆ ಎಂದು ಅವರು ಹೇಳಿದರು. “ಶಾಸ್ತ್ರ ಪೂಜೆಯ ಸಂಪ್ರದಾಯವನ್ನು ತಮಾಶಾ ಎಂದು ಕರೆಯಲಾಗುವುದಿಲ್ಲ. ನಮ್ಮ ದೇಶದಲ್ಲಿ ‘ಶಾಸ್ತ್ರ ಪೂಜೆ’ ಎಂಬ ಹಳೆಯ ಸಂಪ್ರದಾಯವಿದೆ. ಸಮಸ್ಯೆ ಏನೆಂದರೆ ಖರ್ಗೆ ಜಿ ನಾಸ್ತಿಕರಾಗಿದ್ದಾರೆ...ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ನಾಸ್ತಿಕರಲ್ಲ' ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.



ಫ್ರಾನ್ಸ್‌ನಲ್ಲಿ ಮಂಗಳವಾರದಂದು ನಡೆದ ಫೈಟರ್ ಜೆಟ್‌ನ ಹಸ್ತಾಂತರ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್  ಸಿಂಗ್ ಅವರು ರಫೇಲ್ ಶಾಸ್ತ್ರ ಪೂಜೆಯನ್ನು ನಡೆಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್ ಖರ್ಗೆ 'ಅಂತಹ 'ತಮಾಶಾ'  ಮಾಡುವ ಅಗತ್ಯವಿಲ್ಲ. ಈ ಹಿಂದೆ ಬೋಫೋರ್ಸ್ ಗನ್‌ನಂತಹ ಶಸ್ತ್ರಾಸ್ತ್ರಗಳನ್ನು ಖರೀದಿಸಿದಾಗ, ಯಾರೂ ಹೋಗಲಿಲ್ಲ ಮತ್ತು ಪ್ರದರ್ಶಿಸಲಿಲ್ಲ ' ಎಂದು ಖರ್ಗೆ ಎಎನ್‌ಐಗೆ ತಿಳಿಸಿದರು.